
Doctorate for Anil Kumar from the University of Sydney – A proud moment for Gangavathi
My choice: Congratulations to Magalamani
ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಅನಿಲ್ ಕುಮಾರ್‌ಗೆ ಡಾಕ್ಟರೇಟ್ – ಗಂಗಾವತಿಗೆ ಹೆಮ್ಮೆಯ ಕ್ಷಣ
: ಮ್ಯಾಗಳಮನಿ ಅಭಿನಂದನೆ
ಅನಿಲ್ ಕುಮಾರ್ ಹುನಕುಂಟಿಗೆ ಹೊಸಕೇರಾ ಪಿಎಚ್‌ಡಿ ಪ್ರದಾನ: ಮ್ಯಾಗಳಮನಿ ಅಭಿನಂದನೆ
ಗಂಗಾವತಿ, ಅ.11: ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಗಂಗಾವತಿಯ ಅನಿಲ್ ಕುಮಾರ್ ಹುನಕುಂಟಿ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿ ಪ್ರದಾನವಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಮ್ಯಾಗಳಮನಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅನಿಲ್ ಕುಮಾರ್ ಹುನಕುಂಟಿ ಅವರು ಗಂಗಾವತಿಯವರಾಗಿದ್ದು, ರಾಷ್ಟ್ರೀಯ ಬಸವದಳದ ಮುಖಂಡರು , ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಸಮಿತಿ ಸದಸ್ಯರು ಹಾಗೂ ಕಲ್ಯಾಣಸಿರಿ ಕನ್ನಡ ದಿನಪತ್ರಿಕೆ ಮತ್ತು ವೆಬ್ ನ್ಯೂಸ್‌ನ ಸಂಪಾದಕರಾದ ಹೆಚ್. ಮಲ್ಲಿಕಾರ್ಜುನ ಅವರ ಪುತ್ರರಾಗಿದ್ದಾರೆ. ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸಿ ಪಿಎಚ್‌ಡಿ ಪದವಿ ಪಡೆಯುತ್ತಿರುವ ಮೂಲಕ ಅನಿಲ್ ಕುಮಾರ್ ಅವರು ಗಂಗಾವತಿಯ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಅನಿಲ್ ಕುಮಾರ್ ಅವರ ಈ ಶೈಕ್ಷಣಿಕ ಸಾಧನೆ ಹೆಚ್. ಮಲ್ಲಿಕಾರ್ಜುನ ಅವರ ಸ್ನೇಹಿತರು, ಬಳಗದವರು ಹಾಗೂ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಎಲ್ಲರಿಗೂ ಸಂತಸ ತಂದಿದೆ. ಅವರ ಸಾಧನೆ ಯುವಜನತೆಗೆ ಪ್ರೇರಣೆಯಾಗಲಿ ಎಂದು ಮ್ಯಾಗಳಮನಿ ಆಶಿಸಿದರು.
ಅನಿಲ್ ಕುಮಾರ್ ಹುನಕುಂಟಿ (ಹೊಸಕೇರಾ) ಅವರಿಗೆ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಅವರ ಭವಿಷ್ಯದ ಶೈಕ್ಷಣಿಕ ಹಾಗೂ ವೃತ್ತಿಜೀವನ ಮತ್ತಷ್ಟು ಯಶಸ್ವಿಯಾಗಲಿ ಎಂದು ಬಸವರಾಜ್ ಮ್ಯಾಗಳಮನಿ ಶುಭ ಹಾರೈಸಿದ್ದಾರೆ.
.




