
The hospital barrier that invites death.

ಮೃತ್ಯು ವಿಗೆ ಆಹ್ವಾನ ನೀಡುತ್ತಿರುವ ಆಸ್ಪತ್ರೆಯ ತಡೆಗೋಡೆ.

ಗಂಗಾವತಿ. ನಗರದ ಸಾರ್ವಜನಿಕ ಆಸ್ಪತ್ರೆ ಉಪ ವಿಭಾಗದ ಹಿಂಭಾಗದಲ್ಲಿರುವ ಕಾಂಪೌಂಡ್ ಕಳೆದ ಮೂರು ತಿಂಗಳಿನಿಂದ ಸುರಿದ ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿತಗೊಂಡಿದ್ದು ಜೊತೆಗೆ ವಾಲಿಕೊಂಡಿದೆ.
ಪಕ್ಕದಲ್ಲಿ ವಿದ್ಯುತ್ ಟ್ರಾನ್ಸ್ ಫಾರಂ ಹೊಂದಿದ್ದು ಮುಂಗಾರು ಪ್ರವೇಶದಿಂದಾಗಿ ಯಾವುದೇ ಸಂದರ್ಭದಲ್ಲಿ ಮಳೆ ಬಂದರೂ ಸಹ ಕಾಂಪೌಂಡ್ ಗೋಡೆ ಸಂಪೂರ್ಣವಾಗಿ ಕುಸಿದು ಬೀಳುವುದರ ಜೊತೆಗೆ ವಿದ್ಯುತ್ ಟ್ರಾನ್ಸ್ಫರ್ ಗೆ ಉಂಟಾಗುವ ಎಲ್ಲಾ ಸಾಧ್ಯತೆಗಳು ಇದ್ದರೂ ಸಹ ಇದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಅಲ್ಲಿನ ವೈದ್ಯಾಧಿಕಾರಿಗಳ ಬೇ ಜವಾಬ್ದಾರಿ ಹಿಡಿದ ಕನ್ನಡಿಯಾಗಿದೆ ಎಂದು ಹೇಳಬಹುದು.
ಈ ಹಿನ್ನೆಲೆಯಲ್ಲಿ ತಕ್ಷಣವೇ ಉಪವಿಭಾಗದ ಆಸ್ಪತ್ರೆಯ ಆಡಳಿತ ಅಧಿಕಾರಿಗಳು ಹಾಗೂ ವೈದ್ಯ ಸಿಬ್ಬಂದಿ ವರ್ಗದವರು ಎಚ್ಚೆತ್ತುಕೊಂಡು ಕುಸಿತಗೊಂಡ ಹಾಗೂ ವಾಲಿದ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗುವುದರ ಜೊತೆಗೆ ಮುಂದಾಗುವ ಅನಾಹುತವನ್ನು ತಪ್ಪಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
