5 km Red Ribbon Marathon for HIV/AIDS awareness
203 students participated; winners in the men’s and women’s categories selected for the state level

Contents
ಎಚ್ಐವಿ/ಏಡ್ಸ್ ಜಾಗೃತಿಗಾಗಿ 5 ಕಿ.ಮೀ. ರೆಡ್ರಿಬ್ಬನ್ ಮ್ಯಾರಥಾನ್
203 ವಿದ್ಯಾರ್ಥಿಗಳ ಭಾಗಿ; ಪುರುಷ & ಮಹಿಳಾ ವಿಭಾಗದ ವಿಜೇತರು ರಾಜ್ಯಮಟ್ಟಕ್ಕೆ ಆಯ್ಕೆ
ಕೊಪ್ಪಳ ಸೆಪ್ಟೆಂಬರ್ 03 (ಕರ್ನಾಟಕ ವಾರ್ತೆ): ಯುವಜನರಲ್ಲಿ ಎಚ್ಐವಿ/ಏಡ್ಸ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ 5 ಕಿ.ಮೀ. ರೆಡ್ರಿಬ್ಬನ್ ಮ್ಯಾರಥಾನ್ ಸ್ಪರ್ಧೆಯನ್ನು ಸೆಪ್ಟೆಂಬರ್ 3ರಂದು ಕೊಪ್ಪಳದಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ವಿವಿಧ ಕಾಲೇಜುಗಳ ಒಟ್ಟು 203 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಮ್ಯಾರಥಾನ್ಗೆ ಕೊಪ್ಪಳ ಉಪವಿಭಾಗಾಧಿಕಾರಿ ಮೆಹಬೂಬ ಜಿಲಾನಿ ಖುರೇಶಿ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಶಶಿಧರ ಎ. ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿಗಳು, ಮಾತನಾಡಿ, ಮಾನವ ಜೀವನ ಅತ್ಯಮೂಲ್ಯವಾಗಿದ್ದು, ಯುವಜನರು ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಎಚ್ಐವಿ/ಏಡ್ಸ್ ಕುರಿತು ಸಮಗ್ರ ಮಾಹಿತಿ ಹೊಂದಬೇಕು. ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಆರೋಗ್ಯಕರ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಮಾತನಾಡಿ, ಯುವಜನರಲ್ಲಿ ಎಚ್ಐವಿ/ಏಡ್ಸ್ ಕುರಿತು ಜಾಗೃತಿ ಮೂಡಿಸಿ ಅವರನ್ನು ಸೋಂಕಿನಿಂದ ರಕ್ಷಿಸುವ ಉದ್ದೇಶದಿಂದ ಮ್ಯಾರಥಾನ್ ಆಯೋಜಿಸಲಾಗಿದೆ. ಯುವಜನರು ತಮ್ಮ ನಡವಳಿಕೆಗಳ ಮೇಲೆ ನಿಯಂತ್ರಣ ಹೊಂದಿ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ದೂರವಿದ್ದು, ಎಚ್ಐವಿ/ಏಡ್ಸ್ನಂತಹ ಸೋಂಕುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕು ಎಂದರು.
ಎಚ್ಐವಿ ಹರಡುವಿಕೆ, ಲಕ್ಷಣಗಳು ಹಾಗೂ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ಈ ಮಾಹಿತಿಯನ್ನು ಇತರರಿಗೂ ತಲುಪಿಸುವಂತೆ ಮನವಿ ಮಾಡಿದರು.
ಆಪ್ತಸಮಾಲೋಚಕ ಅಮರೇಶ್ ಮಾತನಾಡಿ, ಎಚ್ಐವಿ ಅಪಾಯದ ಮೌಲ್ಯಮಾಪನ ಹಾಗೂ ಪರೀಕ್ಷಾ ಸೌಲಭ್ಯಗಳ ಕುರಿತು ಆನ್ಲೈನ್ನಲ್ಲಿ ಮಾಹಿತಿ ಪಡೆಯಬಹುದಾಗಿದೆ. ಅಪಾಯದ ಮಟ್ಟವನ್ನು ತಿಳಿದುಕೊಳ್ಳಲು ಹಾಗೂ ಎಚ್ಐವಿ, ಎಸ್ಟಿಐ ಕುರಿತು ಮಾಹಿತಿ ಪಡೆಯಲು ಲಭ್ಯವಿರುವ ಮಾರ್ಗಗಳನ್ನು ಬಳಸಿಕೊಳ್ಳಬೇಕು. ಈ ಪ್ರಕ್ರಿಯೆ ಗೌಪ್ಯತೆಯಿಂದ ಕೂಡಿದ್ದು, ಭಯಪಡದೆ ಅಗತ್ಯವಿದ್ದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದರು.
*ಮ್ಯಾರಥಾನ್ ವಿಜೇತರು:* ಪುರುಷರ ವಿಭಾಗದಲ್ಲಿ ಹಿರೇಬೆಣಕನಕಲ್ನ ಎಂ.ಎಂ.ಡಿ.ಆರ್.ಎಸ್. ಪದವಿ ಪೂರ್ವ ಕಾಲೇಜಿನ ಸಂತೋಷ ಪ್ರಥಮ ಸ್ಥಾನ ಪಡೆದು ರೂ. 5,000 ಬಹುಮಾನ ಪಡೆದರು. ಇರಕಲಗಡ ಪದವಿಪೂರ್ವ ಕಾಲೇಜಿನ ಮಾರುತಿ ದ್ವಿತೀಯ ಸ್ಥಾನ (ರೂ. 3,500) ಹಾಗೂ ತಾವರಗೇರಾದ ಎಸ್.ಎಂ.ವಿ. ಪದವಿ ಪೂರ್ವ ಕಾಲೇಜಿನ ಶ್ರೀನಿವಾಸ ತೃತೀಯ ಸ್ಥಾನ (ರೂ. 2,500) ಪಡೆದರು.
ಅದರಂತೆ ಮಹಿಳೆಯರ ವಿಭಾಗದಲ್ಲಿ ಹಿರೇಬೆಣಕನಕಲ್ನ ಎಂ.ಎಂ.ಡಿ.ಆರ್.ಎಸ್. ಪದವಿ ಪೂರ್ವ ಕಾಲೇಜಿನ ಹೀನಾ ಕೌಸರ್ ಪ್ರಥಮ ಸ್ಥಾನ ಪಡೆದು ರೂ. 5,000 ಬಹುಮಾನ ಪಡೆದರು. ಕೊಪ್ಪಳದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಪಾರ್ವತಿ ದ್ವಿತೀಯ ಸ್ಥಾನ (ರೂ. 3,500) ಹಾಗೂ ಹಿರೇಬೆಣಕನಕಲ್ನ ಎಂ.ಎಂ.ಡಿ.ಆರ್.ಎಸ್. ಪದವಿ ಪೂರ್ವ ಕಾಲೇಜಿನ ರೇಖಾ ತೃತೀಯ ಸ್ಥಾನ (ರೂ. 2,500) ಪಡೆದರು. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕೊಪ್ಪಳ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ದೈಹಿಕ ನಿರ್ದೇಶಕರಾದ ಡಾ. ಮಂಜುನಾಥ ಆರೆಂಟನೂರು, ಜೈರಾಮ್ ಮರಡಿತೋಟ, ಡಾ. ಶೋಭಾ ಎಸ್.ಕೆ., ಡಾ. ವಿನೋದ ಮುದಿಬಸನಗೌಡ, ಡಾ. ಅನಿತಾ ಸೇರಿದಂತೆ ಡ್ಯಾಪ್ಕೋ ಸಿಬ್ಬಂದಿ, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Total Views:
0
ಜಾಹೀರಾತು