“ನನಗೆ ಒಳ್ಳೆಯ ಖಾತೆಯನ್ನೇ ಕೊಟ್ಟಿದ್ದಾರೆ, ಐ ಆಮ್ ಹ್ಯಾಪಿ!”: ಖಾತೆ ಹಂಚಿಕೆ ಬಳಿಕ ಸಚಿವ ಯತೀಂದ್ರ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

They have given me a good portfolio, I am happy!": Minister Yathindra Siddaramaiah's first reaction after portfolio allocation

“ನನಗೆ ಒಳ್ಳೆಯ ಖಾತೆಯನ್ನೇ ಕೊಟ್ಟಿದ್ದಾರೆ, ಐ ಆಮ್ ಹ್ಯಾಪಿ!”: ಖಾತೆ ಹಂಚಿಕೆ ಬಳಿಕ ಸಚಿವ ಯತೀಂದ್ರ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ

ಜಾಹೀರಾತು

ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಅತ್ಯಂತ ಕುತೂಹಲ ಮೂಡಿಸಿದ್ದ ಖಾತೆ ಹಂಚಿಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ತಮಗೆ ಸಿಕ್ಕಿರುವ ಖಾತೆಯ ಬಗ್ಗೆ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.

​ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಈ ಹಿಂದೆಯೇ ನಾನು ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಹೇಳಿದ್ದೆ. ಆದರೆ ಈಗ ನನಗೆ ಒಳ್ಳೆಯ ಖಾತೆಯನ್ನೇ ಕೊಟ್ಟಿದ್ದಾರೆ. So I’m happy (ನಾನು ಸಂತೋಷವಾಗಿದ್ದೇನೆ)” ಎಂದು ಹರ್ಷ ಹಂಚಿಕೊಂಡಿದ್ದಾರೆ.

ಹಿರಿಯರ ಅಸಮಾಧಾನದ ಬಗ್ಗೆ ಯತೀಂದ್ರ ಹೇಳಿದ್ದೇನು?

​ಖಾತೆ ಹಂಚಿಕೆ ಬೆನ್ನಲ್ಲೇ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರಲ್ಲಿ ಅಸಮಾಧಾನ ಮೂಡಿದೆ ಎನ್ನಲಾದ ಚರ್ಚೆಗಳಿಗೂ ಸಚಿವರು ಇದೇ ವೇಳೆ ಪ್ರತಿಕ್ರಿಯೆ ನೀಡಿದರು.

ಹೈಕಮಾಂಡ್ ಬಗೆಹರಿಸಲಿದೆ:

“ರಾಮಲಿಂಗಾ ರೆಡ್ಡಿ ಹಾಗೂ ಕೆ.ಎಚ್. ಮುನಿಯಪ್ಪ ಅವರು ಬಹಳ ವರ್ಷಗಳಿಂದ ಕಾಂಗ್ರೆಸ್‌ನಲ್ಲಿರುವ ಅತ್ಯಂತ ಹಿರಿಯ ನಾಯಕರು ಮತ್ತು ಪಕ್ಷಕ್ಕೆ ನಿಷ್ಠೆಯಿಂದ ಇರುವವರು. ಹೈಕಮಾಂಡ್‌ ಅವರೊಟ್ಟಿಗೆ ಮಾತನಾಡಲಿದ್ದು, ಅದೇನೇ ಸಮಸ್ಯೆಯಿದ್ದರೂ ಸೌಹಾರ್ಧಯುತವಾಗಿ ಬಗೆಹರಿಸುತ್ತದೆ” ಎಂದು ಯತೀಂದ್ರ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಯ ಮುಖ್ಯಾಂಶಗಳು:

​ಖುಷಿ ತಂದ ಖಾತೆ: ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮಹತ್ವದ ನಗರಾಭಿವೃದ್ಧಿ ಜವಾಬ್ದಾರಿ ಸಿಕ್ಕಿದ್ದು, ಹೊಸ ಜವಾಬ್ದಾರಿಗೆ ಅವರು ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿದ್ದಾರೆ.

​ಹಿರಿಯರಿಗೆ ಗೌರವ: ಪಕ್ಷದ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ ಹಾಗೂ ಮುನಿಯಪ್ಪ ಅವರ ಅಸಮಾಧಾನವನ್ನು ಹೈಕಮಾಂಡ್ ಶೀಘ್ರದಲ್ಲೇ ಶಮನ ಮಾಡಲಿದೆ ಎಂದಿದ್ದಾರೆ.

Total Views: 0
Share This Article