ದಲಿತ ಯುವಕ ಭೂಮಾನಂದ ಕೊಲೆ ಪ್ರಕರಣವನ್ನು ಉನ್ನತ ಮಟ್ಟದತನಿಖೆಗೆಆಗ್ರಹ.ಭೂಮಾನಂದ ಕುಟುಂಬಕ್ಕೆ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡಲು ದಲಿತ ಸೇನೆ ಒತ್ತಾಯ.

H.Mallikarjun
H.Mallikarjun - Kalyanasiri
3 Min Read

Demand for a high-level investigation into the murder of Dalit youth Bhumananda.
Dalit Sene urges the government to provide compensation and a government job to Bhumananda's family.





Demand for a high-level investigation into the murder of Dalit youth Bhumananda.
Dalit Sene urges the government to provide compensation and a government job to Bhumananda's family.





ದಲಿತ ಯುವಕ ಭೂಮಾನಂದ ಕೊಲೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಆಗ್ರಹ.
ಭೂಮಾನಂದ ಕುಟುಂಬಕ್ಕೆ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡಲು ದಲಿತ ಸೇನೆ ಒತ್ತಾಯ.

ಜಾಹೀರಾತು

ಗಂಗಾವತಿ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಮಾದಿಗ ಸಮಾಜದ ದಲಿತ ಯುವ ಮುಖಂಡ, ದಲಿತ ಸಮಾಜಕ್ಕಾಗಿ, ದೀನದಲಿತರ ಹಕ್ಕಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ, ಹಲವಾರು ಹೋರಾಟಗಳನ್ನು ಮಾಡಿದ ಭೂಮಾನಂದ ಅವರ ಹತ್ಯೆಯನ್ನು ಖಂಡಿಸಿ, ಈ ಕೊಲೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಿ, ಕೊಲೆಗಡುಕರಿಗೆ ಕಾನೂನು ರೀತ್ಯಾ ಕಠಿಣ ಶಿಕ್ಷೆ ವಿಧಿಸುವ ಮೂಲಕ, ಮೃತ ಯುವಕನ ಕುಟುಂಬಕ್ಕೆ ಸರ್ಕಾರ 50 ಲಕ್ಷ ಪರಿಹಾರ, 10 ಎಕರೆ ಜಮೀನು ಹಾಗೂ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ದಲಿತ ಸೇನೆಯ ಕೊಪ್ಪಳ ಜಿಲ್ಲಾಧ್ಯಕ್ಷರಾದ ಶಿವಮೂರ್ತಿ ಜೇಕಿನ್ ಪ್ರಕಟಣೆಯಲ್ಲಿ ತಿಳಿಸಿದರು.
ಅವರು ಆಗಸ್ಟ್‌-12 ಬುಧವಾರ ಗಂಗಾವತಿ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರರ ಮುಖಾಂತರ ಕರ್ನಾಟಕ ಸರ್ಕಾರದ ಘನತೆವೆತ್ತ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು, ಆಗಸ್ಟ್‌-4 ಮಂಗಳವಾರ ರಾತ್ರಿ ದೇವದುರ್ಗ-ರಾಯಚೂರು ಮುಖ್ಯ ರಸ್ತೆಯಲ್ಲಿರುವ ಸಂಕೇಶ್ವರಹಾಳ ಗ್ರಾಮದ ಹದ್ದಿನಾಳ ಕ್ರಾಸ್‌ಸಮೀಪ ಈ ಘಟನೆ ಜರುಗಿದ್ದು, ಮಾಹಿತಿಗಳ ಪ್ರಕಾರ ದುಷ್ಕರ್ಮಿಗಳು ಭೂಮಾನಂದ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಯೆ ನಡೆಸಿ, ಸ್ಥಳದಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಭೂಮಾನಂದ ಅವರನ್ನು ಅಲ್ಲಿನ ಸ್ಥಳೀಯರು ರಕ್ಷಿಸಲು ಪ್ರಯತ್ನಿಸಿದರೂ, ಅವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಎಂದು ತಿಳಿದುಬಂದಿರುತ್ತದೆ. ಈ ಕುರಿತು ಗಬ್ಬೂರು ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಲಾಗಿರುತ್ತದೆ. ಇದು ಕೇವಲ ಒಬ್ಬ ವ್ಯಕ್ತಿಯ ಮೇಲಿನ ದಾಳಿಯಲ್ಲ ಸಂವಿಧಾನದ ಮೇಲೆ ಸಮಾನತೆ ನ್ಯಾಯದ ಮೇಲೆ ನಡೆಸಿದಂತಹ ದಾಳಿಯಾಗಿದೆ, ಆದಷ್ಟು ಶೀಘ್ರದಲ್ಲಿ ಈ ಕೊಲೆ ಹಿಂದಿನ ಎಲ್ಲಾ ಆರೋಪಿಗಳನ್ನು ಪತ್ತೆ ಹಚ್ಚಿ ಯಡೆಮುರಿ ಕಟ್ಟಿ, ನ್ಯಾಯಾಂಗ ಬಂಧನಕ್ಕೊಳಪಡಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಜೊತೆಗೆ ಕೊಲೆಗೀಡಾದ ಯುವಕನ ಕುಟುಂಬಕ್ಕೆ 50 ಲಕ್ಷ ರೂ. ಗಳ ಪರಿಹಾರ, 10ಎಕರೆ ಜಮೀನು ಹಾಗೂ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಲು ಸರ್ಕಾರಕ್ಕೆ ನಮ್ಮ ದಲಿತ ಸೇನೆ ಒತ್ತಾಯಿಸುತ್ತದೆ ಎಂದರು.
ಸರ್ಕಾರವು ದಲಿತ ಸಮುದಾಯದ ಜೀವ, ಆಸ್ತಿ ಮತ್ತು ಗೌರವದ ರಕ್ಷಣೆಗೆ ವಿಶೇಷ ಗಮನಹರಿಸಬೇಕಾಗಿದೆ. ರಾಜ್ಯದಲ್ಲಿ ದಲಿತ ಮುಖಂಡರುಗಳು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಎದುರಾಗುತ್ತಿರುವ ಜೀವ ಬೆದರಿಕೆಗಳನ್ನು ಗಮನಿಸಿ ಅವರಿಗೆ ಸೂಕ್ತ ಪೊಲೀಸ್‌ ಭದ್ರತೆ ಒದಗಿಸಬೇಕು, ಈ ರೀತಿ ದಲಿತರ ಮೇಲಿನ ಹತ್ಯೆ ಪ್ರಕರಣಗಳನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ದಲಿತರ ಮೇಲಿನ ಶೋಷಣೆ ಹಾಗೂ ದೌರ್ಜನ್ಯಗಳನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಲಿತ ಸೇನೆಯ ಜಿಲ್ಲಾ ಕಾರ್ಯದರ್ಶಿಯಾದ ಮೌಲಾಲಿ ಕೆ., ಜಿಲ್ಲಾ ಉಪಾಧ್ಯಕ್ಷರಾದ ಸಲೀಂ, ಗಂಗಾವತಿ ತಾಲೂಕು ಉಪಾಧ್ಯಕ್ಷರಾದ ಅಜ್ಜು ರಬ್ಬಾನಿ, ಪದಾಧಿಕಾರಿಗಳಾದ ವಿರುಪಾಕ್ಷಿ ಭಜಂತ್ರಿ, ಶಾಷ ಮಹೆಬೂಬನಗರ, ಮಹೆಬೂಬ ಬಂಗಾರು, ಮೊಹಮ್ಮದ್‌ ಹಮಾಲಿ ಕ್ವಾಟ್ರಸ್‌, ದ್ಯಾಮೇಶ ವೆಂಕಟಗಿರಿ, ಭೀಮೇಶ ನಾಯಕ, ಕೃಷ್ಣ ಮುಂಡರಗಿ, ಸೈಯ್ಯದ ಹಸೇನ್‌, ಯಾಸೀನ್‌, ರಾಜಸಾಬ, ಹುಸೇನಸಾಬ ಮರಳಿ, ರಾಜಾಸಾಬ ಮರಳಿ, ಗಂಗಾಧರ ಬರಗೂರು, ರಮೇಶ ಹಮಾಲಿ ಕ್ವಾಟ್ರಸ್‌, ಫಯಾಜ್‌ ಅಹ್ಮದ್‌, ಸಮೀರ್‌ ಖುರೇಷಿ, ಆಸೀಫ್‌, ವಿಷ್ಣು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Total Views: 0
Share This Article