ಮೇ 24 ರಂದು 371(ಜೆ) ಹೋರಾಟಗಾರರ ಸಮಾವೇಶ ದುಂಡು ಮೇಜಿನ ಸಭೆಗೆ  ರಾಘವೇಂದ್ರ ಕುಷ್ಟಗಿ ಕರೆ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Raghavendra Kushtagi calls for 371(J) activists' convention round table meeting on May 24




ಮೇ 24 ರಂದು 371(ಜೆ) ಹೋರಾಟಗಾರರ ಸಮಾವೇಶ ದುಂಡು ಮೇಜಿನ ಸಭೆಗೆ  ರಾಘವೇಂದ್ರ ಕುಷ್ಟಗಿ ಕರೆ

ಜಾಹೀರಾತು


ಗಂಗಾವತಿ : ಹೈದ್ರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರದ ವತಿಯಿಂದ ದಿನಾಂಕ 24 ಮೇ 2026ರಂದು ರಾಯಚೂರಿನ ಕೊಠಾರಿ ಫಂಕ್ಷನ್ ಹಾಲ್‌ನಲ್ಲಿ “371(ಜೆ) ಹೋರಾಟಗಾರರ ಸಮಾವೇಶ, ದುಂಡು ಮೇಜಿನ ಸಭೆ ಹಾಗೂ ಕಲ್ಯಾಣ ಕರ್ನಾಟಕ ವಿಕಾಸ ವೇದಿಕೆ” ಸ್ಥಾಪನಾ ಸಮಾರಂಭ ಆಯೋಜಿಸಲಾಗಿದೆ ಎಂದು 371(ಜೆ) ಹೋರಾಟಗಾರರು ತಿಳಿಸಿದ್ದಾರೆ.
ಹೈದ್ರಾಬಾದ್‌ ಕರ್ನಾಟಕ ಪ್ರದೇಶವನ್ನು “ಕಲ್ಯಾಣ ಕರ್ನಾಟಕ”ವೆಂದು ಮರುನಾಮಕರಣ ಮಾಡಿದರೂ ಈ ಭಾಗದ ಯುವಜನರು, ವಿದ್ಯಾರ್ಥಿಗಳು ಹಾಗೂ ದುಡಿಯುವ ವರ್ಗದ ಜನರ ಅಭಿವೃದ್ಧಿಯ ಕನಸು ಇನ್ನೂ ನನಸಾಗಿಲ್ಲ. ಸಂವಿಧಾನದ 371(ಜೆ) ಕಲಂ ಜಾರಿಯಾದ ನಂತರ ಜನರಲ್ಲಿ ಮೂಡಿದ್ದ ನಿರೀಕ್ಷೆಗಳು ಸಾಕಾರವಾಗದೇ ನಿರಾಸೆಯಾಗಿದೆ ಎಂದು ಆರೋಪಿಸಿದರು.
ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ರಚಿಸಲಾದ ನಂಜುಂಡಪ್ಪ ವರದಿ ಆಧಾರದಲ್ಲಿ ಸಾವಿರಾರು ಕೋಟಿ ರೂ. ಅನುದಾನ ಮಂಜೂರಾದರೂ, ಭ್ರಷ್ಟಾಚಾರ ಮತ್ತು ದುರುಪಯೋಗದಿಂದ ಅಭಿವೃದ್ಧಿ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ಜಾರಿಯಾಗಿಲ್ಲ ಎಂದು ಟೀಕಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಳೆದ 12 ವರ್ಷಗಳಲ್ಲಿ ಸುಮಾರು 16 ಸಾವಿರ ಕೋಟಿ ರೂ. ವೆಚ್ಚ ಮಾಡಿರುವುದಾಗಿ ಸರ್ಕಾರ ಹೇಳಿದರೂ, 2022ರ ಸಿಎಜಿ ವರದಿಯಲ್ಲಿ 7 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ದುರುಪಯೋಗವಾಗಿದೆ ಎಂಬುದು ದಾಖಲಾಗಿದೆ.
2025-26ನೇ ಸಾಲಿನಲ್ಲಿ ಸರ್ಕಾರ ಘೋಷಿಸಿದ್ದ 5 ಸಾವಿರ ಕೋಟಿ ರೂ.ಗಳಲ್ಲಿ ಕೇವಲ 800 ಕೋಟಿ ರೂ.ಗಳಿಗೆ ಮಾತ್ರ ಕ್ರಿಯಾಯೋಜನೆ ಸಲ್ಲಿಕೆಯಾಗಿದ್ದು, ಉಳಿದ ಅನುದಾನ ಬಳಕೆಯಾಗದೇ ಉಳಿದಿದೆ.
ಸರ್ಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಂಖ್ಯಾ ಇಲಾಖೆ ಕಾರ್ಯದರ್ಶಿಯವರ ಪತ್ರದ ಮೂಲಕ
ಈ ಸಂಗತಿ ಬಹಿರಂಗವಾಗಿದೆ ಎಂದು ತಿಳಿಸಿದರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾಮಗಾರಿಗಳನ್ನು ಕೇಂದ್ರ ಸರ್ಕಾರದ ಡಬ್ಲೂಎಪಿಸಿಒಎಸ್ ಸಂಸ್ಥೆಯಿಂದ ಪರಿಶೀಲನೆ ನಡೆಸಬೇಕೆಂಬ ಆದೇಶ ಇದ್ದರೂ, ಅದನ್ನು ಪಾಲಿಸಲಾಗಿಲ್ಲ ಎಂದು ಆರೋಪಿಸಿದರು. ಪ್ರೊ. ಗೋವಿಂದ ರಾವ್ ವರದಿ ಪ್ರಕಾರ, ನಂಜುಂಡಪ್ಪ ವರದಿ ಜಾರಿಯಾದ ನಂತರವೂ ಈ ಭಾಗದ ಮಾನವಾಭಿವೃದ್ಧಿ ಸೂಚ್ಯಂಕ ಸುಧಾರಿಸುವ ಬದಲು ಕುಸಿದಿದೆ.
ಕಲ್ಯಾಣ ಕರ್ನಾಟಕದಲ್ಲಿ ಸುಮಾರು 30 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಅದರಲ್ಲಿ 10 ಸಾವಿರಕ್ಕೂ ಹೆಚ್ಚು ಗಣಿತ ಮತ್ತು ವಿಜ್ಞಾನ ಶಿಕ್ಷಕರ ಕೊರತೆ ಇದೆ. ಶಿಕ್ಷಣದ ಗುಣಮಟ್ಟ ಕುಸಿದಿದ್ದು, ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಯತ್ನ ನಡೆಯುತ್ತಿದೆ.
ಶಿಕ್ಷಕರಿಲ್ಲದ ಶಾಲೆಗಳು, ವೈದ್ಯರಿಲ್ಲದ ಆಸ್ಪತ್ರೆಗಳು, ಉದ್ಯೋಗವಿಲ್ಲದೇ ಸಂಕಷ್ಟದಲ್ಲಿರುವ ಯುವಜನತೆ ಮತ್ತು ವಲಸೆ ಹೋಗುತ್ತಿರುವ ಗ್ರಾಮೀಣ ಜನರ ಪರಿಸ್ಥಿತಿಯನ್ನು ಗಮನಿಸಿ ಮತ್ತೊಂದು ದೊಡ್ಡ ಹೋರಾಟದ ಅಗತ್ಯವಿದೆ ಎಂದು ಸಂಘಟಕರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ,ವೀರಣ್ಣ ಬಂಡಾರಿ, ಕನ್ನಡ ಪರ ಹೋರಾಟಗಾರರಾದ ರಾಜೇಶ ಅಂಗಡಿ,ಚನ್ನಬಸವ ಜೆಕೀನ್,ಎ.ಕೆ.ಮಹೇಶಕುಮಾರ ಸೇರಿದಂತೆ ಇತರರು ಇದ್ದರು

Total Views: 0
Share This Article