Yalburga: Acute drinking water crisis in Thalakeri-Chowdapura villages – Villagers outraged.ಯಲಬುರ್ಗಾ: ತಳಕೇರಿ-ಚೌಡಾಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ – ಗ್ರಾಮಸ್ಥರ ಆಕ್ರೋಶಕ್ಕೆ ಕಾರಣರಾದ PDO ರಾಮಣ್ಣ ಹೊಸಮನಿ



ಯಲಬುರ್ಗಾ: ತಾಲೂಕಿನ ತಳಕೇರಿ ಚೌಡಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ನಳ್ಳಿಗಳಿಗೆ ನೀರು ಬಿಟ್ಟು 20 ದಿನಗಳಾಗಿವೆ. ಅಧಿಕಾರಿಗಳಿಗೆ ಕೇಳಿದರೆ “ಮೋಟಾರ್ ರಿಪೇರಿ ಇದೆ, ಕರೆಂಟ್ ಇಲ್ಲ” ಎಂಬ ಸಬೂಬು ಹೇಳುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಮಹಿಳೆಯರು ದೂರದಿಂದ ತಲೆಯ ಮೇಲೆ ಕೊಡ ಹೊತ್ತು ನೀರು ತರುವ ಪರಿಸ್ಥಿತಿ ಬಂದಿದೆ.
ಈ ಬಗ್ಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಮಣ್ಣ ಹೊಸಮನಿ ಅವರನ್ನು ಕೇಳಿದರೆ ಕಚೇರಿಯಲ್ಲಿ ಸಿಗುವುದೇ ಇಲ್ಲ, ಫೋನ್ ಕೂಡ ಎತ್ತುವುದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿಗಳು ಮತ್ತು ತಾಲೂಕು ಪಂಚಾಯತ್ EO ಗಮನ ಹರಿಸಿ, ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಿ, ನಿರ್ಲಕ್ಷ್ಯ ತೋರುತ್ತಿರುವ PDO ರಾಮಣ್ಣ ಹೊಸಮನಿ ವಿರುದ್ಧ ಕ್ರಮ ಕೈಗೊಳ್ಳಬೇಕು, ಮುಂದಿನ ದಿನಮಾನಗಳಲ್ಲಿ ಗ್ರಾಮ ಪಂಚಾಯತಿ ಮುತ್ತಿಗೆ ಹಾಕುವೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ: ಶರಣಯ್ಯ ಹಿರೇಮಠ್



