“ಕಾರಟಗಿಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ವಿಜಯವಾಡದಲ್ಲಿ ಪತ್ತೆ ಗ್ಲೋಬಲ್ ಪಬ್ಲಿಕ್

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
ಜಾಹೀರಾತು

“ಕಾರಟಗಿಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ವಿಜಯವಾಡದಲ್ಲಿ ಪತ್ತೆ ಗ್ಲೋಬಲ್ ಪಬ್ಲಿಕ್

ಜಾಹೀರಾತು

ಶಾಲೆಯ ಅಧ್ಯಕ್ಷರ ಸ್ನೇಹಿತನ ಸಮಯಪ್ರಜ್ಞೆಯಿಂದ ಮಕ್ಕಳ ರಕ್ಷಣೆ

Students who went missing from Karatagi found in Vijayawada – Global Publi

ಕಾರಟಗಿ, ಅ.31: ಪಟ್ಟಣದ ಗ್ಲೋಬಲ್ ಪಬ್ಲಿಕ್ ಶಾಲೆಯಿಂದ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ವಿಜಯವಾಡ ರೈಲ್ವೆ ನಿಲ್ದಾಣದಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದು, ಪೋಷಕರಲ್ಲಿ ಮನೆಮಾಡಿದ್ದ ಆತಂಕ ದೂರವಾಗಿದೆ. ನಾಪತ್ತೆಯಾಗಿದ್ದ ವಿದ್ಯಾರ್ಥಿಗಳನ್ನು ಕಾರಟಗಿ ಪಟ್ಟಣದ ಜೀವನ್ ಸಜ್ಜನ್ (16) ಹಾಗೂ ಮಸ್ಕಿ ತಾಲೂಕಿನ ತುಗಲದಿನ್ನಿ ಗ್ರಾಮದ ಚೇತನ್ ಪೊಲೀಸ್ ಪಾಟೀಲ್ (15) ಎಂದು ಗುರುತಿಸಲಾಗಿದೆ.

ಇಬ್ಬರೂ ಗ್ಲೋಬಲ್ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅ.30ರ ಮಧ್ಯರಾತ್ರಿ 1.32ರ ಸುಮಾರಿಗೆ ಶಾಲೆಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಇಬ್ಬರು ವಿದ್ಯಾರ್ಥಿಗಳು ಶಾಲೆಯಿಂದ ಹೊರಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು. ಬಳಿಕ ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯ ಆರಂಭಿಸಲಾಗಿತ್ತು. ದಸರಾ ರಜೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಾಯಿಯ ಮೊಬೈಲ್ ಮೂಲಕ ಒಡಿಶಾದ ಪುರಿ ಜಗನ್ನಾಥ ದೇವಸ್ಥಾನ ಹಾಗೂ ಭುವನೇಶ್ವರಕ್ಕೆ ತೆರಳಲು ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡಿರುವ ಮಾಹಿತಿ ಲಭಿಸಿತ್ತು.

ಟಿಕೆಟ್ ಬುಕ್ ಮಾಡಿದ ಸಂದೇಶ ಮೊಬೈಲ್‌ಗೆ ಬಂದಿರುವುದನ್ನು ಆಧರಿಸಿ ಅವರ ಪ್ರಯಾಣದ ಬಗ್ಗೆ ಸುಳಿವು ದೊರೆತಿತ್ತು. ಅಲ್ಲದೆ, ಗುಂತಕಲ್‌ನಲ್ಲಿ ಸ್ನೇಹಿತರೊಂದಿಗೆ ಫೋನ್ ಸಂಪರ್ಕದಲ್ಲಿದ್ದ ಮಾಹಿತಿ ಕೂಡ ಶೋಧ ಕಾರ್ಯಕ್ಕೆ ನೆರವಾಯಿತು.

ಈ ಮಾಹಿತಿಯನ್ನು ಗ್ಲೋಬಲ್ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಕೊರಿಪಲ್ಲಿ ಅರುಣ್ ಕುಮಾರ್ ಅವರು ತಮ್ಮ ಬಾಲ್ಯದ ಸ್ನೇಹಿತ ರಾಜಾ ಅವರಿಗೆ ತಿಳಿಸಿದರು. ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜಾ ಅವರ ಸ್ನೇಹಿತರ ಸಹಕಾರದಿಂದ ವಿಜಯವಾಡ ರೈಲ್ವೆ ನಿಲ್ದಾಣದಲ್ಲಿ ಶೋಧ ನಡೆಸಲಾಗಿದ್ದು, ಅ.31ರ ಬೆಳಗಿನ ಜಾವ ಸುಮಾರು 3.30ಕ್ಕೆ ಇಬ್ಬರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕಾರಟಗಿಗೆ ಕರೆತಂದು ಕುಟುಂಬಸ್ಥರಿಗೆ ಒಪ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಶಾಲೆಯ ಸಂಸ್ಥಾಪಕ ಅಧ್ಯಕ್ಷ ಕೊರಿಪಲ್ಲಿ ಅರುಣ್ ಕುಮಾರ್ ತಿಳಿಸಿದ್ದಾರೆ.

ಸಮಯೋಚಿತ ಮಾಹಿತಿ ಹಾಗೂ ತ್ವರಿತ ಕಾರ್ಯಾಚರಣೆಯಿಂದ ಇಬ್ಬರು ವಿದ್ಯಾರ್ಥಿಗಳು ಸುರಕ್ಷಿತವಾಗಿ ಪತ್ತೆಯಾಗಿರುವುದು ಪೋಷಕರಲ್ಲಿ ನೆಮ್ಮದಿ ಮೂಡಿಸಿದೆ.”

Total Views: 1
ಜಾಹೀರಾತು
Share This Article
Leave a Comment