ಹಲಗಪುರ ಕೆರೆ ಅಭಿವೃದ್ದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ಶಾಸಕ ಎಂ.ಆರ್ ಮಂಜುನಾಥ್ .

H.Mallikarjun
H.Mallikarjun - Kalyanasiri
1 Min Read
MLA M.R. Manjunath visited and inspected the Halagapura Lake development work.

ಹಲಗಪುರ ಕೆರೆ ಅಭಿವೃದ್ದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ಶಾಸಕ ಎಂ.ಆರ್ ಮಂಜುನಾಥ್ .

ಜಾಹೀರಾತು

ವರದಿ: ಬಂಗಾರಪ್ಪ .ಸಿ.
ಹನೂರು :ಕೆರೆಗಳ ಅಭಿವೃದ್ಧಿಯಿಂದ ರೈತರ ಜಮೀನಿನ ನೀರಿನ ಮಟ್ಟವು ಸಾಮಾನ್ಯವಾಗಿ ಹೆಚ್ಚುತ್ತಾ ಹೋಗುತ್ತದೆ ಇಂದು ಶಾಸಕರು ಹಲಗಪುರ ಗ್ರಾಮಕ್ಕೆ
ಭೇಟಿ ನೀಡಿ ಕೆರೆಗಳ ಪುನರ್ ಅಭಿವೃದ್ಧಿ ಕಾಮಗಾರಿಗಳಿಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲಗಪುರ ಕೆರೆ 40 ವರ್ಷಗಳ ಹಿಂದೆ ನಿರ್ಮಾಣಗೊಂಡಿತ್ತು ಕೆರೆಗೆ ನೀರಾವರಿ ಯೋಜನೆ ಇಲ್ಲದೆ ಕೆರೆ ಕಾಯ ಕಲ್ಪ ನೀಡದೆ ನೆಲೆ ಗುಂದಿಗೆ ಬಿದ್ದಿದ್ದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ 250 ಎಕರೆ ಅಚ್ಚು ಕಟ್ಟು ಪ್ರದೇಶಕ್ಕೆ ನೀರಾವರಿ ವ್ಯವಸ್ಥೆ ಕಲ್ಪಿಸುವ ಸದುದ್ದೆಸದಿಂದ 40 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಪುರಾತನ ಹಲಗಪುರ ಕೆರೆಯನ್ನು ಕಾಯಕಲ್ಪ ನೀಡಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. .

ಕೆರೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಅಧಿಕಾರಿಗಳಿಗೆ ತಾಕಿತು : ಹಲಗಾಪುರ ಕೆರೆಯನ್ನು ಸುತ್ತಲೂ ಬಂಡ್ ನಿರ್ಮಾಣ ಮಾಡಿ ಕೆರೆಯ ಜಾಗದಲ್ಲಿ ಬೆಳೆದಿರುವ ಗಿಡ ಗಂಟೆಗಳನ್ನು ತೆರೆವುಗೊಳಿಸಿ, ಕೆರೆಯ ಅಚ್ಚುಕಟ್ಟು ಪ್ರದೇಶವನ್ನು ನಿರ್ಮಾಣ ಮಾಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿದರು ಜೊತೆಗೆ ಕೆರೆಯ ಅಚ್ಚುಕಟ್ಟು ಪ್ರದೇಶವನ್ನು ಅಳತೆ ಮಾಡಿ ಸೂಕ್ತ ಗಡಿ ಗುರುತು ಮಾಡುವಂತೆ ಭೂಮಾಪನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು . .

ಇದೇ ಸಂದರ್ಭದಲ್ಲಿ ತಾಲೂಕು ಭೂಮಾಪನ ಇಲಾಖೆಯ ಸೂಪರ್ ವೈಸರ್ ಕುಮಾರಸ್ವಾಮಿ ಮತ್ತು ಮುಖಂಡರಾದ ಶಾಗ್ಯ ಬಾಬಣ್ಣ,ರವಿ, ಮಂಜೇಶ್ ಗೌಡ, ಚಾಮುಲ್ ನಿರ್ದೇಶಕರಾದ ಉದ್ದನೂರು ಪ್ರಸಾದ್,ರಾಚಪ್ಪ, ಮಹದೇವಪ್ಪ, ಜೇಸಿಮ್ ಪಾಷ, ಸೌಕಯ್ಯ,
ತಮ್ಮಯ್ಯ, ನಾಗರಾಜು,ಡಿ. ಆರ್ ಹಾರ್ದಿವೆರ್ ಸೀನಣ್ಣ, ಶಿವಪ್ಪ,ಭಸರತ್, ಶಂಕರಪ್ಪ,ನಾಗಯ್ಯ, ತಿರುಪತಿ,ಹಾಗೂ ಅಳಗಪುರ ಗ್ರಾಮದ ರೈತ ಮುಖಂಡರು ಸೇರಿದಂತೆ ಇನ್ನಿತರರು ಹಾಜರಿದ್ದರು.

Total Views: 0
Share This Article