ಶಾಲೆಗಳು ಪ್ರಾರಂಭವಾಗುತ್ತಿರುವ ಈ ಸುಸಂದರ್ಭದಲ್ಲಿ ಹೆತ್ತವರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಯಾರಿಸಿದ ಉಪಯುಕ್ತ ಮಾಹಿತಿ.

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Useful information prepared for parents and students on this auspicious occasion of schools reopening.
ಪೂಜಾ ಬಂಕಲಗಿ
ಚಿತ್ತಾಪುರ ಲೇಖಕರು

ಶಾಲೆಗಳು ಪ್ರಾರಂಭವಾಗುತ್ತಿರುವ ಈ ಸುಸಂದರ್ಭದಲ್ಲಿ ಹೆತ್ತವರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಯಾರಿಸಿದ ಉಪಯುಕ್ತ ಮಾಹಿತಿ.

ಜಾಹೀರಾತು

ಧಾರಾವಾಹಿ ವೀಕ್ಷಣೆ ಬಿಟ್ಟು ಬಿಡಿ.

ಮಕ್ಕಳಿಗೆ ಕನಿಷ್ಠ 8 ಗಂಟೆಗಳ ಕಾಲ ನಿದ್ದೆ ಮಾಡುವ ವಾತಾವರಣ ಸೃಷ್ಟಿಸಿ.

ಹಿಂದೆಲ್ಲಾ ಮಕ್ಕಳು ಬೇಗನೆ ಮಲಗುತ್ತಿದ್ದರು. ಈಗ ಹಿರಿಯರು ಮಲಗುವಾಗಲೇ ಅವರೂ ಮಲಗುವುದು. ಅದ್ದರಿಂದ ಹೆತ್ತವರು ಲೈಫ್ ಸ್ಟೈಲ್ ಬದಲಿಸಲು ಸಿದ್ದರಾಗಿ.

ಹಿರಿಯರಿಗೆ.. ಗುರುಗಳಿಗೆ.. ತಂದೆ ತಾಯಿಗಳಿಗೆ & ದೇವರಿಗೆ.. ಬಗ್ಗೆ ಕಲಿಸಿ.

ಫಾಸ್ಟ್ ಫುಡ್, ಬೇಕರಿ ಆಹಾರಗಳನ್ನು ತ್ಯಜಿಸಿರಿ.

ಎಲೆ ಪದಾರ್ಥಗಳು, ಪಚ್ಚೆ ಹಸಿರು, ನೆಲ್ಲಿಕಾಯಿ ಇವನ್ನು ಧಾರಾಳ ನೀಡಿರಿ.

ಮನೆ ಕೆಲಸಗಳಲ್ಲಿ ಸೇರಿಸಿಕೊಳ್ಳಿರಿ.

ಯೂನಿಫಾರ್ಮ್, ಬಟ್ಟೆಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ತೊಳೆಯುವ ಬಕೆಟ್ ನಲ್ಲೇ ಹಾಕಲು ಅಭ್ಯಾಸ ಮಾಡಿಸಿ.

ಊಟದ ಬಳಿಕ ತಟ್ಟೆಯನ್ನು ಮಕ್ಕಳು ಸ್ವತಃ ಶುಚೀಕರಿಸಲು ಹೇಳಿರಿ.

ಪ್ರತಿದಿನ ದೇವರ ಧ್ಯಾನ, ನಮಾಜ್ ಮಾಡಲು ಹೇಳಿರಿ

ಹೆಣ್ಣು ಮಕ್ಕಳ ಬೆಳವಣೆಗೆಯನ್ನು ಅನುಸರಿಸಿ ಉಪದೇಶ ನೀಡುತ್ತಿರಿ.

ಸಂಜೆ ಬೇಕರಿ ತಿನಿಸುಗಳನ್ನು ತ್ಯಜಿಸಿರಿ.

ದೋಸೆ, ಇಡ್ಲಿ, ಎಲೆಯಲ್ಲಿ ಮಾಡುವ ತಿಂಡಿಗಳು, ಅವಲಕ್ಕಿ, ಹಣ್ಣುಗಳು, ಬೇಯಿಸಿದ ನೇಂದ್ರ ಬಾಳೆ, ಎಳ್ಳುಂಡೆ ಮೊದಲಾದ ಆರೋಗ್ಯಕರವಾದ ಆಹಾರ ನೀಡಿರಿ.

ರಾತ್ರಿ ಊಟ ಮಿತವಾಗಿರಲಿ. ಬೇಗನೆ ಇರಲಿ.

ಕುಟುಂಬ ಸದಸ್ಯರು ಜೊತೆಯಾಗಿ ಕುಳಿತು ಉಣ್ಣುವಂತಿರಲಿ.

ಮನಸ್ಸಿಗೆ ಉಲ್ಲಾಸ ಕೊಡುವಂತಹ ವಿಷಯಗಳನ್ನು ಮಾತ್ರ ಆ ಸಮಯದಲ್ಲಿ ಮಾತಾಡಿ.

ಅನಾವಶ್ಯಕ ಕೋಪಿಸಿಕೊಳ್ಳುವುದನ್ನು ಬಿಟ್ಟು ಬಿಡಿ.

ವ್ಯಕ್ತಿ ಶುಚೀಕರಣ ಪಾಲಿಸಿರಿ.

ಮಕ್ಕಳು ತಮ್ಮ ಕೋಣೆ, ಓದುವ ಸ್ಥಳವನ್ನು ಸ್ವತಃ ಶುಚೀಕರಿಸಲಿ.

ಪುಸ್ತಕ, ಸಾಮಾಗ್ರಿಗಳನ್ನು ನೀಟಾಗಿರಿಸುವಂತೆ ತಿಳಿಸಿರಿ.

ತರಕಾರಿ , ಹಣ್ಣು ಹೆಚ್ಚಲು, ತೆಂಗಿನಕಾಯಿ ತುರಿಯಲು ಕಲಿಸಿರಿ.

ಇತಿಮಿತಿ ಪಾಲಿಸಲು ಅಭ್ಯಾಸ ಮಾಡಿಸಿರಿ.

ಬೆಳಗಿನ ಉಪಹಾರ ಕಡ್ಡಾಯವಾಗಿ ತಿನ್ನಿಸಿರಿ.

ಕಲಿಕೆ, ಓದು, ಸ್ವಲ್ಪ ಕೃಷಿ, ಗಿಡ ಬೆಳೆಸುವಿಕೆ, ಮನೆಯವರೊಂದಿಗೆ ಸ್ವಲ್ಪ ಸಮಯ, ಸ್ನೇಹಿತರೊಂದಿಗೆ ಆಟ ಇವೆಲ್ಲಾ ಇರುವಂತೆ ಮಾಡಿ.

ಸ್ನಾನ, ಕೂದಲು ಒಪ್ಪವಾಗಿರಿಸುವಿಕೆ, ಪಾದರಕ್ಷೆ, ಶುಚಿಯಿಂದ ಕೂಡಿದ ಕೈಗಳು ಇವೆಲ್ಲಾ ಆರೋಗ್ಯದ ಅಭ್ಯಾಸಗಳೆಂಬುದರ ಅರಿವು ಮೂಡಿಸಿ.

ಆದಿತ್ಯ ವಾರಗಳಂದು ಶೂ, ಬ್ಯಾಗ್ ಮೊದಲಾದುವನ್ನು ಬಿಸಿಲಲ್ಲಿ ಒಣಗಿಸಿಡಲು ತಿಳಿಸಿರಿ.

ಹೋಮ್ ವರ್ಕ್ ಗಳನ್ನು ನಿಗದಿತವಾಗಿ ಮಾಡಲು ಸಹಕರಿಸಿ.

ರಾತ್ರಿಯೇ ವೇಳಾಪಟ್ಟಿ ನೋಡಿ ಪುಸ್ತಕಗಳನ್ನು ಜೋಡಿಸಿಡಲಿ.

ಹೆತ್ತವರ ಕನಸುಗಳನ್ನು ಮಕ್ಕಳ ತಲೆಯ ಮೇಲೆ ಹೊರಿಸಬಾರದು. ಬದಲಾಗಿ ಮಕ್ಕಳೇ ಸ್ವತಃ ಸ್ವಪ್ನ ಕಾಣುವಂತಾಗಲಿ…..

ಅದನ್ನು ಅನುಸರಿಸಿ ಅವರನ್ನು ಅವರೇ ರೂಪೀಕರಿಸಿಕೊಳ್ಳಲಿ.

ದೇಶದ ಸಂವಿಧಾನದ ಬಗ್ಗೆ ಕಲಿಸಿ ಕೊಡಿ .

ಕೃತಜ್ಞತೆ ಇರುವ ವ್ಯಕ್ತಿ, ಸ್ನೇಹವಿರುವ ಮಗು, ಬುದ್ಧಿವಂತ ಮಕ್ಕಳಾಗಿ ನಮ್ಮ ಮಕ್ಕಳು ಬೆಳೆಯುವಂತಾಗಲಿ….
ಕೀರ್ತಿ ತರುವ ನಮ್ಮ ಮಕ್ಕಳು ಎತ್ತರಕ್ಕೇರಲಿ…….
ಎಲ್ಲರಿಗೂ ಶುಭವಾಗಲಿ, ಒಳಿತಾಗಲಿ…‌

ಪೂಜಾ ಬಂಕಲಗಿ
ಚಿತ್ತಾಪುರ ಲೇಖಕರು

Total Views: 0
Share This Article