ನಾಮಫಲಕ ಹಾಕಲು ಆರ್.ಬಿ.ಪಾಟೀಲ್ ಒತ್ತಾಯ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
R.B. Patil insists on putting up a nameplate




ನಾಮಫಲಕ ಹಾಕಲು ಆರ್.ಬಿ.ಪಾಟೀಲ್ ಒತ್ತಾಯ

ಜಾಹೀರಾತು

ಗಂಗಾವತಿ: ಗಂಗಾವತಿ ನಗರಸಭೆ ವ್ಯಾಪ್ತಿಯ ಬಹತೇಕ ಬೀದಿಗಳು ಒಂದೇ ಹೆಸರಿನಿಂದ ಕರೆಯುವುದರಿಂದಾಗಿ ವಿಳಾಸ ಸರಿಯಾಗಿ ದೊರೆಯದೆ ಅಂಚೆ ಇಲಾಖೆ ಸೇರಿದಂತೆ ಹೊಸದಾಗಿ ಮನೆಗೆ ಬರುವ ಅತಿಥಿಗಳು ಇಡೀಯಾಗಿ ಏರಿಯಾ ಎಡತಾಕುವ ಸ್ಥಿತಿ ನಿರ್ಮಾಣವಾಗಿದ್ದು ನಗರಸಭೆ ಪ್ರತಿಬೀದಿಗೂ ಶೀಘ್ರ ಸೂಚನಾ ನಾಮಫಲಕ ಹಾಕುವ ಮುಖೇನ ವಾರ್ಡುಗಳ ವ್ಯಾಪ್ತಿಯನ್ನು ಸರಿಯಾಗಿ ಗುರುತಿಸಬೇಕೆಂದು ಡಾ.ಆರ್.ಬಿ.ಪಾಟೀಲ್ ಪೌಂಡೇಷನ್‌ನ ಡಾ.ಆರ್.ಬಿ.ಪಾಟೀಲ್ ವಕೀಲರು ಒತ್ತಾಯಿಸಿದ್ದಾರೆ.
ನಗರದ ಗುಂಡಮ್ಮ ಕ್ಯಾಂಪ್, ಮುರಹರಿ ನಗರ, ಟೀರ‍್ಸ್ ಕಾಲೋನಿ, ಲಕ್ಷಿö್ಮÃ ಕ್ಯಾಂಪ್, ಅಂಬೇಡ್ಕರ್ ನಗರ, ಗಾಂಧಿನಗರ, ವಿರುಪಾಪುರ, ಜಂತಕಲ್, ಚಲುವಾದಿ ವಾಡ, ಬೇಂಡರವಾಡ, ಕಿಲ್ಲಾ ಏರಿಯಾ, ಲಿಂಗರಾಜ್ ಕ್ಯಾಂಪ್, ಹೆಚ್.ಆರ್.ಎಸ್.ಕ್ಯಾಂಪ್, ಬನ್ನಿಗಿಡ ಕ್ಯಾಂಪ್, ಡಗ್ಗಿ ಕ್ಯಾಂಪ್, ಪ್ರಶಾಂತ ನಗರ ಸೇರಿದಂತೆ ಬಹುತೇಕ ಪ್ರದೇಶಗಳು ಸೂಚನಾ ಫಲಕಗಳಲ್ಲಿದೆ ಸುಮಾರು ಏಳೆಂಟು ಬೀದಿಗಳು ಒಂದೇ ಹಸರಿನಿಂದ ಕರೆಯುವುದರಿಂದಾಗಿ ಮನೆಗಳ ವಿಳಾಸ ಹುಡುಕುವುದು ತುಂಬಾ ಕಷ್ಟದಾಯಕವಾಗುತ್ತಿದೆ, ಕಾರಣ ನಗರಸಭೆ ಪೌರಾಯುಕ್ತರು ಕೂಡಲೆ ಸೂಚನಾ ನಾಮಫಲಕ ಹಾಕುವ ಮೂಲಕ ವಿಳಾಸ ಹುಡುಕಿ ಬರುವವರಿಗೆ ಸರಿಯಾಗಿ ಮಾಹಿತಿ ದೊರೆಯುವಂತೆ ಮಾಡಬೇಕೆಂದು ಪಾಟೀಲರು ಆಗ್ರಹಿಸಿದ್ದಾರೆ.

Total Views: 0
Share This Article