
Saptaswara Cultural Arts Association celebrates Environment Day by planting saplings

ಸಪ್ತಸ್ವರ ಸಾಂಸ್ಕೃತಿಕ ಕಲಾಸಂಘದಿಂದ ಸಸಿಗಳನ್ನು ನೆಡವು ಮೂಲಕಪರಿಸರ ದಿನಾಚರಣೆ

ಗಂಗಾವತಿ: ಪರಿಸರ ದಿನಾಚರಣೆಯ ಅಂಗವಾಗಿ ಇಂದು ಜೂನ್-5 ಶನಿವಾರ ಪಂಪಾನಗರ ಸರ್ಕಲ್ ನಲ್ಲಿ ನಮ್ಮ ಸಪ್ತಸ್ವರ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಸಸಿ ನೆಡುವ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷರಾದ ಆರ್. ಕಣ್ಣನ್, ಉಪಾಧ್ಯಕ್ಷರಾದ ತಟ್ಟಿ ಶ್ಯಾಮಣ್ಣ, ಪ್ರಧಾನ ಕಾರ್ಯದರ್ಶಿಗಳಾದ ವಿರೇಶ ಹಿರೇಮಠ ರವರುಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಂಘದ ಅಧ್ಯಕ್ಷರಾದ ಆರ್. ಕಣ್ಣನ್ ಅವರು ಸಸಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಾಡನ್ನು ಉಳಿಸಿ, ಕಾಡನ್ನು ಬೆಳೆಸಿ ಹಾಗೂ ಸಾವಿರಾರು ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ನಮ್ಮ ಸಂಘದಿಂದ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ನೀರನ್ನು ಮಿತವಾಗಿ ಬಳಸಿ, ಪ್ಲಾಸ್ಟಿಕ್ ನ್ನು ತ್ಯಜಿಸಿ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ ತಟ್ಟಿ, ಖಜಾಂಚಿಯಾದ ವಿರೇಶಪ್ಪ, ಸದಸ್ಯರುಗಳಾದ ಮೌನೇಶ, ಹಾಜಿ ಅಲಿ, ರುಕ್ಮುದ್ದೀನ್, ಪ್ರವೀಣಕುಮಾರ, ಕುರುಗೋಡು ವೆಂಕಟೇಶ್, ಮಾಜಿ ನಗರಸಭೆ ಸದಸ್ಯರಾದ ಹುಸೇನಪೀರ, ಸತ್ಯನಾರಾಯಣ, ವಿರುಪಾಕ್ಷಿ, ಸತ್ಯನಾರಾಯಣ, ವೀರೇಶ್ ಪಪ್ಪಿ, ರಾಮಕೃಷ್ಣ ಸಿ.ಡಿ., ಅಂಬಣ್ಣ, ಮಹಿಳಾ ಸದಸ್ಯರಾದ ವಿಜಯಕ್ಷ್ಮೀ, ಅನನ್ಯ, ಶಮೀನಾ, ಗಾಯಕರಾದ ಸಾವಿತ್ರಿ, ಭಾಗ್ಯಲಕ್ಷ್ಮೀ ಗುಲ್ಬರ್ಗ, ಪರಶುರಾಮ, ಹನುಮಂತಪ್ಪ, ಹನುಮೇಶ ಶಂಬಣ್ಣ ಇನ್ನೂ ಅನೇಕರು ಭಾಗವಹಿಸಿದ್ದರು.
