ಕೊಪ್ಪಳ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರಿಂದ ಭೂಮಿ ಪೂಜೆ, ಉದ್ಘಾಟನೆ

H.Mallikarjun
H.Mallikarjun - Kalyanasiri
4 Min Read
oplus_0

Groundbreaking ceremony and inauguration by MLA K. Raghavendra Hitnal for various development works in Koppal city

 

oplus_0
ಕೊಪ್ಪಳ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರಿಂದ ಭೂಮಿ ಪೂಜೆ, ಉದ್ಘಾಟನೆ
ಕೊಪ್ಪಳ ಸೆಪ್ಟೆಂಬರ್ 03 (ಕರ್ನಾಟಕ ವಾರ್ತೆ): ಕೊಪ್ಪಳ ನಗರದ ಸಮಗ್ರ ಅಭಿವೃದ್ಧಿಗೆ ವೇಗ ನೀಡುವ ನಿಟ್ಟಿನಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ಗುರುವಾರ (ಸೆಪ್ಟೆಂಬರ್ 3ರಂದು) ನಗರದಾದ್ಯಂತ ಕೋಟ್ಯಂತರ ರೂಪಾಯಿ ಮೌಲ್ಯದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಮತ್ತು ಉದ್ಘಾಟನೆ ನೆರವೇರಿಸಿದರು.
ಬಳಿಕ ಹುಲಿಕೆರೆ ರಸ್ತೆಯ ಮೌಲಾನಾ ಆಜಾದ್ ಶಾಲೆಯ ಹತ್ತಿರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು, ಕೊಪ್ಪಳ ನಗರವನ್ನು ಇಡೀ ರಾಜ್ಯದಲ್ಲೇ ಒಂದು ಮಾದರಿ ನಗರವನ್ನಾಗಿ ರೂಪಿಸುವ ದೂರದೃಷ್ಟಿ ಹಾಗೂ ಸಂಕಲ್ಪ ನಮ್ಮದಾಗಿದೆ. ಇಂದು ನಗರದ 11 ವಾರ್ಡ್ಗಳಲ್ಲಿ ರೂ. 9.05 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಾಗಿದೆ. ನಗರೋತ್ಥಾನ ಯೋಜನೆಯಡಿ ನಗರದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದೆ. ಇದಲ್ಲದೆ ಸಮುದಾಯ ಭವನ ನಿರ್ಮಾಣಕ್ಕೆ ಸಮೀಕ್ಷೆ ನಡೆಸಿ ಹಂತ-ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುವುದು. ನಗರದಲ್ಲಿನ ಮೋತಿ ಕೆರೆ ಮತ್ತು ಹಂದಿ ಕೆರೆ ಅಭಿವೃದ್ಧಿಗೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ರೂ. 2.43 ಮತ್ತು 2.41 ಕೋಟಿ ವೆಚ್ಚದಲ್ಲಿ ಹಾಗೂ ಕೊಪ್ಪಳ ಕೋಟೆ ಸಂರಕ್ಷಣೆಗಾಗಿಯೂ ಕಾಮಗಾರಿ ಆರಂಭಿಸಲಾಗಿದೆ. ಜನಸಾಮಾನ್ಯರ ಕುಂದುಕೊರತೆಗಳಿಗೆ ಸ್ಪಂದಿಸಿ, ಕೊಪ್ಪಳದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಪ್ರತಿಯೊಂದು ಮನೆಗೆ ತಲುಪುತ್ತಿದ್ದು, ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ ರವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಪ್ರಸ್ತುತ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಕರಡಿ ಸಂಗಣ್ಣ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ್, ನಗರಸಭೆ ಮಾಜಿ ಅಧ್ಯಕ್ಷರಾದ ಅಮಜದ್ ಪಟೇಲ್, ನಗರಭೆ ಪೌರಯುಕ್ತರು ಆಗಿರುವ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಂಜುನಾಥ ಗುಂಡೂರ್, ತಹಶಿಲ್ದಾರರಾದ ಬಸವರಾಜ ತನ್ನಳ್ಳಿ ಸೇರಿದಂತೆ ಹಲವಾರು ಜನಪ್ರತಿನಿಧಿಗಳು, ಮುಖಂಡರು, ವಿವಿಧ ಇಲಾಖೆಗಳ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
*ಕೋಟ್ಯಂತರ ರೂಪಾಯಿ ಮೌಲ್ಯದ ವಿವಿಧ ಕಾಮಗಾರಿಗಳ ಭೂಮಿ ಪೂಜೆ, ಉದ್ಘಾಟನೆ:* ಕೊಪ್ಪಳ ಕೋಟೆ ರಸ್ತೆಯ ಗಾಯತ್ರಿ ಬಂಗಾರದ ಅಂಗಡಿ ಹತ್ತಿರ 2ನೇ ವಾರ್ಡ್ನಲ್ಲಿ ರೂ. 20 ಲಕ್ಷ ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ, 1ನೇ ವಾರ್ಡ್ನ ಮೆಹಬೂಬ್ ನಗರದಲ್ಲಿ ರೂ. 20 ಲಕ್ಷ ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ, 6ನೇ ವಾರ್ಡ್ನ ಸಮುದಾಯ ಭವನದ ಹತ್ತಿರ ರೂ. 20 ಲಕ್ಷ ಅನುದಾನದಲ್ಲಿ ರಾಜ ಕಾಲುವೆ ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ, ರೂ. 241 ಲಕ್ಷ ಅನುದಾನದಲ್ಲಿ ಹಂದಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ, 7ನೇ ವಾರ್ಡ್ನ ದಿಡ್ಡಿಕೇರಿ ಓಣಿಯಲ್ಲಿ ರೂ. 20 ಲಕ್ಷ ಅನುದಾನದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಮೌಲಾನಾ ಆಜಾದ್ ಶಾಲೆಯ ಹತ್ತಿರ ಜನಸಂಪರ್ಕ ಸಭೆ ನಡೆಸಿದರು.
ಬಳಿಕ ನಗರದ ತೇರಾ ಪಂಥ ಭವನದ ಹತ್ತಿರ ರೂ. 50 ಲಕ್ಷ ಅನುದಾನದಡಿ ಶ್ರೀ ಜೈನ ಶ್ವೇತಾಂಬರ ತೇರಾಪಂಥಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಭೂಮಿ ಪೂಜೆ, 4ನೇ ವಾರ್ಡ್ನ ಬಾಷಾಸಾಬ್ ಕಮ್ಮಾರ್ ಮನೆ ಹತ್ತಿರ  ರೂ. 25 ಲಕ್ಷ ಅನುದಾನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ, 3ನೇ ವಾರ್ಡ್ನ ಹಮಾಲರ ಕಾಲೋನಿಯಲ್ಲಿರುವ ಮಹಿಳೆಯರ ವಸತಿ ನಿಲಯದ ಹತ್ತಿರ ರೂ. 20 ಲಕ್ಷ ಅನುದಾನದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, ಹಮಾಲರ ಕಾಲೋನಿ ಅಶ್ಪಾಕ್ ಉಲ್ಲಾ ಖಾನ್ ಸರ್ಕಲ್ ಹತ್ತಿರ ಜನಸಂಪರ್ಕ ಸಭೆ ಕೈಗೊಂಡರು.
ನಂತರ 10ನೇ ವಾರ್ಡ್ನ ಬಾವಿ ಹತ್ತಿರ ರೂ. 20 ಲಕ್ಷ ಅನುದಾನದಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ, ರೂ. 243 ಲಕ್ಷ ಮೋತಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ, 5ನೇ ವಾರ್ಡ್ನ ನಾಗಪ್ಪ ಕಟ್ಟೆ ಹತ್ತಿರ ರೂ. 20 ಲಕ್ಷ ಅನುದಾನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ, 9ನೇ ವಾರ್ಡ್ನ ಬ್ರಹ್ಮಣವಾಡಿ ಹತ್ತಿರ ರೂ. 20 ಲಕ್ಷ ಅನುದಾನದಡಿ ನಿರ್ಮಿಸಲಾದ ಅಂಗನವಾಡಿ ಕೇಂದ್ರದ ಮತ್ತು ಅದೇ ವಾರ್ಡ್ನಲ್ಲಿ ರೂ. 16.53 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ 8ನೇ ವಾರ್ಡ್ನ ಗೌರಿ ಅಂಗಳದಲ್ಲಿ ರೂ. 20 ಲಕ್ಷ ಅನುದಾನದಲ್ಲಿ ಚರಂಡಿ ನಿರ್ಮಾಣ ಹಾಗೂ ಸ್ಲ್ಯಾಬ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿದರು.
ಇದಲ್ಲದೆ ನಗರದ ಐತಿಹಾಸಿಕ ಕೊಪ್ಪಳ ಕೋಟೆ ಸಂರಕ್ಷಣೆಗಾಗಿ ರೂ. 150 ಅನುದಾನದಡಿ ಕೊಪ್ಪಳ ಕೋಟೆ ಸಂರಕ್ಷಣಾ ಕಾಮಗಾರಿ ಭೂಮಿ ಪೂಜೆಯನ್ನು ಶಾಸಕರು ನೆರವೇರಿಸಿದರು.
Total Views: 0
ಜಾಹೀರಾತು
Share This Article