KAAMS (ಕಾಮ್ಸ್) ಸುತ್ತ ಒಂದು ನೋಟ…

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

A look around KAAMS (Coms)

KAAMS (ಕಾಮ್ಸ್) ಸುತ್ತ ಒಂದು ನೋಟ…

ಜಾಹೀರಾತು

ನಮ್ಮ ಶಿಕ್ಷಕ ಬಂಧುಗಳಲ್ಲಿ ಸದ್ಯ ಅತಿ ಹೆಚ್ಚು ಚರ್ಚಿತ ವಿಷಯವಾಗಿದೆ. ಈ ವಿಷಯದ ಕುರಿತು ಕೆಲವು ಸಕಾರಾತ್ಮಕ ಅಂಶಗಳು ಇಲ್ಲಿವೆ. ಸ್ವಲ್ಪವಾದರೂ ಜಟಿಲತೆ ಕಡಿಮೆಯಾಗಬಹುದೆಂಬ ಆಶಯ…

  • KAAMS ಅಂದರೆ KARNATAKA ADVANCE ATTENDENCE MANAGEMENT SYSTEM
  • ಸರ್ಕಾರ 2026-27 ನೆ ಸಾಲಿನಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಅನುಷ್ಠಾನಗೊಳಿಸಲು ಹೊರಟಿರುವ ಒಂದು ವಿನೂತನ ಹಾಗೂ ಬಹು ನಿರೀಕ್ಷಿತ ಯೋಜನೆ.
  • ಹೊಸ ಯೋಜನೆ ಅಂದ ಕೂಡಲೇ ಸಮಸ್ಯೆ – ಸವಾಲುಗಳು ಬರುವುದು ಸಹಜ. ತಾಳ್ಮೆ ಇರಲಿ. ತಾಳ್ಮೆ ಇದ್ದರೆ ತಾನಾಗಿಯೇ ಅರ್ಧ ಸಮಸ್ಯೆಗೆ ಪರಿಹಾರ ಸಿಗಲಿದೆ.
  • ಈ KAAMS ಯೋಜನೆಯ ಅಂತಃತಿರುಳು ‘ಸಮಯ ಪಾಲನೆ ‘ ಅಂದ್ರೆ ಇಷ್ಟು ದಿನ ನಾವು ಸಮಯ ಪಾಲನೆ ಮಾಡುತ್ತಿರಲಿಲ್ಲವೇ? ಪ್ರಶ್ನೆ ಮೂಡುವುದು ಸಹಜ, ಆದರೆ ಪ್ರಶ್ನೆ ಬದಿಗಿಟ್ಟು, ಪ್ರಸ್ತುತ ತಂತ್ರಜ್ಞಾನ ಅಳವಡಿಕೆಯಿಂದ ನಾವು Update ಆಗಬಹುಹುದಲ್ಲವೆ..ರಚನಾತ್ಮಕವಾಗಿ ಯೋಚಿಸಿರಿ.
  • ಯಾವಾಗಲೂ, ನಮ್ಮ ನೆಚ್ಚಿನ ಹಾಗೂ ಮೆಚ್ಚಿನ ಅಧಿಕಾರಿಗಳಾದ ಶ್ರೀ ಸೋಮಶೇಖರ ಗೌಡರು ಹೇಳುವಂತೆ ನಾವು ಸುಮಾರು 25-30 ವರ್ಷಗಳು ಸೇವೆಯಲ್ಲಿ ಕಳೆದರೂ ಇನ್ನೂ ‘ಸಮಯ ಪಾಲನೆ’ ಬಗ್ಗೆ ಮಾತನಾಡುತ್ತೇವೆಂದರೆ “ಗುಣಾತ್ಮಕ ಕಲಿಕೆ” ಬಗ್ಗೆ ಮಾತನಾಡುವುದು ಅಣಕವಷ್ಟೆ..!
  • ನಾವು ಶಿಕ್ಷಕರು, ಸರಕಾರಿ ವ್ಯವಸ್ಥೆಯ ಒಂದು ಭಾಗ. ಯೋಜನೆ ಬಗ್ಗೆ ನಮ್ಮಲ್ಲಿ ಆರೋಗ್ಯಕರ ಚರ್ಚೆ ಇರಲಿ, ಯೋಜನೆಗೆ ಪೂರಕವಾಗಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ದಿಸೆಯಲ್ಲಿ ನಮ್ಮ ಯೋಚನೆ – ಆಲೋಚನೆಗಳಿರಲಿ. ನಕಾರಾತ್ಮಕ ಯೋಚನೆ ಬೇಡವೆ ಬೇಡ.
  • ಅಲ್ಲದೆ, ಸದರಿ KAAMS ಯೋಜನೆ ಸಾಕಷ್ಟು ಪ್ರಾಯೋಗಿಕವಾಗಿ ಅನುಷ್ಠಾನ (PILOT IMPLIMENT) ಮಾಡಿ, ಯಶಸ್ವಿಯಾದ ಮೇಲೇನೆ ಈ ಯೋಜನೆ ರಾಜ್ಯಾದ್ಯಂತ ಜಾರಿಗೆ ತರಲು ಹೊರಟಿದೆ.
  • ಈ ಹೊಸ ಯೋಜನೆ ಆರಂಭದಲ್ಲಿ ಸ್ವಲ್ಪ ಕಿರಿ ಕಿರಿಯಾಗಬಹುದು. ಆದರೆ ನಮಗೆ ಒಪ್ಪಿಕೊಳ್ಳುವ ಹಾಗೂ ಅಪ್ಪಿಕೊಳ್ಳುವ ಮನಸ್ಥಿತಿ ಬಂದರೆ ಈ ಯೋಜನೆ ನಮ್ಮ ವೃತ್ತಿ ಬದುಕಿನ ಭಾಗವೇ ಆಗುತ್ತದೆ. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ.
  • ಈ KAAMS ಯೋಜನೆ ಸರ್ಕಾರದ ಬಹು ನಿರೀಕ್ಷಿತ ಯೋಜನೆಯಾಗಿದ್ದು, ಈ ಯೋಜನೆಯನ್ನು ಮಕ್ಕಳ ಬದುಕಿಗೆ ಬೆಳಕು ನೀಡುವ ದೀಪವಾಗಿಸೋಣ. ಬದಲಾಗಿ ಬೆಂಕಿಯಾಗಿಸುವುದು ಬೇಡ.
  • ಬದಲಾವಣೆ ಜಗದ ನಿಯಮ,. ಹರಿಯುವ ನೀರಿನಂತೆ ನಿರಂತರ, ಅದನ್ನು ತೆರೆದ ಮನಸ್ಸಿನಿಂದ ಸ್ವೀಕರಿಸುವುದು ನಮ್ಮೆಲ್ಲರ ಇಂದಿನ ಅನಿವಾರ್ಯತೆ ಹಾಗೂ ಅಗತ್ಯ ಕೂಡ.
  • ಯಾವುದೇ ಯೋಜನೆ 100 % ಸಾಕಾರಗೊಳ್ಳುವುದು ದೂರದ ಮಾತು, ಗರಿಷ್ಠ ಮಟ್ಟದ ಪ್ರಯತ್ನ ಮಾಡೋಣ.ಆ ಬಗ್ಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ.
  • ಕೊನೆಯದಾಗಿ ಒಂದು ಮಾತು, ಶಾಲಾವಧಿ ಅಂದರೆ ಬೆಳಿಗ್ಗೆ 9:30 ರಿಂದ 4:30 ಇದು ನಮ್ಮ ಸಮಯವಲ್ಲ, ಮಕ್ಕಳ ಸಮಯ,ದಯವಿಟ್ಟು ಈ ಸಮಯ ಅವರಿಗಾಗಿಯೇ ಮೀಸಲಿಡೋಣ. ಅವರ ಜೊತೆಯಲ್ಲೇ ಕಳೆಯೋಣ.
  • ನಾಗರಾಜರಾವ್  ಬಡಿಗೇರ
    ಶಿಕ್ಷಕರು
    ಬಂಡಿಬಸಪ್ಪ ಕ್ಯಾಂಪ್
Total Views: 1
Share This Article