Dr. Mamatha B. assumes charge as the In-charge Vice-Chancellor of Maharani Cluster University.

ಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರ

ಬೆಂಗಳೂರು: ಸೆ.19: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ನೂತನ ಪ್ರಭಾರ ಕುಲಪತಿಯಾಗಿ ಶ್ರೀಮತಿ ವಿ.ಎಚ್.ಡಿ. ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ನಿರ್ದೇಶಕರಾದ ಡಾ. ಮಮತಾ ಬಿ. ಅವರು ಅಧಿಕಾರ ಸ್ವೀಕರಿಸಿದರು.
ಇಲ್ಲಿಯವರೆಗೆ ಪ್ರಭಾರ ಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಅಶೋಕ ಎಸ್.ಬಿ. ಅವಧಿ ಶನಿವಾರ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಡಾ. ಮಮತಾ ಬಿ. ಅವರನ್ನು ನೂತನ ಪ್ರಭಾರ ಕುಲಪತಿಯಾಗಿ ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಹೋಮ್ ಸೈನ್ಸ್ ಫ್ಯಾಮಿಲಿ ರಿಸೋರ್ಸ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಪರಿಣತಿ:
ಹೋಮ್ ಸೈನ್ಸ್ ಫ್ಯಾಮಿಲಿ ರಿಸೋರ್ಸ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಪರಿಣತಿ ಹೊಂದಿದ್ದು, ಇವರು ಶೈಕ್ಷಣಿಕವಾಗಿ 29 ವರ್ಷಗಳ ಬೋಧನಾ ಅನುಭವವನ್ನು, 25ಕ್ಕೂ ಅಧಿಕ ಸಂಶೋಧನಾ ಪ್ರಕಟಣೆಗಳನ್ನು, 20ಕ್ಕೂ ಅಧಿಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದು, ಸಂಪಾದಿತ ಪುಸ್ತಕಗಳಲ್ಲಿ 5 ಅಧ್ಯಾಯಗಳನ್ನು ಹೊರತಂದಿದ್ದಾರೆ. 4 ಸಂಶೋಧನಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಇನ್ನು ವಿವಿಯ ಹೋಮ್ ಸೈನ್ಸ್ ಪದವಿ ವಿಭಾಗದ ಬೋರ್ಡ್ ಆಫ್ ಸ್ಟಡೀಸ್ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹಾಗೆ ಯುಜಿಸಿ ಪ್ರಾಯೋಜಿತ ಮೈನರ್ ಪ್ರಾಜೆಕ್ಟ್ ಒಂದನ್ನು ಪೂರ್ಣಗೊಳಿಸಿರುವುದು ವಿಶೇಷ.
ಈಗಾಗಲೇ ಪ್ರತಿಷ್ಠಿತ ವಿವಿಗಳಾದ ಬೆಂಗಳೂರು ನಗರ, ಮೈಸೂರು, ಮಂಗಳೂರು ಹಾಗೂ ನಿಟ್ಟೆ ವಿವಿ, ಮೌಂಟ್ ಕಾರ್ಮೆಲ್ ವಿವಿಗಳಲ್ಲಿ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಮತ್ತು ಬೋರ್ಡ್ ಆಫ್ ಸ್ಟಡೀಸ್ ಇಂತಹ ಅಧ್ಯಕ್ಷರಾಗಿ, ಸದಸ್ಯರಾಗಿ ಜವಾಬ್ದಾರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದೇ ಸಮಯದಲ್ಲಿ ನಿಕಟಪೂರ್ವ ಕುಲಪತಿ ಡಾ. ಅಶೋಕ ಎಸ್.ಬಿ, ಮೌಲ್ಯಮಾಪನ ಕುಲಸಚಿವ ಪ್ರೊ.ವೈ.ರಮೇಶ್, ಆಡಳಿತ ಕುಲಸಚಿವೆ ಶ್ರೀಮತಿ ಸೀಮಾ ಬಿ. ನಾಯಕ್,
ಪ್ರೊ.ಆರ್.ಕೆ.ವಾಣಿಶ್ರೀ, ವಿವಿಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಷನ್:
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ. ಅಶೋಕ ಎಸ್.ಬಿ ಅವರಿಂದ ನೂತನ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅವರು ಅಧಿಕಾರ ಸ್ವೀಕರಿಸಿದರು.
ಕೋಟ್:
ಮಹಾರಾಣಿ ಕ್ಲಸ್ಟರ್ ವಿವಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಲು, ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯದ ಅಭಿವೃದ್ಧಿ, ವಿದ್ಯಾರ್ಥಿ ಸ್ನೇಹಿ ವಾತಾವರಣ, ಸಿಬ್ಬಂದಿಯ ಪ್ರಗತಿಗೆ ಭವಿಷ್ಯದಲ್ಲಿ ಮತ್ತಷ್ಟು ಶ್ರಮಿಸುತ್ತೇನೆ.
- ಡಾ. ಮಮತಾ ಬಿ, ನೂತನ ಪ್ರಭಾರ ಕುಲಪತಿಗಳು, ಮಹಾರಾಣಿ ಕ್ಲಸ್ಟರ್ ವಿವಿ

