ಕೊಪ್ಪಳ:ಬಸವಣ್ಣನವರ ಅವಹೇಳನ ಖಂಡಿಸಿ ರವಿ ಹಂಜ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Koppal: Seize the work ‘Basava Mantapa’ and arrest the author; take action against the editor who provided a platform for it – Outrage from Basava-ideology organizations.

 

ಬಸವಣ್ಣನವರ ಅವಹೇಳನ ಖಂಡಿಸಿ ರವಿ ಹಂಜ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ


‘ಬಸವ ಮಂಟಪ’ ಕೃತಿ ಮುಟ್ಟುಗೋಲು ಹಾಕಿ, ಮಾರಾಟ ಮತ್ತು ಪ್ರಸಾರ ನಿಷೇಧಿಸುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ


ಕೊಪ್ಪಳ, ನ.20: ವಿಶ್ವಗುರು ಬಸವಣ್ಣನವರು ಹಾಗೂ ಲಿಂಗಾಯತ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆಗಳು ಮತ್ತು ಬರಹಗಳನ್ನು ಪ್ರಕಟಿಸಿರುವ ಆರೋಪದ ಹಿನ್ನೆಲೆಯಲ್ಲಿ ಲೇಖಕ ರವಿ ಹಂಜ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಸವತತ್ವ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಜಾಗತಿಕ ಅಂಗಾಯತ ಮಹಾಸಭಾ, ಕೊಪ್ಪಳ ಜಿಲ್ಲಾ ಘಟಕ ಸೇರಿದಂತೆ ಬಸವತತ್ವದ ವಿವಿಧ ಸಂಘಟನೆಗಳ ಮುಖಂಡರು ಸಲ್ಲಿಸಿರುವ ಮನವಿಯಲ್ಲಿ, ಬಸವಣ್ಣನವರ ವಿಚಾರಧಾರೆಗಳು, ವಚನ ಸಾಹಿತ್ಯ ಮತ್ತು ಲಿಂಗಾಯತ ಧರ್ಮದ ತತ್ವಾದರ್ಶಗಳಿಗೆ ಧಕ್ಕೆ ತರುವಂತಹ ಚಟುವಟಿಕೆಗಳನ್ನು ಖಂಡಿಸಲಾಗಿದೆ.
ಬಸವಣ್ಣನವರ ಸಾಮಾಜಿಕ ಕ್ರಾಂತಿ, ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳು ಜಗತ್ತಿಗೆ ಮಾದರಿಯಾಗಿವೆ. ಇಂತಹ ಮಹಾನ್ ದಾರ್ಶನಿಕರ ಕುರಿತು ಅವಹೇಳನಕಾರಿ ರೀತಿಯಲ್ಲಿ ಮಾತನಾಡುವುದು ಹಾಗೂ ಬರೆಯುವುದು ಸಮಾಜದ ಭಾವನೆಗಳಿಗೆ ಧಕ್ಕೆ ತರುವುದಾಗಿದೆ. ಇಂತಹ ಕೃತ್ಯಗಳಿಗೆ ವೇದಿಕೆ ಕಲ್ಪಿಸುವುದು ಕೂಡ ಖಂಡನೀಯ ಎಂದು ಸಂಘಟನೆಗಳ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
Total Views: 0
Share This Article
Leave a Comment