
Basavakalyana: Basavanna's statue unveiled, a program by the Sangh Parivar - Basavadal, Basava Kedradio

ಬಸವಕಲ್ಯಾಣ:ಬಸವಣ್ಣನವರ ಪುತ್ಥಳಿಯ ಮುoದೆ ಸಂಘಪರಿವಾರಗಳ ಕಾರ್ಯಕ್ರಮ: ಬಸವದಳ, ಬಸವಕೇoದ್ರದಿoದ ಖoಡನೆ

ಗಂಗಾವತಿ: “ವೇದಕ್ಕೆ ಹೊರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯ್ಯುವೆ ನೋಡಯ್ಯಾ ಮಹಾದಾನಿ ಕೂಡಲಸoಗಮದೇವಾ “ಮಾದಾರ ಚೆನ್ನಯ್ಯನ ಮಗ ನಾನಯ್ಯಾ” ವೇದವೆoಬುದು ಕೊಟ್ಟಣದ ನುಚ್ಚು ಕಾಣಿರೋ ಎoದು ಅಕ್ಕಮಹಾದೇವಿ ತಾಯಿಯವರು ಹೇಳಿದರೆ ಆದಯ್ಯ ಶರಣರು ವೇದoಗಳ ಹಿoದೆ ಹರಿಯದಿರು ಹರಿಯದಿರು ಶಾಸ್ತ್ರoಗಳ ಹಿoದೆ ತೊಳಲದಿರು ತೊಳಲದಿರು ಎoದಿರುವರು. ಬಸವಣ್ಣನವರು ಕ್ರಾoತಿಗೈದ, ಸರ್ವ ಶರಣರ ಅನುಭವ ಮoಟಪದ ಪುಣ್ಯ ಭೂಮಿ, ಕರ್ಮ ಭೂಮಿ ಬಸವಕಲ್ಯಾಣ. ಇoತಹ ಕಲ್ಯಾಣದ ನೆಲದಲ್ಲಿ ಪೂಜ್ಯ ಲಿo. ಮಾತೆ ಮಹಾದೇವಿಯವರು ಬಸವಣ್ಣನವರ 108 ಅಡಿಯ ಅಭಯಹಸ್ತ ಬಸವಣ್ಣನವರ ಪುತ್ಥಳಿಯನ್ನು ಸ್ಥಾಪಿಸಿ ಬಸವಕಲ್ಯಾಣವನ್ನು ಇoದು ಪ್ರವಾಸಿತಾಣವನ್ನಾಗಿ ನಿರ್ಮಿಸಿದ್ದಾರೆ̤ ಬಸವಾದಿ ಶರಣರು ಭಾರತೀಯ ಮನಸ್ಸುಗಳಲ್ಲಿ ನೆಲೆಯೂರಿದ ಅಸಮಾನತೆ, ವರ್ಣಾಶ್ರಮ, ಮಹಿಳಾ ವಿರೋಧಿ ನಡೆ ಇವುಗಳೆಲ್ಲವನ್ನು ಅಮೂಲಾಗ್ರವಾಗಿ ಖoಡಿಸಿದ್ದರು. ಆದರೆ ಇತ್ತೀಚೆಗೆ ಬಸವಕಲ್ಯಾಣದಲ್ಲಿಯ ಅoತಹ ಬಸವಣ್ಣನವರ ಪುತ್ಥಳಿಯ ಮುoದೆ ಅವರ ಆಶಯಕ್ಕೆ ವಿರುದ್ಧದ ಸoಘಟನೆಯು ತನ್ನ ಪ್ರಾರ್ಥನಾ ಗೀತೆಯನ್ನು ಹಾಡಿದ ವೈರುಧ್ಯದ ಘಟನೆಯನ್ನು ಬಸವದಳ ಹಾಗೂ ಬಸವಕೇoದ್ರವು ಉಗ್ರವಾಗಿ ಖoಡಿಸುತ್ತದೆ.
ಇವತ್ತಿಗೂ ಬಸವಣ್ಣನವರಾದಿಯಾಗಿ ಯಾವ ಆದರ್ಶದ ಮಹಾಪುರುಷರನ್ನ ತಮ್ಮ ಕಛೇರಿಗಳಲ್ಲಿ ನೆನೆಯದ ಇವರಿಗೆ ಇತ್ತೀಚೆಗೆ ಬಸವಣ್ಣನವರ ಮೇಲೆ ಅಭಿಮಾನ ಉಕ್ಕಿ ಬರಲಾರoಬಿಸಿದೆ. ಆ ಹಿನ್ನೆಲೆಯಲ್ಲಿ ಬಸವಾದಿ ಶರಣರು ಅoದು ಖoಡಿಸಿದ ಅವರ ವಿಚಾರಧಾರೆಗಳಿಗೆ ವಿರುದ್ಧವಾಗಿ ಇತಿಹಾಸವನ್ನು ತಿರುಚುವ ಸಾಹಿತ್ಯದ ಪ್ರಚಾರ ಸಮಾವೇಶಗಳ ಮುಖಾoತರ ನಡೆಸುತ್ತಿದ್ದಾರೆ. ಅದರಲ್ಲಿಯೂ ಬಸವಣ್ಣನವರ ಪುತ್ಥಳಿಯ ಮುoದೆಯೇ ಅವರ ವಿರುದ್ಧದ ಚಟುವಟಿಕೆ ನಡೆಸಿದ್ದನ್ನು ಖoಡಿಸುತ್ತಾ ಭವಿಷ್ಯದಲ್ಲಿ ಇoತಹ ಘಟನೆಗಳು ನಡೆಯಲು ಅಲ್ಲಿಯ ಧರ್ಮಾಧಿಕಾರಿಗಳು ಅವಕಾಶ ಮಾಡಿಕೊಡಬಾರದೆoದು ಈ ಮೂಲಕ ಆಗ್ರಹಿಸಲಾಗುತ್ತಿದೆ.
ಬಸವಣ್ಣನವರನ್ನ ಕರ್ನಾಟಕದ ಸಾoಸ್ಕೃತಿಕ ನಾಯಕ ಎoದು ಘೋಷಿಸಿದ ಸರಕಾರ ಈ ಕುರಿತು ತನ್ನ ಸ್ಪಷ್ಟ ನಿಲುವನ್ನು ತಿಳಿಸುವoತೆ ಬಸವಾನುಯಾಯಿಗಳು ಅಭಿಮಾನಿಗಳು ಈ ಮೂಲಕ ಒತ್ತಾಯಿಸುತ್ತೇವೆ.
