ಆರ್‌ಪಿಎಲ್‌ಐ ವ್ಯಾಪ್ತಿ ವಿಸ್ತರಣೆ: ಅಂಚೆ ಇಲಾಖೆಯಿಂದ ಮಹತ್ವದ ಆದೇಶ,ಗ್ರಾಮೀಣ ಅಂಚೆ ಜೀವ ವಿಮೆಗೆ ಹೊಸ ಸೌಲಭ್ಯ

H.Mallikarjun
H.Mallikarjun - Kalyanasiri
1 Min Read

Expansion of RPLI Coverage: Significant Order from the Postal Department; New Facility for Rural Postal Life Insurance

ಆರ್‌ಪಿಎಲ್‌ಐ ವ್ಯಾಪ್ತಿ ವಿಸ್ತರಣೆ: ಅಂಚೆ ಇಲಾಖೆಯಿಂದ ಮಹತ್ವದ ಆದೇಶ,ಗ್ರಾಮೀಣ ಅಂಚೆ ಜೀವ ವಿಮೆಗೆ ಹೊಸ ಸೌಲಭ್ಯ

ಕೊಪ್ಪಳ ಆಗಸ್ಟ್ 27 (ಕರ್ನಾಟಕ ವಾರ್ತೆ): ಅಂಚೆ ಜೀವ ವಿಮಾ ಕ್ಷೇತ್ರದಲ್ಲಿ ಗ್ರಾಮೀಣ ಅಂಚೆ ಜೀವ ವಿಮೆ (ಆರ್‌ಪಿಎಲ್‌ಐ) ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಅಂಚೆ ಜೀವ ವಿಮಾ ನಿರ್ದೇಶನಾಲಯ ಮಹತ್ವದ ಹೆಜ್ಜೆ ಇಟ್ಟಿದೆ. ಈ ಕುರಿತು ಆಗಸ್ಟ್ 14ರಂದು ಆದೇಶ ಹೊರಡಿಸಲಾಗಿದ್ದು, ಆರ್‌ಪಿಎಲ್‌ಐ ಪಡೆಯುವ ಅರ್ಹತಾ ಮಾನದಂಡವನ್ನು ವಿಸ್ತರಿಸಲಾಗಿದೆ.
ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಶಾಶ್ವತವಾಗಿ ವಾಸಿಸುವವರಿಗೆ ಮಾತ್ರ ಆರ್‌ಪಿಎಲ್‌ಐ ಸೌಲಭ್ಯ ಲಭ್ಯವಿತ್ತು. ಇದೀಗ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವುದು ಮಾತ್ರ ಕಡ್ಡಾಯ ಮಾನದಂಡವಾಗಿರುವುದಿಲ್ಲ. ಭಾರತದಲ್ಲಿರುವ ಯಾವುದೇ ಅಂಚೆ ಕಚೇರಿಯಲ್ಲಿ ಸಕ್ರಿಯ ಉಳಿತಾಯ ಖಾತೆ (ಆ್ಯಕ್ಟೀವ್ ಆಪರೇಟಿವ್ ಸೇವಿಂಗ್ಸ್ ಅಕೌಂಟ್ಸ್) ಹೊಂದಿರುವವರು ಅಥವಾ ಶೆಡ್ಯೂಲ್ಡ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವವರಿಗೂ ಆರ್‌ಪಿಎಲ್‌ಐ ವಿಮಾ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಬದಲಾವಣೆಯಿಂದ ಹೆಚ್ಚಿನ ಜನರಿಗೆ ಅಂಚೆ ಇಲಾಖೆಯ ಮೂಲಕ ವಿಮಾ ಸೌಲಭ್ಯ ಪಡೆಯಲು ಅವಕಾಶ ದೊರೆಯಲಿದ್ದು, ಭವಿಷ್ಯದ ಆರ್ಥಿಕ ಭದ್ರತೆಗೆ ಇದು ಮಹತ್ವದ ಹೆಜ್ಜೆಯಾಗಿದೆ. ಅರ್ಹ ಗ್ರಾಹಕರು ಈ ಹೊಸ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೊಪ್ಪಳ ವಿಭಾಗದ ಅಂಚೆ ಅಧೀಕ್ಷಕರಾದ ನಾಗರಾಜ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Total Views: 0
ಜಾಹೀರಾತು
Share This Article