
Hotakka State Farmers' Association and Green Army support the movement demanding the abandonment of electricity privatization

ವಿದ್ಯುತ ಖಾಸಗೀಕರಣ ಕೈಬಿಡುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋಟಕ್ಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಬಲ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಅಂಬೇಡ್ಕರ್ ಸರ್ಕಲ್ ನಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕ ಅಥಣಿ
ತಹಶೀಲ್ದಾರ್ ಇವರ ಮುಖಾಂತರ ರಾಜ್ಯದಲ್ಲಿ ವಿದ್ಯುತ ಖಾಸಗೀಕರಣ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಮನವಿ ಸಲ್ಲಿಸಲಾಯಿತು.
ಕರ್ನಾಟಕ ಸರ್ಕಾರ ರಾಜ್ಯದ ವಿದ್ಯುತ್ ವಿತರಣಾ ವ್ಯವಸ್ಥೆಯನ್ನ ಖಾಸಗಿ ಕಂಪನಿಗೆ ವಹಿಸಲು ಮುಂದಾಗುತ್ತಿರುವ ವಿಷಯ ಸಾರ್ವಜನಿಕರಿಗೆ , ರೈತರಿಗೆ ಕಾರ್ಮಿಕರಿಗೆ ಹಾಗೂ ವಿದ್ಯುತ ಗ್ರಾಹಕರಿಗೆ ತೀವ್ರ ಆತಂಕ ಮೂಡಿಸಿದೆ.
ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖಂಡರು ಪ್ರವೀಣ ನಾಯಿಕ ವಿದ್ಯುತ ಖಾಸಗೀಕರಣ ಕೈಬಿಡುವಂತೆ ಒತ್ತಾಯಿಸಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕ ನಮ್ಮ ಬೆಂಬಲವಿರುತ್ತದೆ ಎಂದು ವ್ಯಕ್ತಪಡಿಸಿದರು.
ಹೆಸ್ಕಾಂ ಮತ್ತು ಬೆಸ್ಕಾಂ ಅಂತ ರಾಜ್ಯದ ವಿದ್ಯುತ ವಿತರನಾ ಸಂಸ್ಥೆಗಳಲ್ಲಿ ಕಾರ್ಯನಿರ್ಸುತ್ತಿರುವ ನೌಕರರು ಮತ್ತು ಗುತ್ತಿಗೆ ಕಾರ್ಮಿಕರನ ಉದ್ಯೋಗ ಭದ್ರತೆಯ ಮೂಲ ಪರಿಣಾಮ ಬೀರುವ ಸಾಧ್ಯತೆ ಇದೆ
ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಹಿಂಪಡೆಯಬೇಕೆಂದು ಒತ್ತಾಯ ಪೂರಕ ವಿನಂತಿಸಿದ್ದಾರೆ.
ಅಂಬೇಡ್ಕರ್ ಸರ್ಕಲದಲ್ಲಿ ಮಾನವ ಸರಪಳಿ ನಿರ್ಮಿಸಿ ಒಂದು ಗಂಟೆ ವಾಹನ ಸಂಚಾರ ಸ್ಥಗಿತಗೊಂಡಿತ್ತು ಇದನ್ನು ಗಮನಿಸಿ ತಹಸಿಲ್ದಾರ ಅನುಪಸ್ಥಿತಿಯಲ್ಲಿ ಉಪ ತಹಸಿಲ್ದಾರ ಆಗಮಿಸಿ ಮನವಿ ಸ್ವೀಕರಿಸಿ ಸರಕಾರದ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಗೌರವ ಅಧ್ಯಕ್ಷರು ಪ್ರಕಾಶ್ ಪೂಜಾರಿ,ಎಂ ಸಿ ತಾಂಬೋಳಿ, ತಾಲೂಕ ಅಧ್ಯಕ್ಷರು
ಡಿ ಎಂ ನಾಯಿಕ ತಾಲೂಕ ಉಪಾಧ್ಯಕ್ಷರು ಲಕ್ಷ್ಮಣ ಕೋಳಿ ತಾಲೂಕ ಕಾರ್ಯದರ್ಶಿ ದಶರಥ ನಾಯಕ್ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖಂಡರು ಅನಿಲ
ಬಾಮನೆ, ಎಂ ಶರ್ಮಾ, ಆರಂಭದ ತಾಲೂಕ ಕಾರ್ಯಾಧ್ಯಕ್ಷ ಚನ್ನಗೌಡ ಇಮಗೌಡರ, ಜಿಲ್ಲಾ ಮುಖಂಡ ಮುರುಘೇಂದ್ರಪ್ಪ ಅರ್ಜನಿಗೆ ಅರ್ಜನಗಿ , ಪ್ರಕಾಶ್ ಪೂಜಾರಿ, ಮಲ್ಲೇಶ್ ಪಡಸಲಗಿ, ಮಾದೇವ ನಿಕ್ಕಂ ,ಮಹಿಳಾ ಅಧ್ಯಕ್ಷರು ಪ್ರೀತಿ ಪೂಜಾರಿ ಶ್ರೀದೇವಿ ಚೌಗುಲಾ ತಾಲೂಕ ಮುಖಂಡರು ಇನ್ನು ಅನೇಕ ಮುಖಂಡರು ಉಪಸಿತರಿದ್ದರು
ವರದಿ ಮಹೇಶ್ ಶರ್ಮಾ
