ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜನೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜನೆ

 

Organizing an essay competition for college students

ಕೊಪ್ಪಳ ಜುಲೈ 27, (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಕೊಪ್ಪಳದ ಗಾಂಧಿ ಬಳಗವು ಜಂಟಿಯಾಗಿ ಪದವಿ ಹಂತದಲ್ಲಿ ಓದುತ್ತಿರುವ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿದೆ.
ವಿದ್ಯಾರ್ಥಿಗಳು ‘ಮದ್ಯ ಮತ್ತು ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಯುವಜನತೆಯ ಪಾತ್ರ’ ಎಂಬ ವಿಷಯದ ಮೇಲೆ ಪ್ರಬಂಧ ಬರೆದು ಕಳಿಸಬೇಕು.
ವಿದ್ಯಾರ್ಥಿಗಳು ಪದವಿಯಲ್ಲಿ ಓದುತ್ತಿರಬೇಕು, ಕೈ ಬರವಣಿಗೆಯಲ್ಲಿ ಬರೆದು ಕಳಿಸಿದರೆ ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಪ್ರಬಂಧವು ಮೂರರಿಂದ ನಾಲ್ಕು ಪುಟದಲ್ಲಿ ಇರಬೇಕು, ಬಿಳಿಹಾಳೆಯಲ್ಲಿ ಒಂದು ಮಗ್ಗುಲಲ್ಲಿ ಮಾತ್ರ ಬರೆದಿರಬೇಕು.  ವಿದ್ಯಾರ್ಥಿಗಳು ಓದುತ್ತಿರುವ ಕಾಲೇಜಿನ ಹೆಸರು, ವಿಳಾಸ ಮತ್ತು ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆ ನಮೂದಿಸುವುದು ಕಡ್ಡಾಯ. ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ ರೂ.3,000, ದ್ವಿತೀಯ ರೂ.2,000 ಹಾಗೂ ತೃತೀಯ ಸ್ಥಾನ ಪಡೆದವರಿಗೆ ರೂ.1000 ನೀಡಲಾಗುತ್ತದೆ. ಕೊಪ್ಪಳ ನಗರ ಹಾಗೂ ಸುತ್ತಲಿನ ವಿದ್ಯಾರ್ಥಿಗಳು ನೇರವಾಗಿ ಈ ಕೆಳಗಿನ ವಿಳಾಸಕ್ಕೆ ತಲುಪಿಸಬಹುದು.
ಆಸಕ್ತ ವಿದ್ಯಾರ್ಥಿಗಳು ನಿಯಮಗಳನ್ನು ಮೀರದಂತೆ ಆಗಸ್ಟ್ 6 ರ ಒಳಗಾಗಿ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್, ಕನ್ನಡ ಉಪನ್ಯಾಸಕರು, ‘ಕನಸು’ ನಿಲಯ, ಮಹಾಂತಯ್ಯನಮಠ ಶಾಲೆ ಎದುರಿಗೆ, ಬಿ.ಟಿ.ಪಾಟೀಲ್ ನಗರ ಕೊಪ್ಪಳ-583231 ಇಲ್ಲಿಗೆ ಕಳುಹಿಸಬಹುದು. ಇನ್ನಷ್ಟು ಮಾಹಿತಿಗೆ 9448570340 (ಸಿದ್ದಲಿಂಗಪ್ಪ ಕೊಟ್ನೇಕಲ್) ಅಥವಾ ಶಂಕರಯ್ಯ ಅಬ್ಬಿಗೇರಿ (9945842014) ಅವರನ್ನು ಸಂಪರ್ಕಿಸಬಹುದು.
ಮದ್ಯ ಮುಕ್ತ ಗ್ರಾಮವನ್ನಾಗಿ ಕೊಪ್ಪಳ ತಾಲ್ಲೂಕಿನ ಹಟ್ಟಿ ಗ್ರಾಮವನ್ನು ಘೋಷಣೆ ಮಾಡಲಾಗಿದ್ದು, ಅಲ್ಲಿ ಆಗಸ್ಟ್ 16 ರಂದು ನಡೆಯುವ ಕಾರ್ಯಕ್ರಮದಲ್ಲಿ ಗ್ರಾಮಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅಂದಿನ ಕಾರ್ಯಕ್ರಮದಲ್ಲಿ ಪ್ರಬಂಧ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Total Views: 0
Share This Article