Koppal City Council: Ban on production and sale of P.O.P Ganesh idols
ಕೊಪ್ಪಳ ನಗರಸಭೆ: ಪಿ.ಒ.ಪಿ ಗಣೇಶ ವಿಗ್ರಹಗಳ ಉತ್ಪಾದನೆ, ಮಾರಾಟ ನಿಷೇಧ
ಕೊಪ್ಪಳ ಆಗಸ್ಟ್ 28, (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ) ಹಾಗೂ ರಾಸಾಯನಿಕ ಅಂಶಗಳುಳ್ಳ ವಸ್ತುಗಳನ್ನು ಬಳಸಿ ತಯಾರಿಸಲಾದ ಗಣೇಶ ವಿಗ್ರಹಗಳ ಉತ್ಪಾದನೆ, ಸಂಗ್ರಹ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.
ಸೆಪ್ಟೆಂಬರ್ 14 ರಂದು ಜರುಗುವ ಗಣೇಶ ಚತುರ್ಥಿ ಪ್ರಯುಕ್ತ ನೀರಿನ ಮೂಲಗಳಲ್ಲಿ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡುವ ಸಂದರ್ಭದಲ್ಲಿ ಉಂಟಾಗುವ ಜಲಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಕೊಪ್ಪಳ ನಗರಸಭೆ ವತಿಯಿಂದ ಕೆಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ.
ಮಾರ್ಗಸೂಚಿಗಳು:
ರೋಗ ನಿರೋಧಕ ಶಕ್ತಿ ಇರುವ ಚಿಕ್ಕದಾದ ಮಣ್ಣಿನ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಬೇಕು. ಕೆರೆ, ಬಾವಿ ಹಾಗೂ ಇತರೆ ಜಲಮೂಲಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಗಣೇಶ ಮೂರ್ತಿ ಆರಾಧನೆಗಾಗಿ ಉಪಯೋಗಿಸುವ ಹೂವು, ಹಾರ, ವಸ್ತು, ಅಲಂಕಾರ ಸಾಮಗ್ರಿ ಇತ್ಯಾದಿ ವಸ್ತುಗಳನ್ನು ಜೈವಿಕವಾಗಿ ವಿಘಟನೆಯಾಗುವ ಪದಾರ್ಥಗಳನ್ನು ಬಳಸಿ ತಯಾರಿಸಬೇಕು. ಗಣೇಶ ಚತುರ್ಥಿ ಸಂದರ್ಭದಲ್ಲಿ ಪಿ.ಒ.ಪಿ ಗಣೇಶ, ಪ್ಲಾಸ್ಟಿಕ್ ಬಳಕೆ, ಪಟಾಕಿ ಸಿಡಿಸುವುದು, ಧ್ವನಿ ವರ್ಧಕಗಳ ಬಳಕೆ ಮತ್ತು ಕಸವನ್ನು ರಸ್ತೆಗೆ ಬಿಸಾಡುವುದು ಮುಂತಾದ ಚಟುವಟಿಕೆಗಳನ್ನು ಹಾಗೂ ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕೆರೆ, ಬಾವಿ, ಹೊಂಡ, ನದಿಯ ಹತ್ತಿರ ಮಣ್ಣಿನ ಗಣೇಶ ಮೂರ್ತಿಯನ್ನು ವಿಸರ್ಜಿಸಲು ನಗರ ಸ್ಥಳೀಯ ಸಂಸ್ಥೆಯಿAದ ಕೃತಕ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ(ಬ್ಯಾರಲ್‌ಗಳು ಹಾಗೂ ಕೃತಕ ಅಥವಾ ತಾತ್ಕಾಲಿಕ ನೀರಿನ ಹೊಂಡದ ವ್ಯವಸ್ಥೆ ಮಾಡಲಾಗುವುದು). ಮೂರ್ತಿ ವಿಸರ್ಜಿಸುವ ಸ್ಥಳಗಳಲ್ಲಿ ಘನತ್ಯಾಜ್ಯ ವಸ್ತುಗಳನ್ನು ಯಾವುದೇ ಕಾರಣಕ್ಕೂ ಸುಡುವಂತಿಲ್ಲ. ಸಾಧ್ಯವಾದಷ್ಟು ಅರಿಶಿಣ ಅಥವಾ ಜೇಡಿ ಮಣ್ಣಿನಿಂದ ತಯಾರಿಸಿದ ಚಿಕ್ಕದಾದ ಮತ್ತು ಬಣ್ಣ ರಹಿತ ಮೂರ್ತಿಗಳನ್ನು ಪೂಜಿಸಲು ಸೂಚಿಸಿದೆ. ಬಣ್ಣ ಇರುವ ಗಣೇಶನ ಮೂರ್ತಿಗಳನ್ನೇ ಪೂಜಿಸುವುದಾದರೆ ನೀರಿನಲ್ಲಿ ಕರಗುವ ಬಣ್ಣಗಳು ಮತ್ತು ವಿಷಯುಕ್ತವಲ್ಲದ ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಿ ತಯಾರಿಸಿದ ಮೂರ್ತಿಗಳನ್ನು ಬಳಸಿ ಜಲ ಮೂಲಗಳಿಗೆ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಸಾರ್ವಜನಿಕರು ಸಹಕರಿಸಬೇಕೆಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
Total Views:
0
ಜಾಹೀರಾತು


