ಗುಂಜಹಳ್ಳಿ ಹಿರೇನಾಗಪ್ಪ ವಾಣಿಜ್ಯ ಮಹಾವಿದ್ಯಾಲಯದಲ್ಲಿ“ವಚನ ಸಾಹಿತ್ಯದಲ್ಲಿ ವ್ಯಕ್ತಿತ್ವ ವಿಕಸನ” ಕುರಿತು ಉಪನ್ಯಾಸ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Lecture on “Personality Development in Vachana Literature” at Hirenagappa College of Commerce, Gunjahalli




ಗುಂಜಹಳ್ಳಿ ಹಿರೇನಾಗಪ್ಪ ವಾಣಿಜ್ಯ ಮಹಾವಿದ್ಯಾಲಯದಲ್ಲಿ
“ವಚನ ಸಾಹಿತ್ಯದಲ್ಲಿ ವ್ಯಕ್ತಿತ್ವ ವಿಕಸನ” ಕುರಿತು ಉಪನ್ಯಾಸ

ಜಾಹೀರಾತು

ಗಂಗಾವತಿ: ನಗರದ ಶ್ರೀ ಕೊಟ್ಟೂರೇಶ್ವರ ವಿದ್ಯಾರ‍್ದಕ ಸಂಘ (ರಿ) ದ ಗುಂಜಹಳ್ಳಿ ಹಿರೇನಾಗಪ್ಪ ವಾಣಿಜ್ಯ ಮಹಾವಿದ್ಯಾಲಯದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಗಂಗಾವತಿ ಇವರ ಸಹಯೋಗದಲ್ಲಿ, ಏಪ್ರಿಲ್‌-೧೭ ರಂದು ದತ್ತಿ ಉಪನ್ಯಾಸದ ಮೂಲಕ “ವಚನ ಸಾಹಿತ್ಯದಲ್ಲಿ ವ್ಯಕ್ತಿತ್ವ ವಿಕಸನ” ವಿಷಯದ ಕುರಿತು ವಿಶೇಷ ಉಪನ್ಯಾಸ ಕರ‍್ಯಕ್ರಮವನ್ನು ಆಯೋಜಿಸಲಾಗಿತ್ತು.
ಕರ‍್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಕೊಟ್ಟೂರೇಶ್ವರ ವಿದ್ಯಾರ‍್ಧಕ ಸಂಘ (ರಿ ) ಅಧ್ಯಕ್ಷರಾದ ಶ್ರೀ ಮ.ನಿ.ಪ್ರ. ಡಾ|| ಕೊಟ್ಟೂರು ಮಹಾಸ್ವಾಮಿಗಳು ವಹಿಸಿದ್ದರು ಹಾಗೂ ಸ್ವಾಮೀಜಿಗಳು ವಿದ್ಯರ‍್ಥಿಗಳಿಗೆ ಉತ್ತಮ ವ್ಯಕ್ತಿತ್ವವನ್ನು ನರ‍್ಮಾಣ ಮಾಡಿಕೊಳ್ಳುವ ಮೂಲಕ ಸ್ವಸ್ಥ ಸಮಾಜ ನರ‍್ಮಾಣ ಮಾಡಬೇಕೆಂದು ತಮ್ಮ ಆಶಯ ಭರಿತ ಆಶರ‍್ವಚನವನ್ನು ನೀಡಿದರು.
ಕರ‍್ಯಕ್ರಮದ ಉದ್ಘಾಟನೆಯನ್ನು ಸಂಘದ ಕರ‍್ಯರ‍್ಶಿಗಳಾದ ಶರಣೆಗೌಡ ಜಿ. ಮಾಲಿಪಾಟೀಲ್, ನೆರವೇರಿಸಿದರು. ಅವರು ವಿದ್ಯರ‍್ಥಿಗಳು ಉತ್ತಮ ವ್ಯಕ್ತಿತ್ವವನ್ನು ಹೊಂದಬೇಕೆಂದು ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕೆಂದು ಹೇಳಿದರು.
ಕರ‍್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾಧ್ಯಕ್ಷರಾದ ಶರಣೆಗೌಡ ಪೊಲೀಸ್ ಪಾಟೀಲ್ ವಹಿಸಿದ್ದರು. ಅವರು ವಿದ್ಯರ‍್ಥಿಗಳಿಗೆ ದತ್ತಿ ಉಪನ್ಯಾಸದ ಮಹತ್ವವನ್ನು ತಿಳಿಸಿದರು ಹಾಗೂ ವಚನಗಳ ಮೂಲಕ ನಮ್ಮ ವ್ಯಕ್ತಿತ್ವವನ್ನು ನರ‍್ಮಿಸಿಕೊಳ್ಳಬೇಕೆಂದು ಹೇಳಿದರು.
ಕರ‍್ಯಕ್ರಮದ ವಿಶೇಷ ಉಪನ್ಯಾಸವನ್ನು ಕನ್ನಡ ಉಪನ್ಯಾಸಕರಾದ ಪವನಕುಮಾರ್ ಗುಂಡೂರ್ ರವರು ನೀಡಿ, ಇಂದಿನ ಯುವಕರು ವಚನಗಳ ಅಧ್ಯಯನದ ಮೂಲಕ ಉತ್ತಮ ವ್ಯಕ್ತಿತ್ವವನ್ನು ಹೊಂದಿ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕೆಂದು ವಿವರಿಸಿದರು. ಉತ್ತಮ ವ್ಯಕ್ತಿತ್ವ ದೇಶಕ್ಕೆ, ಸಮಾಜಕ್ಕೆ ಹಾಗೂ ಕುಟುಂಬಕ್ಕೆ ಅಡಿಪಾಯ ಎಂದು ತಿಳಿಸಿಕೊಟ್ಟರು.
ಕರ‍್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಗಂಗಾವತಿ ತಾಲೂಕ ಅಧ್ಯಕ್ಷರಾದ ರುದ್ರೇಶ್ ರ‍್ಹಾಳ ನಡೆಸಿಕೊಟ್ಟರು. ವೇದಿಕೆ ಮೇಲೆ ವಿವಿಧ ಶಾಲಾ ಕಾಲೇಜಿನ ಮುಖ್ಯಸ್ಥರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.
ಕರ‍್ಯಕ್ರಮದ ನಿರೂಪಣೆಯನ್ನು ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಶ್ರೀಮತಿ ನೀಲಮ್ಮ ನಡೆಸಿಕೊಟ್ಟರು. ಸ್ವಾಗತವನ್ನು ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಜಯಲಕ್ಷ್ಮಿ ನೆರವೇರಿಸಿದರೆ, ವಂದನರ‍್ಪಣೆಯನ್ನು ರಮೇಶ್ ಕುಲರ‍್ಣಿ ಇವರು ನಡೆಸಿಕೊಟ್ಟರು.
ಕರ‍್ಯಕ್ರಮದಲ್ಲಿ ಕಾಲೇಜಿನ ಬೋಧಕ ರ‍್ಗ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯರ‍್ಥಿಗಳು ಭಾಗವಹಿಸಿ ಕರ‍್ಯಕ್ರಮವನ್ನು ಯಶಸ್ವಿಗೊಳಿಸಿದರು.

Total Views: 0
Share This Article