
Sri Durga Shakti Natya Sangha at Pandit Siddarama Jambaladinni Theatre, Raichur City

ರಾಯಚೂರು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶ್ರೀ ದುರ್ಗಾ ಶಕ್ತಿ ನಾಟ್ಯಸಂಘ

ಗೋಕಾಕ್. ಬಳ್ಳಾರಿ ಜ್ಯೋತಿ ಇವರ ಸಂಯುಕ್ತ ಆಶ್ರಯ ದಲ್ಲಿ ಶ್ರೀ ಸಂಗಮೇಶ್ವರ ಸಂಸ್ಕೃತಿಕ ಹಾಗೂ ನಾಟ್ಯ ಸಂಘ ಗುಳೇದಗುಡ್ಡವರ ಸಹಕಾರದೊಂದಿಗೆ ಖ್ಯಾತ ನೃತ್ಯ ಗಾರತಿ ಜ್ಯೋತಿ ಬಳ್ಳಾರಿ ಅವರ ಸಹಾಯರ್ಥವಾಗಿ ನಡೆದ ನೃತ್ಯ ಕಾರ್ಯಕ್ರಮ ಮತ್ತು ಹೌದಲೇ ರಂಗಿ. ಉದಲೇನು ಪುಂಗಿ ಹಾಸ್ಯ ಭರಿತವಾಗಿರುವ ನಾಟಕದ ಪ್ರದರ್ಶನ ಜನರನ್ನೂ ನಗೆಗಡಲಿಗೆ ಕೊಂಡುಯುವುದರಲ್ಲಿ ಯಶಸ್ವಾಯಿತು. ಜ್ಯೋತಿಯನ್ನ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಂಗಭೂಮಿಯ ಕಲಾವಿದರು ಜೆ.ಡಿ.ಎಸ್ ಪಕ್ಷದ ರಾಜ್ಯ ಘಟಕದ ಪ್ರಮುಖ ಪದಾಧಿಕಾರಿಗಳಾದ ಮಹಾಂತೇಶ್ ಪಾಟೀಲ್ ಅತ್ತನೂರು ಮಾತನಾಡುತ್ತಾ. ಜ್ಯೋತಿ ಬಳ್ಳಾರಿಯವರು ನಮ್ಮ ಭಾಗದ ನಡೆದ ಹಲವಾರು ನಾಟಕಗಳಲ್ಲಿ ತಮ್ಮ ಡ್ಯಾನ್ಸಿನ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದಾರೆ. ಅವರು ಡ್ಯಾನ್ಸ್ ಮಾಡುತ್ತಾರೆ ಎಂದರೆ ಹಲವಾರು ಜನ ಡ್ಯಾನ್ಸನ್ನು ನೋಡಲು ಬರುತ್ತಿದ್ದರು .ಇಂದು ಅವರ ಸಹಾಯರ್ಥವಾಗಿ ಈ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇಂಥ ಕಲಾವಿದರಿಗೆ ಸಂಕಷ್ಟ ಸಮಯದಲ್ಲಿ ಸಹಾಯ ಮಾಡೋದು ಪ್ರತಿಯೊಬ್ಬ ಕಲಾಭಿಮಾನಗಳ ಕರ್ತವ್ಯವಾಗಿದೆ. ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಡಾ. ದಂಡಪ್ಪ ಬಿರಾದಾರ ಮಾತನಾಡುತ್ತಾ ನಿಜವಾದ ಕಲೆ ಸಿಗುವುದು ರಂಗಭೂಮಿಯ ಕಲಾವಿದರಲ್ಲಿ. ಸಿನಿಮಾದಲ್ಲಿ ಒಂದು ನೃತ್ಯವನ್ನು ಶೂಟಿಂಗ್ ಮಾಡಬೇಕಾದರೆ ಹತ್ತಾರು ಸಲ ಕಟ್. ಎಂದು ಹೇಳುತ್ತಾರೆ ಆದರೆ ಒಬ್ಬ ರಂಗಭೂಮಿ ಕಲಾವಿದ ರಂಗ ಪ್ರವೇಶ ಮಾಡಿದ ಮೇಲೆ ಆತನಿಗೆ ಇರುವಂತ ಡೈಲಾಗಳು ನಿರಂತರವಾಗಿ ಹೇಳುತ್ತಾನೆ ಕ.ಲೆಯನ್ನ ಕರಗತ ಮಾಡುವುದೇ ರಂಗಭೂಮಿ .ಇವತ್ತು ನಾವು ಸಣ್ಣವರು ಇರುವ ಸಂದರ್ಭದಲ್ಲಿ ಜ್ಯೋತಿಯವರು ನಮ್ಮ ಭಾಗದ ಕಡೆ ನಾಟಕಗಳನ್ನ ಅದರಲ್ಲಿ ನೃತ್ಯ ಮಾಡಲು ಬರ್ತಾ ಇದ್ದರು. ನಮ್ಮೆಲ್ಲ ಜನ ಅವರ ಡ್ಯಾನ್ಸನ್ನು ನೋಡಲು ಹೋಗುತ್ತಿದ್ದರು. ಇಂದು ಈ ನಾಟಕದಲ್ಲಿ ವಿಶೇಷವಾಗಿ ಸಂಜು ಬಸಯ್ಯ ಮತ್ತು ಪಲ್ಲವಿ. ಮಂಜು ಗುಳೇದಗುಡ್ಡ ಹಾಗೂ ದಿವ್ಯ ಇವರ ಆಕರ್ಷಣವಾದ ಕಲೆಯನ್ನೂ ಎಲ್ಲ ಪ್ರೇಕ್ಷಕರು ನೋಡಿ ತನುಮನ ಧನದಿಂದ ಸಹಾಯ ಮಾಡಿ ಕಲಾವಿದರನ್ನು ಪ್ರೋತ್ಸಾಹಿಸುವಂತ ಕಲೆ ರಾಯಚೂರಿನ ಜನತೆಗೆ ಇದೆ ಆ ಕೆಲಸವನ್ನು ತಾವು ಮಾಡಿದ್ದೀರಿ .ಉತ್ತರ ಕರ್ನಾಟಕದ ಜನ ರಂಗಭೂಮಿಯ ಕಲಾವಿದರನ್ನು ಗೌರವಿಸುತ್ತಾರೆ. ಸನ್ಮಾನಿಸುತ್ತಾರೆ. ಪ್ರೋತ್ಸಾಹಿಸುತ್ತಾರೆ. ಸಹಾಯ ಮಾಡುತ್ತಾರೆ. ಬೆಳೆಸುತ್ತಾರೆ ಅದು ಈ ಭಾಗದ ಜನರ ಗುಣವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಅಭಿನವ ಶ್ರೀ ಅಭಿನವ ರಾಚೊಟೀ ಶಿವಾಚಾರ್ಯ ಮಹಾಸ್ವಾಮಿಗಳು ಸೋಮವಾರಪೇಟೆ ರಾಯಚೂರು .ಮಾತನಾಡುತ್ತಾ ಇಂದು ಬಹಳಷ್ಟು ಕಲಾವಿದರು ಅದರಲ್ಲಿ ರಂಗಭೂಮಿಯ ಕಲಾವಿದರು ಇತ್ತೀಚಿಗೆ ಮೊಬೈಲು ಟಿವಿಗಳ ಪ್ರಭಾವದಿಂದಾಗಿ ನಾಟಕ ನೋಡುವುದನ್ನ ಕಡಿಮೆ ಮಾಡುತ್ತಿದ್ದೀರಿ .ರಂಗಭೂಮಿಯ ಕಲಾವಿದರು ಅವರು ತಮ್ಮ ಕಲೆಯನ್ನು ಪ್ರದರ್ಶನ ಮಾಡಬೇಕಾದರೆ ಕಲಾಭಿಮಾನಿಗಳು ಹೆಚ್ಚು ಪ್ರೋತ್ಸಾ ನೀಡಬೇಕು ಆರ್‌ಸಿಬಿಯ ಅಂತಿಮ ಕ್ರಿಕೆಟ್ ಮ್ಯಾಚ್ ನಡೆದಿದೆ .ಆದರೂ ಇದರ ಮಧ್ಯದಲ್ಲಿ ಇಷ್ಟು ಜನ ಪ್ರೇಕ್ಷಕರ ರೂಪದಲ್ಲಿ ತಾವು ಬಂದು ಕಲಾವಿದರಿಗೆ ಪ್ರೋತ್ಸಾ ನೀಡುವಂತ ಕೆಲಸವನ್ನು ಮಾಡುತ್ತಿದ್ದೀರಿ ವಿಶೇಷವಾಗಿ ಮಹಾಂತೇಶ್ ಪಾಟೀಲ್ ಅತ್ತು ನೂರು ಒಬ್ಬ ರಂಗಭೂಮಿಯ ಕಲಾವಿದರಾಗಿದ್ದು ಹಲವಾರು ರಂಗ ಭೂಮಿಯ ಕಲಾವಿದರಿಗೆ ಎಲ್ಲ ರೀತಿಯ ಸಹಾಯ ಮಾಡುವಂತಹ ಮನೋಭಾವನೆಯನ್ನು ಇಟ್ಟುಕೊಂಡಿದ್ದಾರೆ ವೇದಿಕೆಯಲ್ಲಿ ಇರುವ ಮಹನೀಯರ ಸಹ ಇವತ್ತು ಜ್ಯೋತಿ ಬಳ್ಳಾರಿ ಅವರ ಹಾಕಿಕೊಂಡು ಕಾರ್ಯಕ್ರಮಕ್ಕೆ ತನು ಮನ ಧನ ಸಹಾಯ ಮಾಡುವುದರ ಮೂಲಕ ಅವರ ಕಾರ್ಯಕ್ರಮಕ್ಕೆ ಎಲ್ಲರೂ ಬೆಂಬಲಿಸಬೇಕೆಂದು ಹೇಳಿದರು ನಂತರ ಸಂಜು ಬಸಯ್ಯ ಪಲ್ಲವಿ ದಿವ್ಯ ಮಂಜು ಗುಳೇದಗುಡ್ಡವರ ನಾಟಕದ ದೃಶ್ಯಗಳು ಜನರನ್ನು ನಗೆಗಡಲಿಗೆ ಕೊಂಡ ಹೊಯ್ದವು ವಿಶೇಷವಾಗಿ ಜ್ಯೋತಿ ಬಳ್ಳಾರಿಯವರ ಆಕರ್ಷಣಿವಾದ ನೃತ್ಯವು ಪ್ರೇಕ್ಷಕರಿಂದ ಚಪ್ಪಾಳೆಯನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮವನ್ನ ಸುರೇಶ್ ಅವ್ರು ನಿರೂಪಣೆ ಮಾಡಿದರ. ಸಂಚಾಲಕರಾದ ಸಂತೋಷ್ ಬಳ್ಳಾರಿಯವರು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರ ಚಂದ್ರಶೇಖರ ಪಾಟೀಲ್ ಮಿರ್ಜಾಪುರ್ ಕನ್ನಡ ಜಾನಪದ ಪರಿಷತ್ತಿನ ವಿಭಾಗಿಯ ಸಂಚಾಲಕರಾದ ಡಾ. ಶರಣಪ್ಪ ಗೋನಾಳ್ .ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿ ಡಾ. ಶಾಂತಾ ಕುಲಕರ್ಣಿ ಕನ್ನಡಪರ ಸಂಘಟನೆಯ ಕರವೇ ಅಧ್ಯಕ್ಷರಾದ ಅಶೋಕ್ ಕುಮಾರ್ ಜೈನ್ ಸಮಾಜಸೇವಕರಾದ ಗೋಪಾಲಯ್ಯ. ವೀರೇಂದ್ರ ಪಾಟೀಲ್ ಉದ್ಯಮದಾರರು. ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಡಾ. ನಾಗವೇಣಿ ಪಾಟೀಲ್. ರಾಜಪ್ಪ ಬಡಿಗೇರ್ ಅಂಬಾ ಭವಾನಿ ಸೇರದಂತೆ ಇನ್ನಿತರರು ಉಪಸ್ಥಿತರಿದ್ದರು.
