Krishna Naik has been selected as the Taluk President and Ambarish as the Youth Wing President of the Gangavathi All India Banjara Seva Sangha.
ಗಂಗಾವತಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದತಾಲೂಕು ಅಧ್ಯಕ್ಷರಾಗಿ ಕೃಷ್ಣ ನಾಯ್ಕ್, ಯುವ ಘಟಕದ ಅಧ್ಯಕ್ಷರಾಗಿ ಅಂಬರೀಶ್ ಆಯ್ಕೆ

ಗಂಗಾವತಿ: ಆಲ್ ಇಂಡಿಯಾ ಬಂಜಾರ ಸೇವಾ ಸಂಘದ (AIBSS) ಗಂಗಾವತಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇಂದು ಗಂಗಾವತಿಯ ಶ್ರೀ ಕೃಷ್ಣ ಹೋಟೆಲ್ ನಲ್ಲಿ ಯಶಸ್ವಿಯಾಗಿ ಜರುಗಿತು.
ಸಂಘದ ರಾಜ್ಯ ಅಧ್ಯಕ್ಷರಾದ ವಿಜಯ ಜಾದವ್ ಅವರ ಆದೇಶದ ಮೇರೆಗೆ, ಗಂಗಾವತಿ ತಾಲೂಕು ಬಂಜಾರ ಸೇವಾ ಸಂಘದ ತಾಲೂಕು ಅಧ್ಯಕ್ಷರಾಗಿ ಕೃಷ್ಣ ನಾಯ್ಕ್ (ವಿರುಪಾಪುರ ತಾಂಡಾ) ಹಾಗೂ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಅಂಬರೀಶ್ ವಿ. ಚವಾಣ್ (ವಿರುಪಾಪುರ ತಾಂಡಾ) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ನೇಮಕಾತಿ ಆದೇಶ ನೀಡಲಾಯಿತು. ನೂತನ ಪದಾಧಿಕಾರಿಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಂಘಟನೆಯ ಜವಾಬ್ದಾರಿಯನ್ನು ವಹಿಸಿಕೊಂಡು, ಸಮಾಜದ ಏಳಿಗೆ ಹಾಗೂ ಸಂಘದ ಬಲವರ್ಧನೆಗಾಗಿ ಸಕ್ರಿಯವಾಗಿ ಶ್ರಮಿಸಬೇಕೆಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ಈ ಮಹತ್ವದ ಆಯ್ಕೆ ಸಂದರ್ಭದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯ ಅಧ್ಯಕ್ಷರಾದ ವಿಜಯ ಜಾದವ್, ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಪಿ. ಲಕ್ಷ್ಮಣ್ ನಾಯ್ಕ್, ಶ್ರೀ ಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಪಾಂಡು ನಾಯ್ಕ್ ಮೇಸ್ತ್ರಿ, ಮುಖಂಡರುಗಳಾದ ವೆಂಕಟೇಶ್ ಚವಾಣ್, ಹನುಮಂತ ಜಾದವ್, ರವಿಚಂದ್ರ, ತಾಂಡಾ ನಿಗಮದ ರವಿ, ಕೃಷ್ಣ ನಾಯ್ಕ್, ವೆಂಕಟೇಶ್ ಜಾದವ್, ಮಂಜುನಾಥ್, ಕೆ.ಆರ್ ಸಂತೋಷ್ ಮತ್ತಿತರರು ಪಾಲ್ಗೊಂಡಿದ್ದರು.


