No support for Karnataka bandh over Kaveri river water: Gondabala
ಕಾವೇರಿ ನದಿ ನೀರು ಕರ್ನಾಟಕ ಬಂದ್‌ಗೆಬೆಂಬಲ ಇಲ್ಲ : ಗೊಂಡಬಾಳ
ಕೊಪ್ಪಳ: ತಮಿಳುನಾಡಿಗೆ ಮಂಡ್ಯ ಜಿಲ್ಲೆಯ ಕಾವೇರಿ ನದಿ ನೀರು
ಬಿಡುಗಡೆ ಮಾಡುವ ಕುರಿತು ಎದ್ದಿರುವ ಸಮಸ್ಯೆ ಹಳೆಯ
ಸಂಗತಿಯಾಗಿದೆ, ಆದರೆ ತುಂಗಭದ್ರವೂ ಸಹ ದೊಡ್ಡ ನದಿ
ಮತ್ತು ಡ್ಯಾಂ ಆಗಿದ್ದು ಅದಕ್ಕಾಗಿ ದಕ್ಷಿಣ ಕರ್ನಾಟಕ ಎಂದೂ
ಮರುಗಿಲ್ಲವಾದ್ದರಿAದ ಆ. ೧೩ರ ಕಾವೇರಿ ಹೋರಾಟದ ಬಂದ್ ಬೆಂಬಲ
ಕೊಡುವದಿಲ್ಲ ಎಂದು ಬಲ್ಡೋಟಾ ವಿರೋಧಿ ಹೋರಾಟಗಾರ
ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಅವರು ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ರಾಜ್ಯವೇ
ಕಾವೇರಿ ನದಿಯನ್ನು ಜೀವ ನದಿ ಎಂದು ಕರೆದುಕೊಂಡು ಸದಾ ಬೆಂಬಲ
ನೀಡುತ್ತಲೇ ಬಂದಿದೆ, ಆದರೆ ಅದರಷ್ಟೇ ದೊಡ್ಡ ಮತ್ತು
ಬಹುರಾಜ್ಯ ಬಹು ಜಿಲ್ಲೆಗಳಿಗೆ ನೀರು ಕೊಡುವ ತುಂಗಭದ್ರಾ ಬಗ್ಗೆ
ಎಂದೂ ಚಕಾರ ಎತ್ತದ ಅವರ ಪರವಾಗಿ ಪದೇ ಪದೇ ನಿಲ್ಲಲು
ಆಗುವದಿಲ್ಲ. ಒಮ್ಮೆ ಕಾರ್ಖಾನೆಗಳ ವಿಷ ತ್ಯಾಜ್ಯದಿಂದ ಮುಕ್ತಿ
ಪಡೆಯಲು ಮತ್ತು ಹೂಳು ತೆಗೆಯುವ ಕಾರ್ಯಕ್ಕೆ ಅವರು
ಬೆಂಬಲ ಕೊಟ್ಟು ಹೋರಾಟ ಮಾಡಲಿ ಆಗ ನಾವೂ ಮತ್ತೆ ಅವರಿಗೆ ಬೆಂಬಲ
ಕೊಡುತ್ತೇವೆ, ಸದಾ ನಮ್ಮಿಂದ ಬೆಂಬಲ ಪಡೆಯುವುದೇ ಆದರೆ
ಅದಕ್ಕೆ ಅರ್ಥ ಇರುವದಿಲ್ಲ ಎಂದು ತಿಳಿಸಿದ್ದು, ಕೊಪ್ಪಳ ಜಿಲ್ಲೆ
ಸೇರಿದಂತೆ ಉತ್ತರ ಕರ್ನಾಟಕ ಈ ಬಂದ್ ಗೆ ಬೆಂಬಲ ಕೊಡಬಾರದು,
ಅದರ ಮೂಲಕ ಸದಾ ತಾರತಮ್ಯ ಮಾಡುವ ಅವರು ನಿಲುವು ಅವರಿಗೆ
ಅರ್ಥವಾಗಲಿ ಎಂದಿದ್ದಾರೆ.

