ಸಾಹಿತಿ ಎಸ್ ವಿ ಪಾಟೀಲ್ ಗುಂಡೂರ್ ಮನೆ ಮುಂದೆ ಒಳಚರಂಡಿ ಕೊಳಚೆಯಾಗಿ ಮಾರ್ಪಟ್ಟಿದೆ  ಈ ಅವ್ಯವಸ್ಥೆಗೆ ನಗರ ಸಭೆ ನಿರ್ಲಕ್ಷಕಾರಣ

H.Mallikarjun
H.Mallikarjun - Kalyanasiri
1 Min Read

The drainage system in front of litterateur S.V. Patil Gundur's house has turned into a source of filth; the City Council's negligence is the cause of this mess.

ಸಾಹಿತಿ ಎಸ್ ವಿ ಪಾಟೀಲ್ ಗುಂಡೂರ್ ಮನೆ ಮುಂದೆ ಒಳಚರಂಡಿ ಕೊಳಚೆಯಾಗಿ ಮಾರ್ಪಟ್ಟಿದೆ  ಈ ಅವ್ಯವಸ್ಥೆಗೆ ನಗರ ಸಭೆ ನಿರ್ಲಕ್ಷಕಾರಣ

ಜಾಹೀರಾತು

ಗಂಗಾವತಿ : ನಗರದ ಆನೆಗೊಂದಿ ರಸ್ತೆಯಲ್ಲಿರುವ    ವಿರುಪಾಪುರ ಪ್ರದೇಶದಲ್ಲಿ ವಾಸವಾಗಿರುವ ಸಾಹಿತಿ ಎಸ್‌ವಿ ಪಾಟೀಲ್ ಗುಂಡೂರು ಅವರ ಮನೆಯ ಮುಂದೆ ಇರುವ ಒಳಚರಂಡಿ ತುಂಬಿ ನೀರು ಹೊರಗಡೆ ಬರುತ್ತಿದ್ದು ಈ ಪ್ರದೇಶವಲ್ಲಾ ಕೊಳಚೆಯಾಗಿ ಮಾರ್ಪಟ್ಟಿದೆ ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದ್ದು ಕೂಡಲೇ ಒಳಚರಂಡಿಯನ್ನು ದುರಸ್ತಿ ಮಾಡಿ ನೀರು ಸರಾಗವಾಗಿ ಹರಿದು ಹೋಗಲು ಕ್ರಮ ಕೈಗೊಳ್ಳಬೇಕು ಎಂದು ಸಾಹಿತಿಗಳಾದ ಎಸ್ ವಿ ಪಾಟೀಲ್ ಗುಂಡೂರವರು ಗಂಗಾವತಿ ನಗರಸಭೆಗೆ ಒತ್ತಾಯಿಸಿದ್ದಾರೆ.

ಸುಮಾರು 570ಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಸಾಹಿತಿಗಳಾದ ಎಸ್ ವಿ ಪಾಟೀಲ್ ಗುಂಡೂರು ಅವರ ಮನೆ ಮುಂದೆ ಒಳಚರಂಡಿ ದುರಸ್ತಿ ಮಾಡಲು ಸುಮಾರು ಎಂಟು ತಿಂಗಳಿಂದ ನಗರಸಭೆಗೆ ಮನವಿಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಗಂಗಾವತಿ ನಗರದ ಸಂಪೂರ್ಣ ಸ್ವಚ್ಛತೆಗೆ ಶ್ರಮಿಸುತ್ತಿರುವ ನಗರ ಸಭೆಯವರು ಸಾಹಿತಿಗಳಾದ ಎಸ್ ವಿ ಪಾಟೀಲ್ ಗುಂಡೂರು ಮನೆ ಮುಂದೆ ಒಳಚರಂಡಿ ದುರಸ್ತಿಗೆ ನಿರ್ಲಕ್ಷ್ಯ ಮಾಡಿರುವುದು ಸರಿಯಲ್ಲ ಕೂಡಲೇ ನಗರಸಭೆಯವರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.

Total Views: 0
Share This Article