
Kavya Manikya' Award for the Work 'Naaku Taavina Tiruvu'
Honor for Gangavathi-based writer Sharanappa Thalli Kuppigudda
ನಾಕು ತಾವಿನ ತಿರುವು’ ಕೃತಿಗೆ ಕಾವ್ಯ ಮಾಣಿಕ್ಯ ಪ್ರಶಸ್ತಿ
ಗಂಗಾವತಿಯ ಸಾಹಿತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಅವರಿಗೆ ಗೌರವ
ಹಾಸನ, ಅ.11: ಕೊಪ್ಪಳ ಜಿಲ್ಲೆಯ ಗಂಗಾವತಿಯ ಸೃಜನಶೀಲ ಸಾಹಿತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಅವರ ‘ನಾಕು ತಾವಿನ ತಿರುವು’ ಕೃತಿಗೆ ಹಾಸನದ ಮಾಣಿಕ್ಯ ಪ್ರಕಾಶನ (ರಿ.) ವತಿಯಿಂದ ನೀಡಲಾಗುವ ದಿ. ಸಿ.ಪಿ. ನಾರಾಯಣ ಆಚಾರ್ಯ ಸ್ಮಾರಕ ದತ್ತಿ ಕಾವ್ಯ ಮಾಣಿಕ್ಯ ಪ್ರಶಸ್ತಿ ಹಾಗೂ ಬಹುಮಾನವನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಹಾಸನದ ಸಂಸ್ಕೃತ ಭವನದಲ್ಲಿ ಅ.11ರಂದು ನಡೆದ ಹನ್ನೊಂದನೇ ವರ್ಷದ ಮಾಣಿಕ್ಯ ಸಂಭ್ರಮ–2026 ಕಾರ್ಯಕ್ರಮದಲ್ಲಿ ನಾಡಿನ ಗಣ್ಯರು, ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗದ ಉಪನ್ಯಾಸಕಿ ಡಾ. ಹಸೀನಾ ಬೇಗಂ ಅವರು ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಾಡಿನ ವಿವಿಧ ಭಾಗಗಳ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿ ಯಶಸ್ವಿಯಾಯಿತು.
ಗಂಗಾವತಿಯ ಸೃಜನಶೀಲ ಸಾಹಿತಿಯೊಬ್ಬರ ಕೃತಿಗೆ ಪ್ರತಿಷ್ಠಿತ ದತ್ತಿ ಪ್ರಶಸ್ತಿ ದೊರೆತಿರುವುದು ಸ್ಥಳೀಯ ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ.




