
Kotturu: Police arrest four in lightning operation - gold, cash seized
ಕೊಟ್ಟೂರು : ಪೋಲಿಸರ ಮಿಂಚಿನ ಕಾರ್ಯಚರಣೆ ನಾಲ್ವರ ಬಂಧನ – ಚಿನ್ನ , ನಗದು ವಶ:

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿತ್ತು, ಕಳ್ಳತನ ಪ್ರಕರಣದ ಬೆನ್ನು ಹತ್ತಿದ ಕೊಟ್ಟೂರು ಪೊಲೀಸರು ಆರೋಪಿತರ ಪತ್ತೆಗಾಗಿ ಶ್ರೀ ಮಲ್ಲೇಶ್ ದೊಡ್ಡಮನಿ ಡಿ ವೈ ಎಸ್ ಪಿ ಕೂಡ್ಲಿಗಿ ಇವರ ಮಾರ್ಗದರ್ಶನದಲ್ಲಿ ಡಿ. ದುರುಗಪ್ಪ ಸಿಪಿಐ ಕೊಟ್ಟೂರು ವೃತ್ತ ರವರ ನೇತೃತ್ವದಲ್ಲಿ ಗೀತಾoಜಲಿ ಶಿಂಧೆ ಪಿ ಎಸ್ ಐ, ಕೊಟ್ಟೂರು ಪೊಲೀಸ್ ಠಾಣೆ ಸಿಬ್ಬಂದಿಯಾವರಾದ ಶಂಕ್ರಪ್ಪ,ದೊಡ್ಡ ಬಸವನಗೌಡ,ಸಿದ್ದೇಶ, ಬಸವರಾಜ್,ಶಶಿಧರ, ಕುಮಾರ ಪತ್ರಿ,ರಮೇಶ, ಚಿದಾನಂದ,ಬಸವರಾಜ್, ಶಶಿಧರ ಇವರ ನೇತೃತ್ವದಲ್ಲಿ ತಂಡವನ್ನು ರಚಿಸಿಕೊಂಡು ಆರೋಪಿತರ ಪತ್ತೆಗಾಗಿ ಬಲೆ ಬೀಸಿ ಕೊನೆಗೆ ಕೊಟ್ಟೂರು ಪಟ್ಟಣದ ರೇಣುಕಾ ಬಡಾವಣೆ ಬೆಳಗಿನ ಜಾವದಲ್ಲಿ ಆರೋಪಿತರನ್ನು ಹಿಡಿಯುವಲ್ಲಿ ಯಶಸ್ವಿಯಾಯಿತು.

ಬಂಧಿತ ಆರೋಪಿಗಳಾದ ಬಲೂನ್ ವ್ಯಾಪಾರಿ ಮದನ್, ಬೆಲ್ದಾರ್ ಗಣೇಶ,ಬೆಲ್ದಾರ್ ಬಾಲಚಂದ್ರ, ಅಶೋಕ ಕೂಲಿ ಕಾರ್ಮಿಕ ಬಂಧಿತ ಆರೋಪಿಗಳಾಗಿದ್ದಾರೆ. ಇವರುಗಳು ಆಂಧ್ರಪ್ರದೇಶದ ಗುಂತಕಲ್ಲು ಮೂಲದವರು ಎಂದು ತಿಳಿದು ಬಂದಿದ್ದು, ಬಂಧಿತ ಆರೋಪಿಗಳಿಂದ ಸುಮಾರು 6,00,000 ರೂ. ಬೆಲೆಬಾಳುವ ಬಂಗಾರದ ಆಭರಣ ಮತ್ತು 20 ಸಾವಿರ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ , ವಿಜಯನಗರ ಐಪಿಎಸ್ ಅಧಿಕಾರಿ ಶ್ರೀಮತಿ ಎಸ್. ಜಾಹ್ನವಿ ರವರು , ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಿಜಯನಗರ ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ರವರು , ಕೊಟ್ಟೂರು ಪೊಲೀಸ್ ರ ಕಾರ್ಯಚರಣೆಗೆ ಪ್ರಶಂಸೆ ವ್ಯೆಕ್ತಪಡಿಸಿದ್ದಾರೆ.
