ಗಂಗಾವತಿಯಲ್ಲಿ ನ.1ರಂದು ಕನ್ನಡ ಗೀತೋತ್ಸವ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
ಜಾಹೀರಾತು

ಗಂಗಾವತಿಯಲ್ಲಿ ನ.1ರಂದು ಕನ್ನಡ ಗೀತೋತ್ಸವ

ಜಾಹೀರಾತು

ದಿವಂಗತ ಗಾಯಕಿ ಎಸ್. ಜಾನಕಿ ಸ್ಮರಣಾರ್ಥ ವಿಶೇಷ ಸಂಗೀತ ಕಾರ್ಯಕ್ರಮ

Kannada Music Festival in Gangavathi on November 1st

ಗಂಗಾವತಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಾಗೂ ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ದಿವಂಗತ ಎಸ್. ಜಾನಕಿ ಅವರ ಸ್ಮರಣಾರ್ಥ ನವೆಂಬರ್ 1ರಂದು ನಗರದ ಶ್ರೀ ಕೊಟ್ಟೂರು ಬಸವೇಶ್ವರ ವೇದಿಕೆಯಲ್ಲಿ ‘ಕನ್ನಡ ಗೀತೋತ್ಸವ’ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಗೀತ ಸ್ವರಾಂಜಲಿ ಕಲಾ ತಂಡ ಹಾಗೂ ಪರಶುರಾಮ ಕರೋಕೆ ಸ್ಟುಡಿಯೋ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಕೆ. ನಿಂಗಜ್ಜ, ಡಾ. ಮಲ್ಲನಗೌಡ, ಕರೋಕೆ ಸ್ಟುಡಿಯೋ ಮಾಲೀಕ ಪರಶುರಾಮ ದೇವರಮನಿ, ಶರಣಪ್ಪ, ಮಿರೇಜ್, ಶಿವಪ್ಪ ಹುಳ್ಳಿ, ಶಂಬಣ್ಣ ದೊಡ್ಮನಿ ಹಾಗೂ ಸಂಗೀತ ಸ್ವರಾಂಜಲಿ ಕಲಾ ತಂಡದ ಸಂಚಾಲಕ ಹನುಮಂತಪ್ಪ ಹುಲಿಹೈದರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಜಾನಕಿ ಅವರ ಜನಪ್ರಿಯ ಗೀತೆಗಳ ಗಾಯನ
ಕಾರ್ಯಕ್ರಮದಲ್ಲಿ ಕರೋಕೆ ಹವ್ಯಾಸಿ ಕಲಾವಿದರು ದಿವಂಗತ ಎಸ್. ಜಾನಕಿ ಅವರು ಹಾಡಿರುವ ಜನಪ್ರಿಯ ಕನ್ನಡ ಚಲನಚಿತ್ರ ಗೀತೆಗಳನ್ನು ಹಾಗೂ ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಹೆಚ್ಚಿಸುವ ಕನ್ನಡ ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಸಂಗೀತದ ಮೂಲಕ ಕನ್ನಡ ನಾಡು-ನುಡಿ, ಭಾಷೆ ಮತ್ತು ಸಂಸ್ಕೃತಿಯ ಅಭಿಮಾನವನ್ನು ಸಾರುವ ಈ ವಿಶೇಷ ಕಾರ್ಯಕ್ರಮಕ್ಕೆ ಸಂಗೀತಾಸಕ್ತರು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಗೀತ ಸ್ವರಾಂಜಲಿ ಕಲಾ ತಂಡದ ಯಲ್ಲಪ್ಪ ಪೊಲಕಾಲ್, ಲಲಿತಮ್ಮ, ತಿಪ್ಪೇಸ್ವಾಮಿ ಹೊಸಮಠ ಹಾಗೂ ತಂಡದ ಸದಸ್ಯರು ಮನವಿ ಮಾಡಿದ್ದಾರೆ.

Total Views: 0
ಜಾಹೀರಾತು
Share This Article
Leave a Comment