‘ಜನರಿಂದ ನಾನು ಮೇಲೆ ಬಂದೆ’ ಚಿತ್ರದ ತಾಯಿ ಹಾಡು ಬಿಡುಗಡೆ ಮಾಡಿದಶೋಭಾ ಕರಂದ್ಲಾಜೆ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು




Shobha Karandlaje releases the song 'I came up from the people'

‘ಜನರಿಂದ ನಾನು ಮೇಲೆ ಬಂದೆ’ ಚಿತ್ರದ ತಾಯಿ ಹಾಡು ಬಿಡುಗಡೆ ಮಾಡಿದ
ಶೋಭಾ ಕರಂದ್ಲಾಜೆ

ಜಾಹೀರಾತು


ಬೆಂಗಳೂರು : ವಿಶ್ವ ತಾಯಂದಿರ ದಿನದ ಅಂಗವಾಗಿ ಶ್ರೀ ಮಂಜುನಾಥ ಫಿಲಂಸ್
ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಜನರಿಂದ ನಾನು ಮೇಲೆ ಬಂದೆ’ ಕನ್ನಡ
ಚಲನಚಿತ್ರದ ‘ಜಗವೇ ಪೂಜಿಸುವ ಗುಡಿಯಿರದಾ ದೇವತೆ’ ಎಂಬ ತಾಯಿ ಹಾಡನ್ನು
ಜನ ನಾಯಕಿ ಹಾಗೂ ಜನಪ್ರಿಯ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ
ಅವರು ಬಿಡುಗಡೆ ಮಾಡಿ ಹಾಡಿನಲ್ಲಿ ನಾಯಕ ನಟ ಗಂಧರ್ವರಾಜ್, ತಾಯಿ
ಮಧುಶ್ರೀ ವಸಂತ, ಮಾಸ್ಟರ್ ರೋನಕ್, ಬೇಬಿ ಧನ್ವಿತಾ ತುಂಬಾ ಚೆನ್ನಾಗಿ
ನಟಿಸಿದ್ದಾರೆಂದು ಚಿತ್ರ ತಂಡಕ್ಕೆ ಶುಭಕೋರಿದರು.
ಈ ಹಾಡಿನ ಸಾಹಿತ್ಯವನ್ನು ಪೃಥ್ವಿರಾಜ್ ಸಂಕಿ ಬರೆದಿದ್ದು, ಎ ಆರ್ ತನ್ವೀರ್ ಹಾಡಿದ್ದಾರೆ,
ಸಂಗೀತ ನಿರ್ದೇಶನವನ್ನು ಪ್ರಣವ್ ಸತೀಶ್ ಮಾಡಿದ್ದಾರೆ. ಗಂಧರ್ವ ರಾಜ್
(ಶಂಕರ), ಅಭಿಜಿತ್, ಶೈಲಜಾ ದ್ವಾರಕೀಶ್, ಚಾಮರಾಜ ಮಾಸ್ಟರ್, ನವಿಲುಗರಿ ನವೀನ್ ಪಿ
ಬಿ, ಶಿವಕುಮಾರ್ ಆರಾಧ್ಯ, ಜಯಪ್ರಕಾಶ್ ನಾಗತಿಹಳ್ಳಿ, ಪ್ರವೀಣ ಕುಲಕರ್ಣಿ,
ಸಂದೀಪ್ ಮಲಾನಿ, ಅನಿಲ್ ಕುಮಾರ್ ಬಾಬಿ, ಮಧುಶ್ರೀ ವಸಂತ, ಶಿವಣ್ಣ, ಆಪ್ತಿ
ಪಟವರ್ಧನ್, ಕೃತಿಕಾ ದಿವಾಕರ್, ಶಾಂತಾ ಪಾಪು, ಸುನಂದ ಕಲಬುರಗಿ, ಕಾಟೇರ
ಕೇಶವ್, ಅಂಬೇಡ್ಕರ್ ಮಹೇಶ್, ಡಾ.ಅಕ್ಷತ, ವಿಶಾಲ ಸತೀಶ್, ಲಲಿತ್ ಕೃಷ್ಣ,
ಯಶುರಾಜ್, ಶಶಿರೇಖಾ ಸೇರಿದಂತೆ ದೊಡ್ಡ ತಾರಾಬಳಗವಿದೆ.
ಛಾಯಾಗ್ರಾಹಣ ಮತ್ತು ಸಂಕಲನ ಟಿ ಆರ್ ಗೌತಮ್ , ಸಾಹಿತ್ಯ ನವಿಲುಗರಿ ನವೀನ್ ಪಿ
ಬಿ, ಪೃಥ್ವಿ ರಾಜ್ ಸಂಕಿ, ಭುವನ್ ಎಂ ಎಸ್ , ನೃತ್ಯ ನಿರ್ದೇಶನ , ಚಾಮರಾಜ ಮಾಸ್ಟರ್,
ಅರುಣ್ ಮಾಸ್ಟರ್, ಸತೀಶ್ ಕೃಷ್ಣ ಶೆಟ್ಟಿ, ಪೂಜಾ ರಾಯಸಂ , ಡಿ ಐ ಮತ್ತು
ಪೋಸ್ಟರ್ ಡಿಸೈನ್ ಟಿ ಆರ್ ಜಿ ಪಿಕ್ಸೆಲ್ಸ್ ಮಿಕ್ಸಿಂಗ್ ಮಾಸ್ಟರಿಂಗ್ ಪೂರ್ಣ ಶ್ರೀಖರ್ ಎಂ, ಪಿ ಆರ್ ಓ
ಆರ್ ಚಂದ್ರಶೇಖರ್, ಡಾ ಪ್ರಭು ಗಂಜೀಹಾಳ, ಡಾ ವೀರೇಶ ಹಂಡಿಗಿ, ನವಿಲುಗರಿ
ನವೀನ್ ಪಿ ಬಿ ಅವರು ಕಥೆ ಚಿತ್ರ ಕಥೆ ಸಂಭಾಷಣೆ ಜೊತೆ ನಿರ್ದೇಶನವನ್ನು
ಮಾಡಿದ್ದಾರೆ. ಸಹಾಯಕ ನಿರ್ದೇಶನ ಲಲಿತ್ ಕೃಷ್ಣ ಅವರದಿದ್ದು ಶ್ರೀಮತಿ ಬಿ.
ಹೇಮಾವತಿ ಬಂಡವಾಳ ಹೂಡಿದ್ದಾರೆ. ಮ್ಯೂಸಿಕ್ ಬಜಾರ್ ಯುಟ್ಯೂಬ್ ಚಾನೆಲ್ ಹಾಡು
ಬಿಡುಗಡೆ ಮಾಡಲಾಗಿದ್ದು ಎಲ್ಲರೂ ನೋಡಿ ಪ್ರೋತ್ಸಾಹ ನೀಡಬೇಕು, ಚಿತ್ರವೂ
ಕೂಡ ಅತೀ ಶೀಘ್ರದಲ್ಲೇ ಬೆಳ್ಳಿ ಪರದೆ ಮೇಲೆ ಬರಲಿದೆ ಎಂದು
ಚಿತ್ರ ತಂಡದವರು ತಿಳಿಸಿದ್ದಾರೆ.
**
-ಡಾ.ಪ್ರಭು ಗಂಜಿಹಾಳ
ಮೊ-೯೪೪೮೭೭೫೩೪೬

Total Views: 1
Share This Article