ಗಂಗಾವತಿಯಲ್ಲಿ ವಸತಿ ನಿಲಯಕ್ಕೆ ಬಾಡಿಗೆ ಕಟ್ಟಡದ ಅವಶ್ಯ: ಮಾಲೀಕರಿಗೆ ಆಹ್ವಾನ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Need for rental building for hostel in Gangavathi: Invitation to owners

ಗಂಗಾವತಿಯಲ್ಲಿ ವಸತಿ ನಿಲಯಕ್ಕೆ ಬಾಡಿಗೆ ಕಟ್ಟಡದ ಅವಶ್ಯ: ಮಾಲೀಕರಿಗೆ ಆಹ್ವಾನ

ಜಾಹೀರಾತು


ಕೊಪ್ಪಳ ಏಪ್ರಿಲ್ 27 (ಕರ್ನಾಟಕ ವಾರ್ತೆ): ‎ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಂಗಾವತಿಯ ಡಾ. ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ನಿರ್ವಹಣೆಗಾಗಿ ಗಂಗಾವತಿ ನಗರ ವ್ಯಾಪ್ತಿಯಲ್ಲಿ 200 ವಿದ್ಯಾರ್ಥಿಗಳು ವಾಸ್ತವ್ಯವಿರಲು ಒಂದು ಸುಸಜ್ಜಿತವಾದ ಕಟ್ಟಡವನ್ನು ಮಾಹೆಯಾನ ಬಾಡಿಗೆ ರೂಪದಲ್ಲಿ ಪಡೆಯಲು ಅವಶ್ಯಕತೆ ಇದ್ದು, ಆಸ್ತಕ ಮಾಲೀಕರಿಗೆ ಆಹ್ವಾನಿಸಲಾಗಿದೆ.
 ‎ಆಸಕ್ತ ಕಟ್ಟಡದ ಮಾಲೀಕರು ಸಹಾಯಕ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ ಗಂಗಾವತಿ ಮೊ.ಸಂ: 7022694905 ಗೆ ಸಂಪರ್ಕಿಸಬೇಕೆಂದು ಗಂಗಾವತಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article