ರೈತ ಸಂಘದಿಂದ ಸಂಸದರಿಗೆ ಮೂಲಭೂತ ಸೌಕರ್ಯಗಳಿಗಾಗಿ ಮನವಿ .ಅಮ್ಜಾದ್ ಖಾನ್ .

H.Mallikarjun
H.Mallikarjun - Kalyanasiri
1 Min Read

ರೈತ ಸಂಘದಿಂದ ಸಂಸದರಿಗೆ ಮೂಲಭೂತ ಸೌಕರ್ಯಗಳಿಗಾಗಿ ಮನವಿ .ಅಮ್ಜಾದ್ ಖಾನ್ .

ಜಾಹೀರಾತು

 

Farmers’ association appeals to the MP for basic facilities. Amjad Khan.


ರದಿ: ಬಂಗಾರಪ್ಪ .ಸಿ‌.‌
ಹನೂರು : ಮೂಲ ಸಿದ್ದಾಂತದಡಿ ರೈತ ಸಂಘದಿಂದ ಸಂಸದ ಸುನಿಲ್ ಬೋಸ್ ರವರಿಗೆ ಮನವಿ ಮಾಡಲಾಗಿದ್ದು
6 ಗ್ರಾಮಗಳಿಗೆ ಕುಡಿಯುವ ನೀರು, ವಿದ್ಯುತ್, ಹಕ್ಕುಪತ್ರ ನೀಡಲು ಆಗ್ರಹ ಮಾಡಲಾಯಿತು ಎಂದು ರೈತ ಸಂಘದ ಮುಖಂಡರಾದ ಅಮ್ಜಾದ್ ಖಾನ್ ತಿಳಿಸಿದರು.
ಹನೂರು ತಾಲ್ಲೂಕಿನ ಪಾಲರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನಿಯೋಗವು ಭೇಟಿ ಮಾಡಿ ಗೋಪಿನಾಥ ಗ್ರಾಮ ಪಂಚಾಯಿತಿಗೆ ಸೇರಿದ 6 ಗ್ರಾಮಗಳ ಜನರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿತು.ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮ್ಜದ್ ಖಾನ್ ಮತ್ತು ತಾಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ನೇತೃತ್ವದ ನಿಯೋಗವು ಸಂಸದರಿಗೆ ಮನವಿ ಪತ್ರ ನೀಡಿತು.

ಮನವಿಯಲ್ಲಿನ ಪ್ರಮುಖ ಬೇಡಿಕೆಗಳು:*
1. ಕುಡಿಯುವ ನೀರಿನ ಸೌಲಭ್ಯ – ಆಲಂಬಾಡಿ, ಮಾರಿಕೋಟೆ, ಜಂಬೂ ಪಟ್ಟಿ, ಪುಂಗಮಾತೂರು, ಅಕ್ಕಾಪಟ್ಟಿ, ಹುಡುಕಾಡು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು
2. ವಿದ್ಯುತ್ ಸಂಪರ್ಕ – ರಾತ್ರಿ ವೇಳೆ ಕರೆಂಟ್ ಸಮಸ್ಯೆ ಹಾಗೂ ಹೊಸ ಸಂಪರ್ಕ
3. ಹಕ್ಕುಪತ್ರ ವಿತರಣೆ – ವರ್ಷಗಳಿಂದ ವಾಸಿಸುತ್ತಿರುವ ಜನರಿಗೆ ಭೂಮಿಯ ಹಕ್ಕುಪತ್ರ

ರೈತ ಸಂಘದ ಮುಖಂಡರು ಮಾತನಾಡಿ, “ಈ 6 ಗ್ರಾಮಗಳು ಕಾಡಂಚಿನಲ್ಲಿದ್ದು, ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಕೂಡಲೇ ಕ್ರಮ ಕೈಗೊಂಡು ಜನರಿಗೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.
ಸಂಸದ ಸುನಿಲ್ ಬೋಸ್ ಅವರು ಮನವಿಯನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

Total Views: 0
Share This Article