
SIR Karnataka Resistance" massive protest in Koppal on May 30

ಮೇ ೩೦ ರಂದು ಕೊಪ್ಪಳದಲ್ಲಿ “ಎಸ್.ಐ.ಆರ್. ಕರ್ನಾಟಕ ಪ್ರತಿರೋಧ”
ಬೃಹತ್ ಪ್ರತಿಭಟನೆ

ಕೊಪ್ಪಳ: ಕೇಂದ್ರ ಚುನಾವಣಾ ಆಯೋಗವು ಜಾರಿಗೆ ತರುತ್ತಿರುವ ಮತದಾರರ ತೀವ್ರ ಪರಿಷ್ಕರಣೆ (ಎಸ್.ಐ.ಆರ್.) ಪ್ರಕ್ರಿಯೆಯನ್ನು ವಿರೋಧಿಸಿ ಮತ್ತು ರಾಜ್ಯದ ಮತದಾರರ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿ ಮೇ ೩೦ ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೊದಲ ಸುತ್ತಿನ “ಎಸ್.ಐ.ಆರ್. ಕರ್ನಾಟಕ ಪ್ರತಿರೋಧ” ಬೃಹತ್ ಹಕ್ಕೊತ್ತಾಯ ಚಳವಳಿಯನ್ನು ಆಯೋಜಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಸಾಹಿತಿಗಳು, ಚಿಂತಕರು, ಪ್ರಗತಿಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ.
ಪ್ರತಿಭಟನೆಯ ಹಿನ್ನೆಲೆ ಮತ್ತು ಆತಂಕಗಳು: ಕೋಟಿಗಟ್ಟಲೆ ಮತದಾರರ ಹಕ್ಕು ಚ್ಯುತಿ: ದೇಶದ ೧೩ ರಾಜ್ಯಗಳಲ್ಲಿ ಈಗಾಗಲೇ ಎಸ್.ಐ.ಆರ್. ಪ್ರಕ್ರಿಯೆ ನಡೆಸಿ, ಕನಿಷ್ಠ ೫ ಕೋಟಿ ಅರ್ಹ ಮತದಾರರು ಸೇರಿದಂತೆ ಒಟ್ಟು ೬.೫ ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಹೊರಹಾಕಲಾಗಿದೆ.
ಹೊಸದಾಗಿ ಹೆಸರು ನೋಂದಾಯಿಸಲು ೨೦೨೫ರ ಜೊತೆಗೆ ೨೦೦೨ರ ಮತದಾರರ ಪಟ್ಟಿಯ ದಾಖಲೆ ಅಥವಾ ಕಠಿಣವಾದ ೧೧ ದಸ್ತಾವೇಜುಗಳನ್ನು ಕೇಳಲಾಗುತ್ತಿದೆ.
ದುರ್ಬಲ ವರ್ಗಗಳ ಗುರಿ: ಲಾಜಿಕಲ್ ಡಿಸ್ಕಿçಪೆನ್ಸಿ (ಹೆಸರು, ವಿಳಾಸದ ಸಣ್ಣಪುಟ್ಟ ವ್ಯತ್ಯಾಸ) ನೆಪದಲ್ಲಿ ವಿವಾಹಿತ ಮಹಿಳೆಯರು, ಅಲೆಮಾರಿಗಳು, ದಲಿತರು, ಗ್ರಾಮೀಣ ಬಡವರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಉದ್ದೇಶಪೂರ್ವಕವಾಗಿ ಕಟಾವು ಮಾಡಲಾಗುತ್ತಿದೆ. ಇದು ವಿರೋಧ ಪಕ್ಷಗಳ ಮತ ಬ್ಯಾಂಕ್ ಕುಗ್ಗಿಸುವ ಮತ್ತು ಜನರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಮನುವಾದಿ ಹುನ್ನಾರವಾಗಿದೆ ಎಂದು ಸಂಘಟಕರು ಆರೋಪಿಸಿದ್ದಾರೆ.
ಪ್ರಮುಖ ಹಕ್ಕೊತ್ತಾಯಗಳು: ಕೇಂದ್ರ ಚುನಾವಣಾ ಆಯೋಗಕ್ಕೆ: ಜನವಿರೋಧಿ SIಖ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಿ, ಜನಸ್ನೇಹಿ ಪರಿಷ್ಕರಣೆ ತರಬೇಕು. ಮತದಾರರ ಹಕ್ಕು ಕಸಿಯುವ ‘ಲಾಜಿಕಲ್ ಡಿಸ್ಕಿçಪೆನ್ಸಿ’ ಸಾಫ್ಟ್ವೇರ್ ಅನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಮೆಷಿನ್ ರೀಡಬಲ್ ಫಾರ್ಮಾ್ಯಟ್‌ನಲ್ಲಿ ಸಾರ್ವಜನಿಕ ಪರಿಶೀಲನೆಗೆ ನೀಡಬೇಕು.
ಕರಡು ಪಟ್ಟಿ ತಯಾರಾದ ಬಳಿಕ ಕಡ್ಡಾಯವಾಗಿ ಗ್ರಾಮ/ವಾರ್ಡ್ ಸಭೆ ನಡೆಸಿ ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಬೇಕು. ದಾಖಲೆಗಳ ಸಲ್ಲಿಕೆ ಮತ್ತು ಅಪೀಲು ಸಲ್ಲಿಸಲು ಕನಿಷ್ಠ ೬ ತಿಂಗಳ ಕಾಲಾವಕಾಶ ನೀಡಬೇಕು.
ರಾಜ್ಯ ಸರ್ಕಾರಕ್ಕೆ ಒತ್ತಾಯ: ರಾಜ್ಯ ಸರ್ಕಾರವು ಈ ಹಕ್ಕೊತ್ತಾಯಗಳನ್ನು ಬೆಂಬಲಿಸಿ, ಅಗತ್ಯಬಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕು. ವಿಶೇಷ ಗ್ರಾಮ/ವಾರ್ಡ್ ಸಭೆಗಳನ್ನು ಕರೆದು, ೨೦೨೫ರ ಪಟ್ಟಿಯ ಆಧಾರದ ಮೇಲೆ ಅರ್ಹ ಮತದಾರರಿಗೆ ಮತದಾನ ಮತ್ತು ಸರ್ಕಾರಿ ಸೌಲಭ್ಯಗಳನ್ನು ಖಾತರಿಪಡಿಸುವ “ಸ್ಮಾರ್ಟ್ ಕಾರ್ಡ್” (ಮಹಾ ಗ್ಯಾರಂಟಿ ಕಾರ್ಡ್) ನೀಡಬೇಕು. ದಾಖಲೆಗಳಿಲ್ಲದ ಬಡವರಿಗೆ ತಕ್ಷಣವೇ ವಾಸಸ್ಥಳ ದೃಢೀಕರಣ ಪತ್ರ ನೀಡಲು ಅಧಿಕಾರಿಗಳಿಗೆ ಸೂಚಿಸಬೇಕು.
ಸಂದೇಶ: “ಇದು ಬಿಹಾರವೂ ಅಲ್ಲ, ಬಂಗಾಳವೂ ಅಲ್ಲ, ಬಸವಣ್ಣರ ಕರ್ನಾಟಕ” ಎಂಬ ಸಂದೇಶದೊAದಿಗೆ ನಾಗರಿಕರ ಬದುಕುವ ಮತ್ತು ಮತದಾನದ ಹಕ್ಕನ್ನು ರಕ್ಷಿಸಲು ಈ ಪ್ರಜಾಪ್ರಭುತ್ವವಾದಿ ಹೋರಾಟ ನಡೆಯುತ್ತಿದ್ದು, ಎಲ್ಲಾ ಜವಾಬ್ದಾರಿಯುತ ನಾಗರಿಕರು ಇದರಲ್ಲಿ ಭಾಗವಹಿಸಬೇಕಾಗಿ ವಿನಂತಿಸಲಾಗಿದೆ.
ಮೇ ೩೦ ಶನಿವಾರದÀಂದು ಬೆಳಿಗ್ಗೆ ೧೧ ಗಂಟೆಯಿAದ ನಗರದ ಗಡಿಯಾರ ಕಂಬದಿAದ ಅಶೋಕ ವೃತ್ತದವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಅಶೋಕ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಸಂಘಟಕರು ಮಾತನಾಡುವರು.
