ವಿರುಪಾಪುರ ತಾಂಡಾದಲ್ಲಿರುವ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳಿಗೆ ತೆರವುಗೊಳಿಸಲು ನೀಡಿದ ನೋಟಿಸ ಹಿಂಪಡೆಯಲು ಒತ್ತಾಯಿಸಿ  ಮನವಿ

H.Mallikarjun
H.Mallikarjun - Kalyanasiri
3 Min Read
A memorandum urging the withdrawal of eviction notices issued to over 300 families in Virupapura Tanda.

ವಿರುಪಾಪುರ ತಾಂಡಾದಲ್ಲಿರುವ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳಿಗೆ ತೆರವುಗೊಳಿಸಲು ನೀಡಿದ ನೋಟಿಸ ಹಿಂಪಡೆಯಲು ಒತ್ತಾಯಿಸಿ ಮನವಿ

ಜಾಹೀರಾತು

ವಿರುಪಾಪುರ ತಾಂಡ ನಿವಾಸಿಗಳನ್ನು ಏಕಾಏಕಿ ಒಕ್ಕಲೆಬ್ಬಿಸುತ್ತಿರುವ ಕ್ರಮವನ್ನು ಮರುಪರಿಶೀಲಿಸಿ, ಇಲ್ಲಿನ ನಿವಾಸಿಗಳಿಗೆ ಅನ್ಯಾಯವಾಗದಂತೆ ಕ್ರಮವಹಿಸುವುದಾಗಿ ಭರವಸೆ ನೀಡಿದ
ತಹಶೀಲ್ಧಾರ ಯು. ವಸಂತಕುಮಾರಿ.

ಗಂಗಾವತಿ: ರಾಜ್ಯ ಸರ್ಕಾರ ಕೆರೆ ಸಂರಕ್ಷಣೆ ಹಾಗೂ ಕೆರೆ ಒತ್ತುವರಿ ತೆರವು ನೆಪದಲ್ಲಿ ಗಂಗಾವತಿ ನಗರದ ವಿರುಪಾಪುರ ತಾಂಡಾದಲ್ಲಿರುವ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳಿಗೆ ತೆರವುಗೊಳಿಸುವುದಾಗಿ ನೋಟಿಸು ಜಾರಿ ಮಾಡಲಾಗಿತ್ತು. ಸದರಿ ತೆರವು ಕಾರ್ಯಾಚರಣೆಯನ್ನು ಹಿಂಪಡೆಯಲು ಒತ್ತಾಯಿಸಿ ವಿರುಪಾಪುರ ತಾಂಡಾದ ನಿವಾಸಿಗಳು ತಹಶೀಲ್ದಾರರಿಗೆ ಮನವಿ ಪತ್ರದ ಮೂಲಕ ಒಕ್ಕೋರಲಿನಿಂದ ಆಗ್ರಹಿಸಿದಾಗ ತಹಶೀಲ್ದಾರರು ಏಕಾಏಕಿ ಒತ್ತುವರಿಯನ್ನು ತಡೆಹಿಡಿದು, ಮತ್ತೊಮ್ಮೆ ದಾಖಲೆಗಳನ್ನು ಮರುಪರಿಶೀಲಿಸಲಾಗುವುದು ಹಾಗೂ ಇಲ್ಲಿನ ನಿವಾಸಿಗಳಿಗೆ ಯಾವುದೇ ರೀತಿಯಲ್ಲಿ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯ ಅಧ್ಯಕ್ಷರಾದ ವಿಜಯ ಜಾದವ್ ತಿಳಿಸಿದರು.
ಅವರು ಜುಲೈ-4 ರಂದು ಗಂಗಾವತಿ ತಹಶೀಲ್ದಾರರಾದ ಯು. ವಸಂತಕುಮಾರಿ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ವಿರುಪಾಪುರ ತಾಂಡಾದಲ್ಲಿ 2-3 ತಲೆಮಾರುಗಳು ಅಂದರೆ ಸುಮಾರು 100 ರಿಂದ 150 ವರ್ಷಗಳಿಂದಲೂ ಇಲ್ಲಿ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳ ನಿವಾಸಿಗಳು ಜೀವಿಸುತ್ತಿದ್ದು, ಸದರಿ ನಿವಾಸಿಗಳ ಪೈಕಿ ಕೆಲವರಿಗೆ 1980 ರಲ್ಲಿ ಸರ್ಕಾರದಿಂದ ಇಂದಿರಾಗಾಂಧಿ ವಸತಿ ಯೋಜನೆಯಡಿ ಹಂಚಿನ ಮನೆಗಳನ್ನು ನಿರ್ಮಿಸಿಕೊಡಲಾಗಿರುತ್ತದೆ. ಅಷ್ಟಲ್ಲದೇ ಇಲ್ಲಿನ ಬಹುತೇಕ ನಿವಾಸಿಗಳು ಲಂಬಾಣಿ ಸಮುದಾಯದ ಹಾಗೂ ಬಡವರ್ಗದ ಕಟ್ಟಡ ಕೆಲಸಗಳ ಕೂಲಿ ಕಾರ್ಮಿಕರಾಗಿರುತ್ತಾರೆ. ಮುಂದುವರೆದು ಸದರಿ ವಿರುಪಾಪುರತಾಂಡ ನಿವಾಸಿಗಳ ಹೆಸರಿನಲ್ಲಿ ಗಂಗಾವತಿ ನಗರಸಭೆ ಡಿಮ್ಯಾಂಡ್ ರಜಿಸ್ಟ್ನಲ್ಲಿ ಖಾತಾ ಇದ್ದು, ಸಹ ಮಾಡಿಕೊಡಲಾಗಿರುತ್ತದೆ. ಫಾರಂ ನಂ: 03 ಕೂಡಾ ನೀಡಲಾಗಿರುತ್ತದೆ. ಇಲ್ಲಿನ ಬಡ ನಿವಾಸಿಗಳು ಹಂತಹಂತವಾಗಿ ಸರ್ಕಾರದ ವಿವಿಧ ಯೋಜನೆಗಳಡಿ ಅಂದರೆ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ, ನಮ್ಮ ಮನೆ ಹಾಗೂ ಪಕ್ಕಾ ಮನೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆ ನಿರ್ಮಾಣ ಮಾಡಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿಯೂ ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಈ ನಿವಾಸಿಗಳು ನಿವೇಶನದ ಮಾಲಿಕತ್ವಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಹೊಂದಿರುತ್ತಾರೆ. ಅಷ್ಟಲ್ಲದೇ ಇಲ್ಲಿನ ನಿವಾಸಿಗಳಿಗೆ ಗಂಗಾವತಿ ನಗರಸಭೆಯಿಂದ ಸಾಕಷ್ಟು ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದ್ದು, ಸ್ವಚ್ಛ ಭಾರತ ಯೋಜನೆಯಡಿ ಮನೆಮನೆಗೆ ಶೌಚಾಲಯ ನಿರ್ಮಾಣ, ವಿವಿಧ ಸರ್ಕಾರದ ಅನುದಾನಗಳಲ್ಲಿ ಸಿ.ಸಿ ರಸ್ತೆ, ಯು.ಜಿ.ಡಿ ಸೌಲಭ್ಯ, 24×7 ಕುಡಿಯುವ ನೀರಿನ ಸೌಲಭ್ಯ, ಜೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕ ಹೀಗೆ ಸರ್ಕಾರದ ವಿವಿಧ ಯೋಜನೆಗಳಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿರುತ್ತದೆ. ಇಲ್ಲಿನ ಬಹುತೇಕ ನಿವಾಸಿಗಳು ತಮ್ಮ ತಮ್ಮ ನಿವೇಶನಗಳಿಗೆ ಸಂಬಂಧಪಟ್ಟಂತೆ ಗಂಗಾವತಿ ನಗರಸಭೆಗೆ ತೆರಿಗೆಯನ್ನು ಪಾವಿಸುತ್ತಾ ಬಂದಿರುತ್ತಾರೆ. ಈ ನಿವಾಸಿಗಳ ತೆರವು ಕಾರ್ಯಾಚರಣೆಯನ್ನು ಏಕಾಏಕಿ ಮಾಡದೇ ದಾಖಲೆಗಳನ್ನು ಮರುಪರಿಶೀಲಿಸಿ ಇಲ್ಲಿನ ನಿವಾಸಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ತಹಶೀಲ್ದಾರರು ಭರವಸೆ ಕೊಟ್ಟಿರುವುದಕ್ಕೆ ಇಲ್ಲಿನ ನಿವಾಸಿಗಳು ನಿಟ್ಟುಸಿರುವ ಬಿಟ್ಟಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಪಿ. ಲಕ್ಷ್ಮಣ್ ನಾಯ್ಕ್, ಶ್ರೀ ಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಪಾಂಡುನಾಯ್ಕ, ವೆಂಕಟೇಶ್ ಚವಾಣ್, ಹನುಮಂತ ಜಾದವ್, ರವಿಚಂದ್ರ, ತಾಂಡ ನಿಗಮದ ರವಿ, ಕೃಷ್ಣ ನಾಯ್ಕ್, ವೆಂಕಟೇಶ್ ಜಾದವ್, ಮಂಜುನಾಥ ಕೃಷ್ಣ ನಾಯ್ಕ್ ಮೇಸ್ತ್ರಿ, ಕೆ.ಆರ್. ಸಂತೋಷ, ಅಂಬರೀಷ ಇನ್ನಿತರರು ಉಪಸ್ಥಿತರಿದ್ದರು.
ಮಾಹಿತಿಗಾಗಿ:
ಪಾಂಡುನಾಯ್ಕ ಮೇಸ್ತ್ರಿ
ಅಧ್ಯಕ್ಷರು, ಶ್ರೀ ಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕರ ಸಂಘ, ಗಂಗಾವತಿ.
ಮೊ: 9901487846

Total Views: 0
Share This Article