ಬೆಳಗಾವಿಯಲ್ಲಿ 𝟭𝟬𝟬 ಕೋಟಿ ರೂ. ವೆಚ್ಚದಲ್ಲಿ𝟭𝟬𝟬 ಕೋಟಿ ರೂ. ವೆಚ್ಚದಲ್ಲಿ ತಿರುಪತಿ ವೆಂಕಟೇಶ್ವರ’ ದೇವಸ್ಥಾನ:ತಿರುಪತಿ ವೆಂಕಟೇಶ್ವರ’ ದೇವಸ್ಥಾನ:𝗧𝗧𝗗 ಗೆ 𝟳 ಎಕರೆ ಭೂಮಿ ಹಸ್ತಾಂತರ

H.Mallikarjun
H.Mallikarjun - Kalyanasiri
4 Min Read
ಜಾಹೀರಾತು

Tirupati Venkateswara Temple in Belgaum: 𝟳 acres of land handed over to

ಬೆಳಗಾವಿಯಲ್ಲಿ 𝟭𝟬𝟬 ಕೋಟಿ ರೂ. ವೆಚ್ಚದಲ್ಲಿ𝟭𝟬𝟬 ಕೋಟಿ ರೂ. ವೆಚ್ಚದಲ್ಲಿ ತಿರುಪತಿ ವೆಂಕಟೇಶ್ವರ’ ದೇವಸ್ಥಾನ:ತಿರುಪತಿ ವೆಂಕಟೇಶ್ವರ’ ದೇವಸ್ಥಾನ:𝗧𝗧𝗗 ಗೆ 𝟳 ಎಕರೆ ಭೂಮಿ ಹಸ್ತಾಂತರ

ಜಾಹೀರಾತು

𝟭𝟬𝟬 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಭವ್ಯ ‘ತಿರುಪತಿ ವೆಂಕಟೇಶ್ವರ’ ದೇವಸ್ಥಾನ: 𝗧𝗧𝗗 ಗೆ 𝟳 ಎಕರೆ ಭೂಮಿ ಹಸ್ತಾಂತರ: ಟಿಟಿಡಿ ಸದಸ್ಯ ಎಸ್‌ ನರೇಶ್‌ಕುಮಾರ್

ಬೆಳಗಾವಿ‌ ಏಪ್ರಿಲ್‌ 22 : ಗಡಿಜಿಲ್ಲೆ ಬೆಳಗಾವಿ ನಗರದ ಹೊರವಲಯದಲ್ಲಿರುವ ಕೋಳಿಕೊಪ್ಪ (𝗞𝗼𝗹𝗶𝗸𝗼𝗽𝗽𝗮) ಗ್ರಾಮದ ಬೆಟ್ಟದ ಮೇಲೆ ಬರೋಬ್ಬರಿ 𝟭𝟬𝟬 ಕೋಟಿ ರೂ. (𝗥𝘀. 𝟭𝟬𝟬 𝗖𝗿𝗼𝗿𝗲) ವೆಚ್ಚದಲ್ಲಿ ಭವ್ಯವಾದ ‘ತಿರುಪತಿ ವೆಂಕಟೇಶ್ವರ ದೇವಸ್ಥಾನ’ ತಲೆ ಎತ್ತಲಿದೆ. ಈ ಬೃಹತ್ ಯೋಜನೆಗಾಗಿ ಬೆಳಗಾವಿ ರೆಡ್ಡಿ ಸಂಘದ ವತಿಯಿಂದ ತಿರುಮಲ ತಿರುಪತಿ ದೇವಸ್ಥಾನ (𝗧𝗶𝗿𝘂𝗺𝗮𝗹𝗮 𝗧𝗶𝗿𝘂𝗽𝗮𝘁𝗶 𝗗𝗲𝘃𝗮𝘀𝘁𝗵𝗮𝗻𝗮𝗺𝘀 – 𝗧𝗧𝗗) ಆಡಳಿತ ಮಂಡಳಿಗೆ 𝟳 ಎಕರೆ (𝟳 𝗔𝗰𝗿𝗲𝘀) ಭೂಮಿಯನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು.

ಕರ್ನಾಟಕ ರಾಜ್ಯ ರಡ್ಡಿ ಜನಸಂಘದ ಅಧ್ಯಕ್ಷರಾದ ಲಕ್ಷ್ಮಣ ರೆಡ್ಡಿ (𝗟𝗮𝗸𝘀𝗵𝗺𝗮𝗻𝗮 𝗥𝗲𝗱𝗱𝘆) ಹಾಗೂ ಬೆಳಗಾವಿ ರಡ್ಡಿ ಸಂಘದ ಅಧ್ಯಕ್ಷರಾದ ರಾಮಣ್ಣ ಮುಳ್ಳೂರ (𝗥𝗮𝗺𝗮𝗻𝗻𝗮 𝗠𝘂𝗹𝗹𝘂𝗿𝗮) ಅವರು 𝗧𝗧𝗗 ಆಡಳಿತ ಮಂಡಳಿ ಸದಸ್ಯರಾದ ಎಸ್. ನರೇಶ್ ಕುಮಾರ್ (𝗦. 𝗡𝗮𝗿𝗲𝘀𝗵 𝗞𝘂𝗺𝗮𝗿) ಅವರಿಗೆ ಜಮೀನಿನ ದಾಖಲೆಗಳನ್ನು ಹಸ್ತಾಂತರಿಸಿದರು.

ಮುಂದಿನ 𝟮 ವರ್ಷಗಳಲ್ಲಿ ತಿರುಮಲ ತಿರುಪತಿ ಮಾದರಿಯಲ್ಲೇ ಈ ಭವ್ಯ ದೇವಸ್ಥಾನ ನಿರ್ಮಾಣಗೊಳ್ಳಲಿದೆ. ದೇವಸ್ಥಾನದ ಜೊತೆಗೆ ತಿರುಪತಿಯಂತೆಯೇ ಭಕ್ತರಿಗೆ ವಸತಿ ಸೌಲಭ್ಯ ಹಾಗೂ ನಿರಂತರ ಅನ್ನಪ್ರಸಾದ ವಿತರಣೆಯ (𝗔𝗻𝗻𝗮 𝗣𝗿𝗮𝘀𝗮𝗱𝗮) ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದು ಟಿಟಿಡಿ ಸದಸ್ಯರಾದ ಎಸ್‌ ನರೇಶ್‌ ಕುಮಾರ್‌ ತಿಳಿಸಿದರು.

ಯೋಜನೆಯ ವೆಚ್ಚ ಮತ್ತು ಅನುದಾನದ ವಿವರ:
ದೇವಸ್ಥಾನ ನಿರ್ಮಾಣ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನಕ್ಕಾಗಿ ಟಿಟಿಡಿ ಯು ಹಣ ಮೀಸಲಿಟ್ಟಿದೆ. ಬೆಳಗಾವಿಯ ಈ ನೂತನ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಯಿಂದ ಶೇ. 𝟴𝟬 ರಷ್ಟು ಅನುದಾನ ಒದಗಿಸಲಾಗುತ್ತದೆ. ಉಳಿದಂತೆ ಬೆಳಗಾವಿ ರೆಡ್ಡಿ ಸಂಘದಿಂದ ಶೇ. 𝟭𝟬 ಮತ್ತು ದಾನಿಗಳಿಂದ ಶೇ. 𝟭𝟬 (𝟭𝟬%) ರಷ್ಟು ದೇಣಿಗೆ ಸಂಗ್ರಹಿಸಿ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಟಿಟಿಡಿ ಸದಸ್ಯರಾದ ಎಸ್‌ ನರೇಶ್‌ ಕುಮಾರ್‌ ತಿಳಿಸಿದರು


ದೇಶಾದ್ಯಂತ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ 𝗧𝗧𝗗 ಬದ್ಧವಾಗಿದೆ. ಬೆಳಗಾವಿಯಲ್ಲಿ ನಿರ್ಮಾಣವಾಗಲಿರುವ ಈ ದೇವಸ್ಥಾನವು ಈ ಭಾಗದ ಲಕ್ಷಾಂತರ ಭಕ್ತರಿಗೆ ಅನುಕೂಲವಾಗಲಿದ್ದು, ನಿಗದಿತ ಸಮಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.”
ಎಸ್. ನರೇಶ್ ಕುಮಾರ್ 𝗧𝗧𝗗 ಆಡಳಿತ ಮಂಡಳಿ ಸದಸ್ಯ.

ನಮ್ಮ ಬೆಳಗಾವಿ ಭಾಗದ ಭಕ್ತರಿಗೆ ವೆಂಕಟೇಶ್ವರನ ದರ್ಶನ ಭಾಗ್ಯವನ್ನು ಸ್ಥಳೀಯವಾಗಿಯೇ ಕಲ್ಪಿಸುವ ಉದ್ದೇಶದಿಂದ 𝟳 ಎಕರೆ ಭೂಮಿಯನ್ನು 𝗧𝗧𝗗 ಗೆ ನೀಡಿದ್ದೇವೆ. ಇದು ನಮ್ಮೆಲ್ಲರ ಸೌಭಾಗ್ಯ.”
ಲಕ್ಷ್ಮಣ ರೆಡ್ಡಿ , ಕರ್ನಾಟಕ ರಾಜ್ಯ ರಡ್ಡಿ ಜನಸಂಘದ ಅಧ್ಯಕ್ಷ.

𝗚𝗿𝗮𝗻𝗱 ‘𝗧𝗶𝗿𝘂𝗽𝗮𝘁𝗶 𝗩𝗲𝗻𝗸𝗮𝘁𝗲𝘀𝗵𝘄𝗮𝗿𝗮’ 𝗧𝗲𝗺𝗽𝗹𝗲 𝘁𝗼 𝗯𝗲 𝗖𝗼𝗻𝘀𝘁𝗿𝘂𝗰𝘁𝗲𝗱 𝗶𝗻 𝗕𝗲𝗹𝗮𝗴𝗮𝘃𝗶 𝗮𝘁 𝗮 𝗖𝗼𝘀𝘁 𝗼𝗳 𝗥𝘀. 𝟭𝟬𝟬 𝗖𝗿𝗼𝗿𝗲: 𝟳 𝗔𝗰𝗿𝗲𝘀 𝗼𝗳 𝗟𝗮𝗻𝗱 𝗛𝗮𝗻𝗱𝗲𝗱 𝗢𝘃𝗲𝗿 𝘁𝗼 𝗧𝗧𝗗: 𝗧𝗧𝗗 𝗠𝗲𝗺𝗯𝗲𝗿 𝗦. 𝗡𝗮𝗿𝗲𝘀𝗵 𝗞𝘂𝗺𝗮𝗿

𝗕𝗲𝗹𝗮𝗴𝗮𝘃𝗶, 𝗔𝗽𝗿𝗶𝗹 𝟮𝟭: A grand ‘Tirupati Venkateshwara Temple’ is set to come up atop the hill in 𝗞𝗼𝗹𝗶𝗸𝗼𝗽𝗽𝗮 village on the outskirts of the border district Belagavi city at a massive cost of 𝗥𝘀. 𝟭𝟬𝟬 𝗖𝗿𝗼𝗿𝗲. For this mega project, 𝟳 𝗔𝗰𝗿𝗲𝘀 of land was officially handed over to the Tirumala Tirupati Devasthanams (𝗧𝗧𝗗) administration board on behalf of the Belagavi Reddy Sangha.

The President of Karnataka State Reddy Janasangha, 𝗟𝗮𝗸𝘀𝗵𝗺𝗮𝗻𝗮 𝗥𝗲𝗱𝗱𝘆, and the President of Belagavi Reddy Sangha, 𝗥𝗮𝗺𝗮𝗻𝗻𝗮 𝗠𝘂𝗹𝗹𝘂𝗿𝗮, handed over the land documents to 𝗧𝗧𝗗 Administration Board Member 𝗦. 𝗡𝗮𝗿𝗲𝘀𝗵 𝗞𝘂𝗺𝗮𝗿.

This magnificent temple will be constructed exactly on the model of Tirumala Tirupati within the next 𝗧𝘄𝗼 𝗬𝗲𝗮𝗿𝘀. Along with the temple, accommodation facilities for devotees and continuous 𝗔𝗻𝗻𝗮 𝗣𝗿𝗮𝘀𝗮𝗱𝗮 (food distribution) arrangements will be provided, similar to Tirupati, informed 𝗧𝗧𝗗 Member 𝗦. 𝗡𝗮𝗿𝗲𝘀𝗵 𝗞𝘂𝗺𝗮𝗿.

𝗧𝗧𝗗 has allocated funds for temple construction, renovation, and rejuvenation across the country. 𝗧𝗧𝗗 will provide 𝟴𝟬% of the funding for the construction of this new temple in Belagavi. The remaining amount will be mobilized by collecting a 𝟭𝟬% contribution from the Belagavi Reddy Sangha and another 𝟭𝟬% through public donations to complete this ambitious project, stated 𝗧𝗧𝗗 Member 𝗦. 𝗡𝗮𝗿𝗲𝘀𝗵 𝗞𝘂𝗺𝗮𝗿.

𝗞𝗲𝘆 𝗤𝘂𝗼𝘁𝗲𝘀:
“𝗧𝗧𝗗 is committed to the development of religious centers across the country. The upcoming temple in Belagavi will immensely benefit lakhs of devotees in this region, and the construction work will be completed within the stipulated timeframe.”

𝗦. 𝗡𝗮𝗿𝗲𝘀𝗵 𝗞𝘂𝗺𝗮𝗿, 𝗧𝗧𝗗 Administration Board Member.

“With the intention of providing the devotees of our Belagavi region the divine opportunity of Lord Venkateshwara’s darshan locally, we have donated 𝟳 𝗔𝗰𝗿𝗲𝘀 of land to 𝗧𝗧𝗗. This is our collective good fortune.”

𝗟𝗮𝗸𝘀𝗵𝗺𝗮𝗻𝗮 𝗥𝗲𝗱𝗱𝘆, President, Karnataka State Reddy Janasangha.

Total Views: 0
Share This Article