ಜಿಲ್ಲೆಯಿಂದ ಗ್ರಾಮೀಣ ಪ್ರತಿಭಾವಂತ ಮಕ್ಕಳುಸಿಬಿಎಸ್ಇ ಗೆ ಆಯ್ಕೆ ಸಂತಸ ತಂದಿದೆ: ಕೆ.ಮಧುಸೂದನ್

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

The selection of talented rural children from the district to CBSE has brought me happiness: K. Madhusudan

ಜಿಲ್ಲೆಯಿಂದ ಗ್ರಾಮೀಣ ಪ್ರತಿಭಾವಂತ ಮಕ್ಕಳು
ಸಿಬಿಎಸ್ಇ ಗೆ ಆಯ್ಕೆ ಸಂತಸ ತಂದಿದೆ: ಕೆ.ಮಧುಸೂದನ್

ಜಾಹೀರಾತು

ಗಂಗಾವತಿ: ಗಂಗಾವತಿ ವಿಧಾನ ಸಭಾ ಕ್ಷೇತ್ರದ ಇಂದರಗಿ ಗ್ರಾಮದ ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗದ ಮಕ್ಕಳು ಹೆಚ್ಚಾಗಿ ಬಡತನದಲ್ಲಿ ಇರುತ್ತಾರೆ, ಈಗಿನ ಕಮರ್ಷಿಯಲ್ ವಿದ್ಯಾಭ್ಯಾಸದಲ್ಲಿ ಓದಿಸಲಾಗದೆ ಕಷ್ಟ ಅನುಭವಿಸುತ್ತಾರೆ ಆದರೆ ಕೊಪ್ಪಳ ತಾಲೂಕಿನ ಬೂದುಗುಂಪ ಗ್ರಾಮದಲ್ಲಿರುವ ಡಾ:ರಾಧಾಕೃಷ್ಣನ್ ಪಬ್ಲಿಕ್ ಸ್ಕೂಲ್ ಶಾಲೆಯ ಮಕ್ಕಳು ಈ ಬಾರಿ 2026-27ನೇ ಸಾಲಿನಲ್ಲಿ ಭಾರತ ಸರ್ಕಾರದ ಸಿಬಿಎಸ್ಇ ಪ್ರತಿಷ್ಠಿತ ಶಾಲೆಗಳಾದ ಏಕಲವ್ಯ ಮಾದರಿ ವಸತಿ ಶಾಲೆಗೆ ಪರೀಕ್ಷೆಯನ್ನು ಬರೆಯುವ ಮೂಲಕ ಆಯ್ಕೆಯಾಗಿ ಯಶಸ್ಸಿನ ಮೆಟ್ಟಿಲು ಹತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಾದ ಅಶ್ವಿನಿ ಪೂಜಾರ್ ಮುಕ್ಕುಂಪಿ ಈ ವಿದ್ಯಾರ್ಥಿನಿ ಮೈಸೂರು ಜಿಲ್ಲೆಯ ಏಕಲವ್ಯ ಮಾದರಿ ವಸತಿ ಶಾಲೆ ಸೊಳ್ಳೆಪುರ ಶಾಲೆಗೆ ಆಯ್ಕೆಯಾಗಿದ್ದಾಳೆ,

ಅದರಂತೆ ಪ್ರಮೀಳಾ ಜಿರಾಳ ಹಳೆಕುಮ್ಮಟಾ ಈ ವಿದ್ಯಾರ್ಥಿನಿ ಚಾಮರಾಜನಗರ ಜಿಲ್ಲೆಯ ಏಕಲವ್ಯ ಮಾದರಿ ವಸತಿ ಮಂಗಳ ಶಾಲೆಗೆ ಆಯ್ಕೆಯಾಗಿದ್ದು ಈ ಭಾಗದ ವಿದ್ಯಾರ್ಥಿಗಳಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದ್ದಾರೆ, ವಿದ್ಯ ಕಲಿಯುವಂತೆ ಆಸಕ್ತಿಯಿಂದ ಹಿಂದೆಜರಿಯದಾಗಿ ಮುಂದೆ ನುಗ್ಗುವ ಧೈರ್ಯವನ್ನು ಈ ವಿದ್ಯಾರ್ಥಿಗಳು ಮಾಡಿದ್ದಾರೆ .

ಇವರ ಆಯ್ಕೆಗೆ ಕೋಚ್ ನೀಡಿದ ರಾಧಾಕೃಷ್ಣನ್ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಕೆ.ಮಧುಸೂದನ್ ಡೊಳ್ಳಿನವರು ಹರ್ಷ ವ್ಯಕ್ತಪಡಿಸಿದ್ದಾರೆ.

ಹಾಗೂ ನವೋದಯ ಮಾದರಿಯ ಭಾರತ ಸರ್ಕಾರದ ಪ್ರತಿಷ್ಠಿತ ಸಿಬಿಎಸ್ಇ ಪಠ್ಯಕ್ರಮ ಶಾಲೆಗೆ ನಮ್ಮ ಜಿಲ್ಲೆಯಿಂದ ನಮ್ಮ ಶಾಲೆಯ ಪ್ರತಿಭಾವಂತ ಮಕ್ಕಳು ಆಯ್ಕೆಯಾಗಿದ್ದು ಹೆಮ್ಮೆಯ ವಿಚಾರ, ಮಕ್ಕಳಿಗೆ ಶಾಲೆಯ ಎಲ್ಲಾ ಶಿಕ್ಷಕರು, ಮುದ್ದು ಮಕ್ಕಳು, ಪೋಷಕರು,ಗ್ರಾಮದ ಗ್ರಾಮಸ್ಥರು ಅಭಿನಂದನೆಗಳು ಸಲ್ಲಿಸಿದ್ದಾರೆ.

Total Views: 0
Share This Article