ಗಂಗಾವತಿ ರಾಜಕೀಯದಲ್ಲಿ ಇಕ್ಬಾಲ್ ಅನ್ಸಾರಿ ಸ್ಫೋಟಕ ಹೇಳಿಕೆ,ಈಗ ಕಾಂಗ್ರೆಸ್‌ನಲ್ಲಿದ್ದೇನೆ; ಮುಂದೇನು ಎಂಬುದನ್ನು ಈಗ ಹೇಳುವುದು ಅಪ್ರಸ್ತುತ’’

H.Mallikarjun
H.Mallikarjun - Kalyanasiri
2 Min Read

Iqbal Ansari makes an explosive statement regarding Gangavathi politics: "I am currently in the Congress; it is irrelevant to say what comes next."

ಗಂಗಾವತಿ ರಾಜಕೀಯದಲ್ಲಿ ಇಕ್ಬಾಲ್ ಅನ್ಸಾರಿ ಸ್ಫೋಟಕ ಹೇಳಿಕೆ,ಈಗ ಕಾಂಗ್ರೆಸ್‌ನಲ್ಲಿದ್ದೇನೆ; ಮುಂದೇನು ಎಂಬುದನ್ನು ಈಗ ಹೇಳುವುದು ಅಪ್ರಸ್ತುತ’

ಜಾಹೀರಾತು


ಚುನಾವಣಾ ಸೋಲಿನ ಹಿಂದೆ ಷಡ್ಯಂತ್ರದ ಆರೋಪ; ಮುಂದಿನ ದಿನಗಳಲ್ಲಿ ಎಲ್ಲ ವಿಚಾರ ಬಹಿರಂಗಪಡಿಸುವ ಎಚ್ಚರಿಕೆ


ಗಂಗಾವತಿ: ಗಂಗಾವತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ತಮ್ಮ ಭವಿಷ್ಯದ ರಾಜಕೀಯ ನಡೆ, ಕಳೆದ ಚುನಾವಣೆಯ ಸೋಲು ಹಾಗೂ ತಮ್ಮ ವಿರುದ್ಧ ನಡೆದ ಪ್ರಚಾರದ ಕುರಿತು ಸ್ಫೋಟಕ ಹೇಳಿಕೆಗಳನ್ನು ನೀಡಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣರಾಗಿದ್ದಾರೆ.
“ನಾನು ಈಗ ಕಾಂಗ್ರೆಸ್‌ನಲ್ಲಿದ್ದೇನೆ. ಮುಂದೇನು ಎಂಬುದನ್ನು ಈಗಲೇ ಹೇಳುವುದು ಅಪ್ರಸ್ತುತ. ಚುನಾವಣೆಯಲ್ಲಿ ನಾನು ಸೋಲಲು ಪ್ರಚಾರಕ್ಕೆ ಹೋಗಿಲ್ಲ ಎಂದು ಹೇಳಿ ನನ್ನ ವಿರುದ್ಧ ಪ್ರಚಾರ ಮಾಡಿದವರು ಯಾರು ಎಂಬುದು ನನಗೆ ಗೊತ್ತಿದೆ.

ಅವರಲ್ಲಿ ಕೆಲವರು ಗಾಲಿ ಜನಾರ್ದನ ರೆಡ್ಡಿಯವರೊಂದಿಗೆ ಹಣ ಪಡೆದವರು. ಅವರಿಗೆ ವಹಿಸಿಕೊಟ್ಟ ಕೆಲಸವನ್ನು ಮಾಡದೆ ನನ್ನ ವಿರುದ್ಧ ಪ್ರಚಾರ ಮಾಡಿದ್ದಾರೆ. ಈ ಎಲ್ಲ ವಿಚಾರಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇನೆ” ಎಂದು ಇಕ್ಬಾಲ್ ಅನ್ಸಾರಿ ಆರೋಪಿಸಿದರು.
ಗಾಲಿ ಜನಾರ್ದನ ರೆಡ್ಡಿಯವರ ಆದಿತಿ ಫೈನಾನ್ಸ್ ಕುರಿತು ಮಾತನಾಡಿದ ಅವರು, “ಆದಿತಿ ಫೈನಾನ್ಸ್‌ನಿಂದ ಇನ್ನೂ ಜನರಿಗೆ ಹಣ ಬರಬೇಕಾಗಿದೆ. ಆ ಸಂಸ್ಥೆಯ ಮೂಲಕ ಜನರಿಗೆ ವಂಚನೆಯಾಗಿದೆ ಎಂಬ ಆರೋಪಗಳಿವೆ. ಇಂತಹವರಿಗೇ ಜನರು ಮತ ಹಾಕಿದ್ದಾರೆ” ಎಂದು ಹೇಳಿದರು.
ಗಾಲಿ ಜನಾರ್ದನ ರೆಡ್ಡಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಇಕ್ಬಾಲ್ ಅನ್ಸಾರಿ, “ಶಾಸಕರಾಗಿ ಜೈಲಿಗೆ ಹೋಗಿ ಬಂದಿರುವ ಗಾಲಿ ಜನಾರ್ದನ ರೆಡ್ಡಿ ಸುಳ್ಳುಗಾರರು. ಅವರನ್ನು ನಂಬಬೇಡಿ ಎಂದು ನಾನು ಹಿಂದೆಯೇ ಹೇಳಿದ್ದೆ. ಚುನಾವಣೆಗೆ ಮುನ್ನ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಹೋಗುವುದಿಲ್ಲ ಎಂದು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು. ಆದರೆ ಈಗ ಬಿಜೆಪಿ ಸೇರಿ ಬಳ್ಳಾರಿಗೆ ಪ್ರವೇಶಿಸಿದ್ದಾರೆ” ಎಂದು ಟೀಕಿಸಿದರು.
ತಮ್ಮ ವಿರುದ್ಧ ಚುನಾವಣೆಯಲ್ಲಿ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ ಅನ್ಸಾರಿ, ಈ ಕುರಿತು ಶಿವರಾಜ ತಂಗಡಗಿ ಸೇರಿದಂತೆ ತಾವು ಆರೋಪಿಸುತ್ತಿರುವ ಕೆಲವರ ವಿರುದ್ಧ ಆಡಿಯೋ ಸಂದೇಶಗಳ ಮೂಲಕ ಮತದಾರರಿಗೆ ಮಾಹಿತಿ ನೀಡಿದ್ದೇನೆ ಎಂದರು.
“ತಂಗಡಗಿಯವರಿಗೆ ನಾನು ಕಳುಹಿಸಿದ್ದ ಆಡಿಯೋ ಕಸಿವಿಸಿ ತಂದಿದೆ. ಮುಂದಿನ ದಿನಗಳಲ್ಲಿ ಚುನಾವಣೆಯ ಸಂದರ್ಭದಲ್ಲಿ ನಡೆದ ಇನ್ನಷ್ಟು ಷಡ್ಯಂತ್ರಗಳ ಕುರಿತು ಮಾಹಿತಿ ಹಾಗೂ ವಿವರಗಳನ್ನು ಬಹಿರಂಗಪಡಿಸುತ್ತೇನೆ” ಎಂದು ಇಕ್ಬಾಲ್ ಅನ್ಸಾರಿ ತಿಳಿಸಿದ್ದಾರೆ.
ಇಕ್ಬಾಲ್ ಅನ್ಸಾರಿ ಅವರ ಈ ಹೇಳಿಕೆ ಗಂಗಾವತಿ ಕ್ಷೇತ್ರದ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಅವರು ಬಹಿರಂಗಪಡಿಸುವುದಾಗಿ ಹೇಳಿರುವ ಮಾಹಿತಿಗಳ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.

Total Views: 2
ಜಾಹೀರಾತು
Share This Article