
Deputy Commissioner visits Gangavathi Autonagar on June 8th, promises to provide justice to the original members

ಜೂನ್-8 ರಂದು ಗಂಗಾವತಿ ಆಟೋನಗರಕ್ಕೆ ಜಿಲ್ಲಾಧಿಕಾರಿ ಭೇಟಿ,ಮೂಲ ಸದಸ್ಯರಿಗೆ ನ್ಯಾಯ ಒದಗಿಸಲು ಭರವಸೆ

ಗಂಗಾವತಿ: ಸುಮಾರು 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಆಟೋನಗರಕ್ಕೆ ಜೂನ್-8 ಸೋಮವಾರ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಹಿಂದಿನ ಜಿಲ್ಲಾಧಿಕಾರಿಗಳು 2014 ರಲ್ಲಿ ಹೊರಡಿಸಿದ ಆದೇಶದನ್ವಯ ವಿನ್ಯಾಸ ರಚಿಸಿ ಆಟೋನಗರದ ಮೂಲ ಸದಸ್ಯರುಗಳಿಗೆ ನ್ಯಾಯ ಒದಗಿಸಿಕೊಡಲು ಭರವಸೆ ನೀಡಿದರು ಎಂದು ಆಟೋನಗರ ಮೂಲ ಸದಸ್ಯರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಡಿ. ವಿಜಯ್ ಸಂತಸ ವ್ಯಕ್ತಪಡಿಸಿದರು.
ಸುಮಾರು 40 ವರ್ಷಗಳ ಹಿಂದೆಯೇ ಗಂಗಾವತಿ ನಗರಸಭೆ ಮಾಲೀಕತ್ವದ ಸರ್ವೆ ನಂ: 139, 139/1 ಒಟ್ಟು ವಿಸ್ತೀರ್ಣ 5-00 ಎಕರೆ ಭೂಮಿಯನ್ನು 1984-85ನೇ ಸಾಲಿನಲ್ಲಿ ಆಟೋನಗರ ನಿರ್ಮಾಣಕ್ಕಾಗಿ ಖರೀದಿಸಲಾಗಿ, ಸದರಿ ಆಟೋನಗರಕ್ಕೆ ವಿನ್ಯಾಸವನ್ನು ತಯಾರಿಸಿ ನಿವೇಶನಗಳನ್ನು ರಚಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ನಿವೇಶನಗಳಿಗೆ ಪ್ರತಿ ಚದರ ಅಡಿಗೆ ರೂ. 15/- ರಂತೆ ಹಾಗೂ ಒಳಗಿನ ನಿವೇಶನಗಳಿಗೆ ರೂ. 7/- ರಂತೆ ಬೆಲೆಯನ್ನು ನಿಗದಿಪಡಿಸಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಮುಂದುವರೆದು ಆಗಿನ ಜಿಲ್ಲಾಧಿಕಾರಿಗಳು ದಿನಾಂಕ: 27.06.2014 ರಂದು ಆದೇಶ ಹೊರಡಿಸಿ, ನಗರಸಭೆ ಗಂಗಾವತಿ ಇವರು ಸಲ್ಲಿಸಿದ ಪ್ರಸ್ತಾವನೆಯಲ್ಲಿನ ಯಾದಿಯಲ್ಲಿರುವ 90 ಫಲಾನುಭವಿಗಳ ಪ್ರಕಾರ ಸಂಪೂರ್ಣ ಹಣವನ್ನು ಭರಣ ಮಾಡಿರುವ ಫಲಾನುಭವಿಗಳಿಗೆ ನಿವೇಶನವನ್ನು ಹಾಗೂ ಭಾಗಶಃ ಹಣ ಪಾವತಿಸಿರುವ ಫಲಾನುಭವಿಗಳಿಂದ ಪಡೆದಿರುವ ದರದನ್ವಯ ವ್ಯತ್ಯಾಸದ ಮೊತ್ತವನ್ನು ಪಡೆದುಕೊಂಡು, ಹಿರಿಯ ಉಪ ನೋಂದಣಾಧಿಕಾರಿಗಳು ಗಂಗಾವತಿಯವರಿಂದ ನೋಂದಣಿ ಮಾಡಿಕೊಂಡು ನಿವೇಶನಗಳನ್ನು ಫಲಾನುಭವಿಗಳಿಗೆ ಹಂಚಲು ಕ್ರಮವಹಿಸುವಂತೆ ಮತ್ತು ಕರಾರು ಒಪ್ಪಂದ ಪತ್ರದ ಪ್ರಕಾರ ವ್ಯತ್ಯಾಸ ಕಂಡುಬಂದಲ್ಲಿ ಯೋಜನಾ ಪ್ರಾಧಿಕಾರದಿಂದ ಅನುಮೋದನೆಯಾಗಿರುವ ವಿನ್ಯಾಸಗಳಿಗೆ ಹೊಂದಾಣಿಕೆ ಮಾಡಿಕೊಂಡು ಸಂಬಂಧಪಟ್ಟ ಫಲಾನುಭವಿಗಳಿಗೆ ಸರಿಪಡಿಸುವಿಕೆಯ ಕರಾರು ಪತ್ರ ಮಾಡಿಕೊಂಡು ಸದರಿ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಆದೇಶ ಮಾಡಿದ್ದರು. ಮುಂದುವರೆದು ನಗರಸಭೆಯ ಈಗಿನ ಪೌರಾಯುಕ್ತ ಆರ್. ವಿರುಪಾಕ್ಷಮೂರ್ತಿಯವರು ಆಟೋನಗರದ ನಿವೇಶನಗಳ ವಿನ್ಯಾಸವನ್ನು ಆಟೋನಗರದ ಫಲಾನುಭವಿಗಳಿಗೆ ತಿಳಿಸದೇ ಮತ್ತು ಸರಿಯಾದ ಮಾಹಿತಿ ನೀಡದೇ ತಮಗೆ ಇಷ್ಟಬಂದ ರೀತಿಯಲ್ಲಿ ರಚಿಸಿ, ಕಾರ್ಮಿಕರಿಗೆ ಅನ್ಯಾಯವೆಸಗಿದ್ದರು. ಈ ಬಗ್ಗೆ ಸಾಕಷ್ಟು ಬಾರಿ ಪೌರಾಯುಕ್ತರಿಗೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿರುವುದಿಲ್ಲ. ಇಲ್ಲಿನ ಆಟೋನಗರ ಮೂಲ ನಿವಾಸಿಗಳು ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಇಲ್ಲಿನ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಲಾಗಿತ್ತು. ಅದರಂತೆ ಜೂನ್-8 ಸೋಮವಾರ ಜಿಲ್ಲಾಧಿಕಾರಿಗಳು ಆಟೋನಗರಕ್ಕೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿ, ಮರು ಸರ್ವೆ ಮಾಡಿ ಇಲ್ಲಿನ ಮೂಲ ನಿವಾಸಿಗಳು ನಾಲ್ಕು ದಶಕಗಳ ಕಾಲ ಎದುರಿಸುತ್ತಿದ್ದ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸಿ, ಎಲ್ಲಾ ಮೂಲ ಸದಸ್ಯರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಟೋನಗರದ ಮೂಲನಿವಾಸಿಗಳಾದ ಹುಸೇನಸಾಬ್, ಕಟ್ಟಾ ರಾಜ, ಬಿ. ಪ್ರಕಾಶ, ಡಿ.ಎಲ್. ಮೇರಿ, ಆರೋಗ್ಯ ಮೇರಿ, ಚಾಂದ್, ಗೌಸ್ ಪೀರ್, ಖಲೀಲ್ ಟಿಂಕರ್, ಸಲೀಂ ಟಿಂಕರ್, ಭಾಷಾ ಲಾರಿ ಮೆಕ್ಯಾನಿಕ್, ಬಿ. ಶ್ರೀನಿವಾಸ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಾಹಿತಿಗಾಗಿ:
ವಿಜಯ್ ದೊರೆರಾಜು
ಸಂಚಾಲಕರು,
ಮೊ: 9448917829, 7019255512
