ಮುಂದಿನ ದಿನಾಂಕದಂದು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪತ್ರಿಕ ದಿನಾಚರಣೆ : ಅದ್ಯಕ್ಷರಾದ ಬಂಗಾರಪ್ಪ .ಸಿ.

On the next date, the oath-taking of the new office bearers and press day celebration: chaired by Bangarappa S.C.
ಹನೂರು :ಸಮಾಜದಲ್ಲಿ ಮಾದ್ಯಮಕ್ಕೆ ತನ್ನದೆ ಆದ ಒಂದು ಘನತೆ ಗೌರವವಿದೆ ಅದನ್ನು ಪತ್ರಕರ್ತರಾದವರು ತಮ್ಮ ಜವಾಬ್ದಾರಿಯನ್ನು ಅರಿತು ನಮ್ಮ ಸುತ್ತಮುತ್ತಲಿನ ಹಾಗು ಹೋಗುಗಳ ನಡುವೆ ನೈಜ ವರದಿಯನ್ನು ಬಿತ್ತರಿಸುವ ಮೂಲಕ ಪತ್ರಿಕಾ ಧರ್ಮವನ್ನು ಕಾಪಾಡುವ ಕೆಲಸ ಮಾಡಬೇಕಾಗಿದೆ ಎಂದು ಹನೂರು ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಂಗಾರಪ್ಪ ಸಿ. ರವರು ತಿಳಿಸಿದರು.
ಹನೂರು ಪಟ್ಟಣದ ತಾಲ್ಲೂಕು ಕೆಂದ್ರದಲ್ಲಿರುವ ಕರ್ನಾಟಕ ಪತ್ರಕರ್ತರ ಸಂಘದ ಕಛೇರಿಯಲ್ಲಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ನಡೆಯುವ ಪತ್ರಕರ್ತರ ದಿನಾಚರಣೆ ಹಾಗೂ ನೂತನ ಪಧಾದಿಕಾರಿಗಳ ಪದಗ್ರಹಣ ಕಾರ್ಯಕ್ರಮದ ನಿಮಿತ್ತವಾಗಿ ನಮ್ಮ ಸಂಘದ ವತಿಯಿಂದ ಕೊಡಮಾಡುವ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಸಾಧಕರಿಗೆ ಸನ್ಮಾನ ಮತ್ತು ಗಣ್ಯರ ಅಹ್ವಾನ ಸೇರಿದಂತೆ ಹಲವು ಕಾರ್ಯವನ್ನು ಮಾಡುವುದಿದೆ ಸದಸ್ಯರೆಲ್ಲ ಸೇರಿ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಸಹಕರಿಸಬೇಕಾಗಿದೆ ಎಂದರು .
ಇದೇ ಸಂದರ್ಭದಲ್ಲಿ ಸಾಲೂರು ಶ್ರೀ ಗಳು ,ಶಾಸಕರಾದ ಎಮ್ ಆರ್ ಮಂಜುನಾಥ್ , ದರ್ಶನ್ ದೃವನಾರಯಣ್ ,ಸಂಸದರಾದ ಸುನಿಲ್ ಬೋಸ್ ,ಮಾಜಿ ಶಾಸಕರುಗಳಾದ ಆರ್ ನರೇಂದ್ರ , ಪರಿಮಳ ನಾಗಪ್ಪ . ರಾಜಕೀಯ ಮುಖಂಡರುಗಳಾದ ಡಾಕ್ಟರ್ ದತ್ತೇಶ್ ಕುಮಾರ್ , ನಿಶಾಂತ್, ಜನದ್ವನಿ ವೆಂಕಟೇಶ್ , ಸರ್ಕಾರಿ ಅಧಿಕಾರಿಗಳು, ಸೇರಿದಂತೆ ಇನ್ನಿತರರು ಹಾಗೂ ಹತ್ತನೆ ತರಗತಿ ದ್ವೀತಿಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದವರನ್ನು ಪ್ರೋತ್ಸಾಹಿಸುವ ಕಾರ್ಯ ಹಾಗೂ ರೈತ ಸಂಘದ ಮುಖಂಡರು ಸೇರಿದಂತೆ ಸಮಾಜದ ಗಣ್ಯರನ್ನು ಆಹ್ವಾನಿಸಿ ಪತ್ರಿಕಾ ದಿನಾಚರಣೆ ಮಾಡಲು ತೀರ್ಮಾನಿಸಲಾಯಿತು.
ಇದೇ ವೇಳೆಯಲ್ಲಿ ಸಭೆಯಲ್ಲಿ ಅವಿರೋಧವಾಗಿ
ನೂತನ ಅಧ್ಯಕ್ಷರನ್ನಾಗಿ ಬಂಗಾರಪ್ಪ .ಸಿ .
ಉಪಾಧ್ಯಕ್ಷರಾಗಿ ಚೇತನ್ ಕುಮಾರ್ ಎಲ್ .
ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜು ಕಾಂಚಳ್ಳಿ .
ಸಹ ಕಾರ್ಯದರ್ಶಿಯಾಗಿ ಅಜೀತ್ ಸಿ.
ಖಜಾಂಚಿಯಾಗಿ ಕಾರ್ತಿಕ್ .ಪಿ.
ನಿರ್ದೇಶಕರಾಗಿ
ಸತೀಶ್ ಕುಮಾರ್ .ಕೆ
ಪ್ರಸನ್ನ ಕುಮಾರ್ ವಿ.
ರವಿ ಎಸ್ .
ಸದಸ್ಯರುಗಳಾಗಿ ಶಂಕರ್ ಎಂ.
ರವಿ ಡಿ.
ರವರು ಎಲ್ಲಾರು ಅವಿರೋಧವಾಗಿ ಸಭೆಯಲ್ಲಿ ಆಯ್ಕೆಮಾಡಲಾಗಿದೆ ಎಂದರು.

