
Mechanized rice planting demonstration and training program
ಯಂತ್ರ ಚಾಲಿತ ಭತ್ತದ ನಾಟಿ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕಾರ್ಯಕ್ರಮ



ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕು ಗುಂಡೂರು ಗ್ರಾಮದಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರ ಬೆಂಗಳೂರು, ಸೆಲ್ಕೋ ಫೌಂಡೇಶನ್ ಹಾಗೂ ಶ್ರೀ ವೀರಪ್ಪಯ್ಯ ತಾತ ರೈತ ಉತ್ಪಾದಕರ ಸಹಕಾರ ಸಂಘ ನಿಯಮಿತ ಗುಂಡೂರು ರವರ ಸಹಯೋಗದಲ್ಲಿ ವೆಂಕಾರೆಡ್ಡಿ ಎಂಬುವರ ಜಮೀನಿನಲ್ಲಿ ಯಂತ್ರ ಚಾಲಿತ ಭತ್ತದ ನಾಟಿ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಗಂಗಾವತಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಡಾ. ಅಭಿಲಾಷ ಭಾಗವಹಿಸಿ ಇಂದಿನ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ಹೆಚ್ಚಾಗಿದ್ದು ಯಾಂತ್ರಿಕೃತ ಪದ್ಧತಿಯಿಂದ ರೈತರು ನಾಟಿ ಮಾಡಲು ಅನುಕೂಲವಾಗುತ್ತದೆ ಹಾಗೂ ಇಳುವರಿ ಪ್ರಮಾಣವನ್ನು ಹೆಚ್ಚಿಸಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು, ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ನೋಡಲ್ ಅಧಿಕಾರಿಗಳಾದ ಯಲ್ಲಪ್ಪ ಬಿಎಂ ರವರು ರೈತ ಉತ್ಪಾದಕ ಸಂಘಗಳ ಮುಖಾಂತರ ಸಣ್ಣ ಅತಿ ಸಣ್ಣ ಹಾಗೂ ದೊಡ್ಡ ರೈತರುಗಳು ರೈತರಿಗೆ ಅನುಕೂಲವಾಗುವ ಕೃಷಿ ಯಂತ್ರೋಪಕರಣಗಳನ್ನು ಹಾಗೂ ದೊಡ್ಡ ದೊಡ್ಡ ಯಂತ್ರಗಳನ್ನ ಖರೀದಿಸಿ ಬಾಡಿಗೆ ಆಧಾರದಲ್ಲಿ ಬಳಕೆ ಮಾಡಬಹುದು ಇದರಿಂದ ರೈತರಿಗೆ ಹೆಚ್ಚಿನ ಬಂಡವಾಳ ಹಾಕುವ ಅವಶ್ಯಕತೆ ಇರುವುದಿಲ್ಲ ಹಾಗೂ ಕೇಂದ್ರ ಸರ್ಕಾರವು FPO ಗಳ ಅಭಿವೃದ್ಧಿಗಾಗಿ ಸಹಾಯಧನವನ್ನು ನೀಡುತ್ತಿದ್ದು ರೈತರು ಸಂಘಕ್ಕೆ ಸೇರುದಾರರಾಗಿ ತಮ್ಮ ಭಾಗಕ್ಕೆ ಬೇಕಾಗುವ ಯಂತ್ರೋಪಕರಣಗಳನ್ನು ಖರೀದಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂಬ ಬಗ್ಗೆ ತಿಳಿಸಿದರು, ಶ್ರೀ ವೀರಪ್ಪಯ್ಯ ತಾತ ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಎಚ್ ರಾಜಶೇಖರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಂಘದಲ್ಲಿ ಪ್ರಸ್ತುತ 300 ಸೇರುದಾರರಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶೇರದಾರರು ಸಂಘಕ್ಕೆ ಸದಸ್ಯರಾದಲ್ಲಿ ನಾಟಿ ಯಂತ್ರ, ಡ್ರೋನ್ ಹಾಗೂ ರೈತರಿಗೆ ಯಾವೆಲ್ಲ ಯಂತ್ರಗಳ ಅವಶ್ಯಕತೆ ಇರುತ್ತೋ ಅವುಗಳನ್ನ ಸಂಘದ ಮೂಲಕ ತರುವ ಬಗ್ಗೆ ತಿಳಿಸಿದರು ಕಾರ್ಯಕ್ರಮದಲ್ಲಿ ಸೆಲ್ಕೋ ಫೌಂಡೇಶನ್ ಅಧಿಕಾರಿಗಳಾದ ಪ್ರಕಾಶ್ ಮೇಟಿ, ರೋಹಿತ್, ಅಧಿಕಾರಿಗಳಾದ ವೈ ಸುಧಾಕರ್, ಬೀರಪ್ಪ ಸಂಘದ ನಿರ್ದೇಶಕರುಗಳಾದ ಸೋಮಶೇಖರ್, ವೀರೇಶ್, ಹನುಮಂತಪ್ಪ ಹಾಗೂ ಗುಂಡೂರು ಗುಂಡೂರು ಕ್ಯಾಂಪ್ ಕೆಸರಟ್ಟಿ ಗ್ರಾಮದ ರೈತರು ಭಾಗವಹಿಸಿದ್ದರು.
