
Missing person: Public urged to help locate him

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ

ಕೊಪ್ಪಳ ಮೇ 05 (ಕರ್ನಾಟಕ ವಾರ್ತೆ): ಜಿಲ್ಲೆಯ ಕುಷ್ಟಗಿ ಪಟ್ಟಣದ ನಿವಾಸಿ 40 ವರ್ಷದ ವಿಜಯ ಕುಮಾರ ತಂದೆ ಸಿದ್ದರಾಮಪ್ಪ ಸೂಡಿ ಎಂಬ ವ್ಯಕ್ತಿಯು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಲು ಕುಷ್ಟಗಿಯ ಪೊಲೀಸ್ ಠಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಿಜಯ ಕುಮಾರ ಎಂಬ ವ್ಯಕ್ತಿಯು 2026ರ ಏಪ್ರಿಲ್ 11 ರಂದು ಬೆಳಿಗ್ಗೆ 8 ಗಂಟೆಗೆ ಸುಮಾರಿಗೆ ಮನೆಯಲ್ಲಿ ಯಾರಿಗೂ ಹೇಳದೆ ಮನೆ ಬಿಟ್ಟು ಹೋಗಿದ್ದು, ಕುಷ್ಟಗಿ ಪಟ್ಟಣದ ಬಸ್ ನಿಲ್ದಾಣ, ಬಸವೇಶ್ವರ ವೃತ್ತ ಇತರೆ ಕಡೆ ಹುಡುಕಾಡಿ ಎಲ್ಲಿಯೂ ಸಿಕ್ಕಿರುವುದಿಲ್ಲ ಎಂದು ಕಾಣೆಯಾದ ವ್ಯಕ್ತಿಯ ಸಹೋದರ ಕುಷ್ಟಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಠಾಣಾ ಗುನ್ನೆ ನಂ.92/2026 ಕಲಂ: 00ಎಂಪಿಬಿಎನ್‌ಎಸ್-2023 ಅಡಿಯಲ್ಲಿ ಮನುಷ್ಯ ಕಾಣೆ ರೀತ್ಯಾ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಚಹರೆ ಪಟ್ಟಿ: ವಿಜಯ ಕುಮಾರ ತಂದೆ ಸಿದ್ದರಾಮಪ್ಪ ಸೂಡಿ, ವಯಸ್ಸು 40 ವರ್ಷ, 5.2 ಅಡಿ ಎತ್ತರ, ಕೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ಉಂಗುರು ಕೂದಲು ಹೊಂದಿದ್ದು, ಮನೆಯಿಂದ ಹೊರಡುವಾಗ ಪಿಂಕ್ ಟಿ ಶರ್ಟ್, ಗ್ರೇ ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾನೆ. ಈ ವ್ಯಕ್ತಿಯು ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ.
ಈ ವ್ಯಕ್ತಿ ಯಾರಿಗಾದರು ಕಂಡುಬಂದಲ್ಲಿ ಅಥವಾ ಇತನ ಬಗ್ಗೆ ಮಾಹಿತಿ ದೊರೆತಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕರ ದೂರವಾಣಿ ಸಂಖ್ಯೆ: 08539-230111, ಗಂಗಾವತಿ ಡಿ.ಎಸ್.ಪಿ. ಮೊ.ಸಂ: 9480803721 ಹಾಗೂ ಕುಷ್ಟಗಿ ಸಿ.ಪಿ.ಐ. ಮೊ.ಸಂ: 9480803732 ಮತ್ತು ಕುಷ್ಟಗಿ ಪಿ.ಎಸ್.ಐ ಮೊ.ಸಂ: 9480803757 ಗೆ ಅಥವಾ ಕುಷ್ಟಗಿ ಪೊಲೀಸ್ ಠಾಣೆಗೆ ಮತ್ತು ಕೊಪ್ಪಳ ನಿಯಂತ್ರಣ ಕೊಠಡಿಗಾಗಲಿ ಮಾಹಿತಿ ನೀಡುವಂತೆ ಕುಷ್ಟಗಿ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
