ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ: ಪ್ರಥಮ ವರ್ಷದ ಪ್ರವೇಶಾತಿಗೆ ಅರ್ಜಿ ಆಹ್ವಾನ

H.Mallikarjun
H.Mallikarjun - Kalyanasiri
2 Min Read
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ: ಪ್ರಥಮ ವರ್ಷದ ಪ್ರವೇಶಾತಿಗೆ ಅರ್ಜಿ ಆಹ್ವಾನ
ಕೊಪ್ಪಳ ಜುಲೈ 08 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2026-27ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರಥಮ ವರ್ಷದ ಪ್ರವೇಶಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ಮುಕ್ತ  ವಿಶ್ವವಿದ್ಯಾನಿಲಯವು ಯುಜಿಸಿ, 12ಬಿ, ನ್ಯಾಕ್ ಎ+ ಮತ್ತು ಎನ್.ಐ.ಆರ್.ಎಫ್. 2ನೇ ರ್ಯಾಂಕ್ ಶ್ರೇಣಿ ಮಾನ್ಯತೆ ಹೊಂದಿರುವ ವಿಶ್ವವಿದ್ಯಾನಿಲಯವಾಗಿದ್ದು, ಕರ್ನಾಟಕದಲ್ಲಿ ಮುಕ್ತ ಮತ್ತು ದೂರ ಶಿಕ್ಷಣ (ಒ.ಡಿ.ಎಲ್) ವ್ಯವಸ್ಥೆಯಲ್ಲಿ ಉನ್ನತ ಶಿಕ್ಷಣವನ್ನು ಅಧಿಕೃತವಾಗಿ ನೀಡುವ ಏಕ ಮಾತ್ರ ವಿಶ್ವವಿದ್ಯಾನಿಲಯವಾಗಿದ್ದು, ವಿವಿಧ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಅರ್ಜಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸ್ನಾತಕ (ಯುಜಿ) ಶಿಕ್ಷಣ ಕಾರ್ಯಕ್ರಮಗಳಲ್ಲಿ ಬಿಎ, ಬಿಕಾಂ, ಬಿ.ಲಿಬ್.ಐ.ಎಸ್ ಸಿ, ಬಿ.ಬಿ.ಎ, ಬಿ.ಎಸ್.ಸಿ, ಬಿಎಸ್ ಸಿ-ಹೋಮ್ ಸೈನ್ಸ್, ಬಿ.ಎಸ್ ಸಿ-ಇನ್ ಫರ್ ಮೇಷನ್ ಟೆಕ್ನಾಲಜಿ, ಬಿ.ಸಿ.ಎ (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್), ಬಿ.ಎಸ್.ಡಬ್ಲ್ಯೂ (ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್) ಹಾಗೂ ಪಿಜಿ ಸರ್ಟಿಫಿಕೇಟ್ ಕಾರ್ಯಕ್ರಮಗಳು-(ಪದವಿ ಆಧಾರಿತ) (ಒಂದು ವರ್ಷ), ಡಿಪ್ಲೋಮಾ ಶಿಕ್ಷಣ ಕಾರ್ಯಕ್ರಮಗಳು (10+2 ಅಧಾರಿತ) (ಒಂದು ವರ್ಷ) ಹಾಗೂ ಸರ್ಟಿಫಿಕೇಟ್ ಶಿಕ್ಷಣ ಕಾರ್ಯಕ್ರಮಗಳು (ಆರು ತಿಂಗಳು).ಹಾಗೂ ಸ್ನಾತಕೋತ್ತರ (ಪಿಜಿ) ಶಿಕ್ಷಣ ಕಾರ್ಯಕ್ರಮಗಳಲ್ಲಿ ಎಂ.ಎ, ಎಂ.ಕಾಂ ಎಂ.ಲಿಬ್.ಐ.ಎಸ್ ಸಿ, ಎಂ.ಎಸ್‌ಸಿ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಪರಿಸರ ವಿಜ್ಞಾನ, ಭೂಗೋಳಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಮಾಹಿತಿ ತಂತ್ರಜ್ಞಾನ, ಡಾಟಾ ಸೈನ್ಸ್, ಭೂ-ವಿಜ್ಞಾನ ಮತ್ತು ಲೈಫ್ ಸೈನ್ಸ್) ಎಂ.ಬಿಎ, ಎಂ.ಸಿ.ಎ ಮತ್ತು ಎಂ.ಎಸ್.ಡಬ್ಲ್ಯೂ ಶಿಕ್ಷಣ ಕ್ರಮಗಳಿಗೆ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭವಾಗಿರುತ್ತದೆ. ಪ್ರವೇಶಾತಿಯು ಜೂನ್ 22 ರಂದು ಪ್ರಾರಂಭಗೊಂಡಿದ್ದು, ಸಪ್ಟೆಂಬರ್ 15 ಕೊನೆಯ ದಿನವಾಗಿರುತ್ತದೆ.ಆದ್ದರಿಂದ ಆಸಕ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಈ ಮೂಲಕ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ವಿ.ವಿ ಯ ಅಂತರ್ಜಾಲ www.ksoumysuru.ac.in ಅನ್ನು ಸಂಪರ್ಕಿಸಬಹುದು. ಅಥವಾ  ಖುದ್ದಾಗಿ ಪ್ರಾದೇಶಿಕ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಸಂಚಾರಿ ಮೊಬೈಲ್ ಸಂಖ್ಯೆ 7022720994, 8748845520, 6363118663, 9108327547, 9964076861, 9148156919 ಗೆ ಸಂಪರ್ಕಿಸಿ ಪ್ರವೇಶಾತಿಗೆ ಸಂಬAಧಿಸಿದ ಮಾಹಿತಿ ಪಡೆಯಬಹುದು ಎಂದು ಕರಾಮುವಿ ಕೊಪ್ಪಳ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಅರುಣ್ ಕೆ.ಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Total Views: 0
Share This Article