ಸೋಶಿಯಲ್ ಮೀಡಿಯಾ ಪ್ರಭಾವದ ನಡುವೆ ಮೌಲ್ಯಗಳತ್ತ ಗಮನ ಸೆಳೆದ ‘ಹರಿವು’ ಸಿನಿಮಾ ಪ್ರದರ್ಶನ!

H.Mallikarjun
H.Mallikarjun - Kalyanasiri
2 Min Read
ಜಾಹೀರಾತು





Harivu' cinema screening draws attention to values amid social media influence!

ಸೋಶಿಯಲ್ ಮೀಡಿಯಾ ಪ್ರಭಾವದ ನಡುವೆ ಮೌಲ್ಯಗಳತ್ತ ಗಮನ ಸೆಳೆದ ‘ಹರಿವು’ ಸಿನಿಮಾ ಪ್ರದರ್ಶನ!

ಜಾಹೀರಾತು

  ಕೊಪ್ಪಳ:   ಪ್ರೋಗ್ರೆಸ್ಸಿವ್ ಕಲ್ಚರಲ್ ಅಸೋಸಿಯೇಷನ್ ಆಫ್ ಇಂಡಿಯಾ (PCAI) ವತಿಯಿಂದ ನಗರದ ನವೋದಯ ಎಜುಕೇಷನ್ ಸೊಸೈಟಿಯಲ್ಲಿ ಭಾನುವಾರ ‘ಹರಿವು’ ಸಿನಿಮಾ ಪ್ರದರ್ಶನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುಶೀಲ್ ಕುಮಾರ್ ಕಲಾಲ್ ಅವರು, PCAI ವೇದಿಕೆ ಸಿನಿಮಾದ ಮೂಲಕ ಸಾಮಾಜಿಕ ಬದಲಾವಣೆ ತರಬಹುದಾದ ಮಹತ್ವದ ಸಾಂಸ್ಕೃತಿಕ ಮಾಧ್ಯಮವಾಗಿದೆ ಎಂದು ಹೇಳಿದರು. ಇಂತಹ ಅರ್ಥಪೂರ್ಣ ಸಿನಿಮಾಗಳು ಶಾಲೆ-ಕಾಲೇಜುಗಳು ಹಾಗೂ ಹಳ್ಳಿಗಳಿಗೂ ತಲುಪಬೇಕು. ಯುವಜನರು ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಂಡು, ವೈಚಾರಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಅತಿಥಿಗಳಾಗಿ ಧಾರವಾಡದ ಜನಜಾಗೃತಿ ವೇದಿಕೆಯ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ ಅವರು ಮಾತನಾಡಿ, ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಯುವಕರು ಜೀವನದ ದಿಕ್ಕು ಮತ್ತು ಆದರ್ಶಗಳ ಕುರಿತು ಗೊಂದಲದಲ್ಲಿದ್ದಾರೆ. ಸೋಶಿಯಲ್ ಮೀಡಿಯಾ ಹಾಗೂ ಅಶ್ಲೀಲತೆಗೆ ಒತ್ತು ನೀಡುವ ಕೆಲವು ವಿಷಯಗಳು ಯುವಕರನ್ನು ದಾರಿ ತಪ್ಪಿಸುತ್ತಿವೆ. ಇದರ ಪರಿಣಾಮವಾಗಿ ಮಾನವೀಯ ಮೌಲ್ಯಗಳು ಮಸುಕಾಗುತ್ತಿವೆ ಎಂದು ಹೇಳಿದರು. ಮೊಬೈಲ್‌ಗಳ ಅತಿಯಾದ ಬಳಕೆಯಿಂದ ಕುಟುಂಬ ಮತ್ತು ಸಾಮಾಜಿಕ ಸಂಬಂಧಗಳು ದುರ್ಬಲವಾಗುತ್ತಿವೆ. ಯುವಕರು ಅಧ್ಯಯನ ಹಾಗೂ ಸಕಾರಾತ್ಮಕ ಚಟುವಟಿಕೆಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಹಿರಿಯ ಸಾಹಿತಿ ಮಹಾಂತೇಶ್ ಮಲ್ಲನಗೌಡರ್ ಮಾತನಾಡಿ, ಸಾಂಸ್ಕೃತಿಕ ಮಾಲಿನ್ಯ ಹೆಚ್ಚಾಗಿ ಕೀಳುಮಟ್ಟದ ಪ್ರಭಾವಗಳು ಸಮಾಜದಲ್ಲಿ ಹೆಚ್ಚಾಗುತ್ತಿವೆ. ಇದಕ್ಕೆ ಪರ್ಯಾಯವಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹೋರಾಟ ಅಗತ್ಯವಿದೆ. PCAI ವೇದಿಕೆ ಈ ದಿಕ್ಕಿನಲ್ಲಿ ಉತ್ತಮ ಪ್ರಯತ್ನ ಮಾಡುತ್ತಿದ್ದು, ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶರಣು ಪಾಟೀಲ್, ಸಮಾಜದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕುಸಂಸ್ಕೃತಿಗೆ ಪರ್ಯಾಯವಾಗಿ ಉತ್ತಮ ವಾತಾವರಣ ನಿರ್ಮಿಸಲು ಈ ವೇದಿಕೆ ಪ್ರಯತ್ನಿಸುತ್ತಿದೆ. ಈ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ್, ಬಿ.ಎಂ. ಬಡಿಗೇರ್, ಬಸವರಾಜ್ ಶೀಲವಂತರ ಧರ್ಮರಾಜ್ ಗೋನಾಳ್, ಗೌರಿ ಗೋನಾಳ್, ಎರಿಸ್ವಾಮಿ,  ಶರಣು ಗಡ್ಡಿ, ಆರ್.ವಿ. ಕಾಮನೂರ, ದೇವರಾಜ ಹೊಸಮನಿ, ಸುಭಾನಸಾಬ್, ಈರಮ್ಮ  ಕೊಪ್ಪಳ, ನೀರಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸುಮಾರು 40 ಮಂದಿ ಮಹಿಳೆಯರು, ಮಕ್ಕಳು ಹಾಗೂ ಯುವಕರು ಭಾಗವಹಿಸಿ ಸಿನಿಮಾ ವೀಕ್ಷಿಸಿದರು..

Total Views: 1
Share This Article