ಭಾಗ್ಯನಗರದ ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Man from Bhagyanagar missing: Request for help in finding him




ಭಾಗ್ಯನಗರದ ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಜಾಹೀರಾತು


ಕೊಪ್ಪಳ ಜೂನ್ 05 (ಕರ್ನಾಟಕ ವಾರ್ತೆ): ಕೊಪ್ಪಳದ ಭಾಗ್ಯನಗರದ ನಿವಾಸಿ ಸಂತೋಷ ತಂದೆ ಸುರೇಶ ಪಾಟೀಲ್ ಎಂಬ ವ್ಯಕ್ತಿಯು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಲು ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
 ಸಂತೋಷ ತಂದೆ ಸುರೇಶ ಪಾಟೀಲ್ ಎಂಬ ವ್ಯಕ್ತಿಯು 2026ರ ಏಪ್ರಿಲ್ 20 ರಂದು ಸಾಯಂಕಾಲ 5.30 ರಿಂದ ಏಪ್ರಿಲ್ 21ರ ಬೆಳಿಗ್ಗೆ 9.30 ಗಂಟೆ ನಡುವಿನ ಅವಧಿಯಲ್ಲಿ ಮನೆಯಿಂದ ಯಾರಿಗೂ ಹೇಳದೆ ಕೇಳದೆ ಹೋಗಿದ್ದು, ಇಲ್ಲಿಯವರೆ ವಾಪಸ್ ಬಂದಿರುವುದಿಲ್ಲ ಎಂದು ಕಾಣೆಯಾದ ವ್ಯಕ್ತಿಯ ಹೆಂಡತಿಯು ದೂರು ನೀಡಿದ್ದು, ಕೊಪ್ಪಳ ನಗರ ಪೊಲೀಸ್ ಠಾಣೆಯ ಗುನ್ನೆ ನಂ 69/2026 ಕಲಂ ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.
*ವ್ಯಕ್ತಿಯ ಚಹರೆ ಪಟ್ಟಿ:* ಸಂತೋಷ ತಂದೆ ಸುರೇಶ ಪಾಟೀಲ್, ವಯಸ್ಸು 25 ವರ್ಷ, ಎತ್ತರ 5.6 ಅಡಿ, ದುಂಡು ಮುಖ, ಕೆಂಪು ಮುಖ ಬಣ್ಣ, ಸದೃಡ ಮೈಕಟ್ಟು,ತಲೆಯಲ್ಲಿ ಕಪ್ಪು ಕೂದಲುಗಳು ಹಾಗೂ ಕುರುಚಲು ದಾಡಿ ಇದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. ಮನೆಯಿಂದ ಹೊರಡುವಾಗ ಬಿಳಿ ಆಪ್ ಶರ್ಟ್ ಮತ್ತು ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಈ ವ್ಯಕ್ತಿಯ ಬಗ್ಗೆ ಯಾರಿಗಾದರು ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ ನಂ.: 08539-230100 ಮತ್ತು 230222 ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಮೊನಂ: 9480803745 ಅಥವಾ ಕೊಪ್ಪಳ ನಗರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08539 220333 ಗೆ ಸಂಪರ್ಕಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article