Breaking News

ಅಲೆಮಾರಿ ಜನಾಂಗಕ್ಕೆ ವಸತಿ ಸೌಲಭ್ಯಕ್ಕಾಗಿ ಮಾಡಿದಬಸವರಾಜ ಮ್ಯಾಗಳಮನಿ ಹೋರಾಟ ಯಶಸ್ವಿ.

Basavaraja Magalmani campaign was successful in fighting for housing facilities for the nomads.

ಜಾಹೀರಾತು

ಗಂಗಾವತಿ: ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಬಸವರಾಜ ಮ್ಯಾಗಳಮನಿ ಇಂದು ದಿನಾಂಕ: ೦೨.೧೦.೨೦೨೩ ಗಾಂಧಿ ಜಯಂತಿಯ ಪ್ರಯುಕ್ತ ನಗರಸಭೆಯಲ್ಲಿರುವ ಶಾಸಕರ ಕಛೇರಿ ಮುಂದೆ ಗಾಂಧಿ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ನಗರದ ಅಲೆಮಾರಿ ಜನಾಂಗದವರಿಗೆ ವಸತಿ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದ ೩೧ನೇ ವಾರ್ಡಿನಲ್ಲಿ ಅಲೆಮಾರಿ ಜನಾಂಗಕ್ಕೆ ಸೇರಿದ ಬುಡ್ಗ ಜಂಗಮ, ಸಿಂದೋಳ್ಳಿ, ಚೆನ್ನದಾಸರು, ಶಿಳ್ಳೆಕ್ಯಾತರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಇವರು ಸುಮಾರು ೪೦ ವರ್ಷಗಳಿಂದ ಚಿಕ್ಕದಾದ ಸ್ಥಳದಲ್ಲಿ ಚಿಕ್ಕ ಗುಡಿಸಲುಗಳಲ್ಲಿ ನೂರಕ್ಕೂ ಅಧಿಕ ಕುಟುಂಬಗಳು ವಾಸ ಮಾಡುತ್ತಿವೆ. ಚಿಕ್ಕದಾದ ಒಂದೇ ಗುಡಿಸಲಿನಲ್ಲಿ ೩-೪ ಕುಟುಂಬಗಳು ವಾಸವಿದ್ದು, ಮನೆಯಲ್ಲಿರಬೇಕಾದ ಅಡುಗೆ ಸ್ಥಳ, ಶೌಚಾಲಯ ಇತ್ಯಾದಿಗಳ ತೊಂದರೆಯಲ್ಲಿ ಮಕ್ಕಳು, ವೃದ್ಧರೊಂದಿಗೆ ವಾಸ ಮಾಡುತ್ತಿದ್ದು, ಚಳಿಗಾಲ ಮತ್ತು ಮಳೆಗಾಲದಲ್ಲಿ ಇವರ ಪರಿಸ್ಥಿತಿ ಹೇಳತೀರದು. ಇವರು ಕಸ ಆರಿಸುವುದು, ಚಿಂದಿ ಆರಿಸುವುದು, ಭಿಕ್ಷೆ ಬೇಡುವ ಕಾಯಕದಲ್ಲಿ ತೊಡಗಿರುತ್ತಾರೆ. ಇವರಿಗೆ ವಸತಿ ಸೌಕರ್ಯ ಕಲ್ಪಿಸಲೇಬೇಕೆಂದು ಹಲವಾರು ಬಾರಿ ಸ್ಥಳೀಯ ಜನಪ್ರತಿನಿಧಿಗಳಿಗೆ, ಸರ್ಕಾರಿ ಅಧಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಕಾರಣ ಈ ಉಪವಾಸ ಸತ್ಯಗ್ರಹ ನಡೆಸಿದ್ದೇವೆ ಎಂದು ತಿಳಿಸಿದರು.
ಉಪವಾಸ ಸತ್ಯಾಗ್ರಹದಲ್ಲಿ ಮ್ಯಾಗಳಮನಿ ಮನವಿಗೆ ಸ್ಪಂದಿಸಿದ ನಗರಸಭೆ ಪೌರಾಯುಕ್ತರಾದ ಆರ್. ವಿರುಪಾಕ್ಷಿಮೂರ್ತಿಯವರು ಅಲೆಮಾರಿ ಜನಾಂಗದವರಿಗೆ ವಸತಿ ಸೌಲಭ್ಯ ಕಲ್ಪಿಸುವುದಕ್ಕಾಗಿ ಶಾಸಕರ ಗಮನಕ್ಕೆ ತಂದು ಶೀಘ್ರದಲ್ಲಿಯೇ ಕ್ರಮಜರುಗಿಸಲಾಗುವುದು ಎಂದು ಭರವಸೆ ನೀಡಿದ ನಂತರ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.
ಈ ಸಂದರ್ಭದಲ್ಲಿ ಅಲೆಮಾರಿ ಜನಾಂಗದ ಮುಖಂಡರಾದ ಆರ್. ಕೃಷ್ಣ, ಮಂಜುನಾಥ, ಸರ್ವಾಂಗೀಣ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಜಡಿಯಪ್ಪ ಹಂಚಿನಾಳ, ಕೃಷ್ಣ ಮೆಟ್ರಿ, ದುರುಗೇಶ ಹೊಸಳ್ಳಿ, ವಾಸು ನಾಯಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

ರೈತರು ಆದುನಿಕ ತಂತ್ರಜ್ಞಾನ ಬಳಸಿ ಆದಾಯ ಹೆಚ್ವಿಸಿ ಕೊಳ್ಳಬೇಕು :ಕೃಷಿ ಸಚಿವಚಲುವರಾಯಸ್ವಾಮಿ ಕಿವಿಮಾತು ..

Farmers should use modern technology to increase their income: Agriculture Minister Chaluvarayaswamy ಹನೂರು :ಕಾಲವು ಬದಲಾದಂತೆ …

Leave a Reply

Your email address will not be published. Required fields are marked *