
Distribution of saplings for naming a child is a unique event
ಮಗುವಿಗೆ ನಾಮಕರಣಕ್ಕೆ ಸಸಿಗಳ ವಿತರಣೆ ಹೀಗೊಂದು ವಿಶಿಷ್ಟ ಕಾರ್ಯಕ್ರಮ



ಗಂಗಾವತಿ :ತಾಲೂಕಿನ ಡಣಾಪೂರ ಗ್ರಾಮದ ಹಸರಿ ಬಳಗ ಕೆಂಪು ಬಳಗದ ಹನುಮೇಶ ಭಾವಿಕಟ್ಟಿರವರ ಮಗನ ನಾಮಕರಣ ಅಂಗವಾಗಿ 100 ಸಸಿಗಳ ವಿತರಣೆ ಹಾಗೂ ಹೆಬ್ಬಳ ಶ್ರೀಗಳ ರಚಿತ ಮಾನವನಾಗು ಪುಸ್ತಕ ವಿತರಣೆ . ವಿಶಿಷ್ಟ ಕಾರ್ಯಕ್ರಮವನ್ನು ಡಾಣಾಪುರದ
ಗ್ರಾಮದ ನಿವಾಸದಲ್ಲಿ ಗುರುವಾರ ಜರುಗಿತು. ಸಮಾರಂಭದಲ್ಲಿ ಪಾಲ್ಗೊಂಡ ಲಯನ್ಸ್ ಕ್ಲಬ್ ಹಾಗೂ ಚಾರಣ ಬಳಗದ ಅಧ್ಯಕ್ಷ ಡಾಕ್ಟರ್ ಶಿವಕುಮಾರ್ ಬಾವಿ ಪಾಟೀಲ್ ಮಾತನಾಡಿ ಅತ್ಯಂತ ಪರಿಸರ ಪ್ರೇಮಿಯಾದ ಹನುಮೇಶ್
ಮೊದಲು ಮಗಳು ಕೃಷಿ ನಾಮಕರಣಕ್ಕೆ 100 ಸಸಿಗಳನ್ನು ವಿತರಣೆ ಹಾಗೂ ನಡೆಲಾಗಿದೆ. ಇದೊಂದು ಅತ್ಯಂತ ಅರ್ಥಪೂರ್ಣವಾದ ಕಾರ್ಯಕ್ರಮವಾಗಿದ್ದು ಇದರಿಂದ ಪರಿಸರ ಸಂರಕ್ಷಣೆ ಹಾಗೂ ಬಿಸಿಲಿನ ತಾಪಮಾನದಿಂದ ರಕ್ಷಣೆ ಆಗಲು ಸಾಧ್ಯ ಎಂದು ತಿಳಿಸಿದರು. ಮಕ್ಕಳ ತಜ್ಞ ಡಾಕ್ಟರ್ ಅಮರೇಶ ಪಾಟೀಲ್ ಮಾತನಾಡಿ ಮಗಳ ಸವಿನೆನಪಿಗಾಗಿ ಹೆಬ್ಬಾಳ ಶ್ರೀ ನಾಗಭೂಷಣ ಮಹಾಸ್ವಾಮಿಗಳ ಮಾನವನಾಗು ಹೈಕೂ ಸಂಪದ ಗ್ರಂಥವನ್ನು ಕೃಷಿ ನಾಮಕರಣ ಸವಿನೆನಪಿಗಾಗಿ ಮುದ್ರಿಸಿರುತ್ತದೆ .ಅದೇ ತರನಾಗಿ ಜನರಲ್ಲಿ ಪರಿಸರ ಕಾಳಜಿ ಮೂಡಲಿ ಎಂದು ಸಸಿಗಳನ್ನು ನೀಡಲಾಗಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿ ಯಾವುದೆ ಶುಭ ಕಾರ್ಯವಾಗಲಿ ಸಸಿಗಳನ್ನು ನಡುವ ನೀಡುವ ಮೂಲಕ ಆಚರಿಸುವ ಮನೋಭಾವನೆಯನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಪುಸ್ತಕ ವಿತರಣೆ ಸಾಹಿತ್ಯವು ಎಲ್ಲರ ಮನದಲ್ಲಿ ಮನೆ ಮಾಡಲಿ ಪುಸ್ತಕವನ್ನು ಓದುವಂತರಾಗಿ ಎಂಬ ಆಶಾ ಭಾವನೆಯಿಂದ ಪುಸ್ತಕ ನೀಡಲಾಗಿದೆ. ಎಂದು ಆಯೋಜಕ ಹನುಮೇಶ್ ತಿಳ್ಸೋದರ ಜೊತೆಗೆ ತಾವು ಈ ಹಿಂದೆ
ಕೃಷಿ ನಾಮಕೆಣಕ್ಕೆ 100 ಸಸಿಗಳನ್ನು ಹಾಗೂ ಕೃಷಿ ಮೊದಲ ವರ್ಷದ ಹುಟ್ಟು ಹಬ್ಬದ ಸವಿನೆನಪಿಗೆ ಸರಕಾರಿ ಶಾಲೆಯ ಎಲ್ ಕೆ ಜಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಗಿದೆ, ಈಗೆ ನಮ್ಮ ಸಮಾಜದೊಡನೆ ಸಡಗರದಿಂದ ಆಚರಿಸಲು ಸಂತೋಷವಾಗುತ್ತದೆ .
ಈ ಸಂದರ್ಭದಲ್ಲಿ 100 ಸಸಿಗಳನ್ನು ಹಾಗೂ 200 ಪುಸ್ತಕಗಳನ್ನು ವಿತರಣೆ ಮಾಡುವ ಮೂಲಕ
ವೃಷಾಂಕ ನಾಮಕರಣ ಮಾಡುವ ನೆರೆವೆರಿಸಲಾಯಿತು. ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.. ಈರಪ್ಪ ಆನಂದಪ್ಪ ಬಸಪ್ಪ ಸೇರಿದಂತೆ ಸ್ನೇಹಿತರು ಪಾಲ್ಗೊಂಡಿದ್ದರು.
