ಬಿಜೆಪಿ ಹೇಳಿಕೆಗಳ ಮೂಲಕ ಕಾಂಗ್ರೆಸ್ ಹತ್ತಿಕ್ಕಲು ಸಾಧ್ಯವಿಲ್ಲ : ಜ್ಯೋತಿ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

ಬಿಜೆಪಿ ಹೇಳಿಕೆಗಳ ಮೂಲಕ ಕಾಂಗ್ರೆಸ್
ಹತ್ತಿಕ್ಕಲು ಸಾಧ್ಯವಿಲ್ಲ : ಜ್ಯೋತಿ

 

Congress can’t be cornered just through BJP statements: Jyothi

 

ಕೊಪ್ಪಳ: ನೀಟ್ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ
ಕುರಿತು ಮೊದಲು ಧ್ವನಿ ಎತ್ತಿದ್ದು ಕಾಂಗ್ರೆಸ್, ನಂತರ ದೇಶದ
ಯುವಜನರು ನಡೆಸಿದ ಹೋರಾಟಕ್ಕೂ ಕಾಂಗ್ರೆಸ್ ಬೆಂಬಲ ನೀಡಿದ
ಹಿನ್ನೆಲೆ ಪ್ರಧಾನ್ ರಾಜೀನಾಮೆ ನೀಡಿದ್ದಾರೆ ಎಂದು ಜಿಲ್ಲಾ ಮಹಿಳಾ
ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಹೇಳಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಬಿಜೆಪಿ ಕೇವಲ
ಮಾಧ್ಯಮ ಹೇಳಿಕೆಗಳನ್ನು ನೀಡಿ ಜನರ ಹಾದಿ ತಪ್ಪಿಸಲು ಪ್ರಯತ್ನ
ಮಾಡುತ್ತಿದೆ. ದೇಶದಲ್ಲಿ ಯುವಜನರು ಬಿಜೆಪಿ ವಿರುದ್ಧ ತಿರುಗಿ
ಬಿದ್ದಿದ್ದಾರೆ, ಆರಂಭದಲ್ಲಿ ಕಾಂಗ್ರೆಸ್ ನೇತಾರ ವಿರೋಧ ಪಕ್ಷದ
ನಾಯಕ ರಾಹುಲ್ ಗಾಂಧಿ ಅವರು ಗಟ್ಟಿ ಧ್ವನಿಯಲ್ಲಿ ನೀಟ್
ಅಕ್ರಮದ ಕುರಿತು ಮಾತನಾಡಿದ್ದಾರೆ. ಯುವಜನರು ಹೋರಾಟ
ಕೈಗೆತ್ತಿಕೊಂಡಾಗಲೂ ರಾಹುಲ್ ಗಾಂಧಿ ಬೆಂಬಲ ನೀಡಿದ್ದಾರೆ,
ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡದಿದ್ದಾಗ
ಹೊರಗಡೆ ಮಾತನಾಡಿದ್ದಾರೆ, ವಿದ್ಯಾರ್ಥಿಗಳ ಸಮ್ಮುಖದಲ್ಲಿ
ಮಾತನಾಡಿದ್ದಾರೆ, ಮಾಧ್ಯಮಗೋಷ್ಠಿ ಮಾಡಿದ್ದಾರೆ, ರಾಹುಲ್ ಗಾಂಧಿ
ಯಾರಿಗೂ ಹೆದರಲ್ಲ ಎಂಬುದನ್ನು ಅನೇಕ ಸಲ ಸಾಬೀತು ಮಾಡಿದ್ದಾರೆ.
ಇನ್ನು ಬಿಜೆಪಿ ಜಿಲ್ಲಾಧ್ಯಕ್ಷರು ನೀಡಿರುವ ಹೇಳಿಕೆಯೇ ಅವರು
ಅಕ್ರÀಮ ಮಾಡಿದ್ದರ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ತೋರಿಸುತ್ತದೆ,
ಆದರೆ ಪ್ರಧಾನ್ ರಾಜೀನಾಮೆ ನೀಡಲು ಅನೇಕರು ಉಪವಾಸ
ಕೂಡಬೇಕಾಯಿತು, ಮಕ್ಕಳ ಮೇಲೆ ಲಾಠಿ ಪ್ರಹಾರ, ಆಶ್ರವಾಯು
ಸಿಡಿಸಿದ್ದು ಖಂಡನೀಯ. ಹೋರಾಟದಲ್ಲಿ ಕಾಂಗ್ರೆಸ್‌ನ ಜಯ ಎಂದು
ಬೀಗಿದ್ದಲ್ಲ, ಬಿಜೆಪಿ ತನ್ನ ಬಂಡತನವನ್ನು ಕೊನೆಗೂ ಬಿಡುವಂತೆ
ಮಾಡಿದ ಯುವಜನರ ಪರವಾಗಿ ಸಂಭ್ರಮಿಸಿದೆ, ಕಾಂಗ್ರೆಸ್ ಸದಾ
ನ್ಯಾಯದ ಪರ ಹಾಗೂ ಯುವಜನರ ಪರವಾಗಿದೆ. ವಿದ್ಯಾರ್ಥಿ ಮತ್ತು
ನಿರುದ್ಯೋಗಿಗಳಿಗೆ ಮೋಸ ಮಾಡಿದ ಮೋದಿ ಸರಕಾರದ ನಡೆ
ನಿಜವಾದ ಬಂಡತನ. ಅವರು ಹೇಳಿದೆ ೨೪ ಕೋಟಿ ಉದ್ಯೋಗ ಎಲ್ಲಿವೆ
ಎಂಬುದನ್ನು ಗುಳಗಣ್ಣವರ ಯುವಜನರಿಗೆ ತಿಳಿಸಲಿ. ಕಾಂಗ್ರೆಸ್
ಕಛೇರಿಗೆ ಕಲ್ಲು ಎಸೆದ ಎಂಎಲ್ಸಿ ನಡೆಯ ಬಗ್ಗೆ ತಮ್ಮ ನಿಲುವು
ಸ್ಪಷ್ಟಪಡಿಸಲಿ. ಸರಿಯಾದ ವಿದ್ಯುತ್ ಇಲ್ಲದಿದ್ದರೆ ಜನ ಮಕ್ಕಳನ್ನು
ಮಾಡುತ್ತಾರೆ, ಅದಕ್ಕೆ ದೇಶದ ಜನಸಂಖ್ಯೆ ಹೆಚ್ಚಾಗಿದೆ ಎಂಬ
ಮೂರ್ಖತನದ ಹೇಳಿಕೆ ನೀಡಿರುವ ನೂತನ ಶಿಕ್ಷಣ ಮಂತ್ರಿ ಪ್ರಹ್ಲಾದ್
ಜೋಷಿಯ ಅವಿವೇಕತನದ ಬಗ್ಗೆ ಸ್ಪಷ್ಟನೆ ನೀಡಲಿ. ವಿದ್ಯಾರ್ಥಿ
ಯುವಜನರಿಗೆ ಬಿಜೆಪಿ ಮಾಡಿದ ಹೊಸ ಯೋಜನೆಗಳ ಬಗ್ಗೆ ಮೊದಲು
ತಿಳಿಸಿ, ಅದು ಬಿಟ್ಟು ಇಂತಹ ಹೇಳಿಕೆ ಮೂಲಕ ನಾಯಕರಾಗಲು
ಹೊರಟಿದ್ದು ನಿಜವಾದ ಹಾಸ್ಯ ಪ್ರಸಂಗ ಎಂದು ಜ್ಯೋತಿ ದೂರಿದ್ದಾರೆ.

Total Views: 0
Share This Article