ಭೋಧಕರ ಸಾಮರ್ಥ್ಯಾಭಿವೃದ್ಧಿ ಕಮ್ಮಟ (FDP)ಯಶಸ್ವಿ- ಪ್ರೊ.ಕರಿಗೂಳಿ 

H.Mallikarjun
H.Mallikarjun - Kalyanasiri
3 Min Read
ಜಾಹೀರಾತು

Faculty Development Programme (FDP) successful - Prof. Kariguli




ಶ್ರೀರಾಮನಗರದ ಸಿ ಎನ್ ಆರ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ದಿನದ ರಾಜ್ಯಮಟ್ಟದ ಭೋಧಕರ ಸಾಮರ್ಥ್ಯಾಭಿವೃದ್ಧಿ ಕಮ್ಮಟ (FDP)ಯಶಸ್ವಿ- ಪ್ರೊ.ಕರಿಗೂಳಿ

ಜಾಹೀರಾತು

ಶ್ರೀರಾಮನಗರ : ಆಂತರಿಕ ಗುಣಮಟ್ಟ ಭರವಸೆ ಕೋಶ(IQAC)ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ರಾಜ್ಯಮಟ್ಟದ ಅಧ್ಯಾಪಕ ಭೋಧನಾ ಸಾಮರ್ಥ್ಯಾಭಿವೃದ್ಧಿ ಕಮ್ಮಟ (FDP) ಯಶಸ್ವಿಯಾಗಿ ಜರುಗಿತು, ಕಾರ್ಯಕ್ರಮಕ್ಕೆ ಕಾಲೇಜು ಶಿಕ್ಷಣ ಇಲಾಖೆ ಬೆಂಗಳೂರು ಕೇಂದ್ರ ಕಚೇರಿಯಿಂದ ಆನ್ಲೈನ್ ಮೂಲಕ ಚಾಲನೆ ನೀಡಿ ಆಶಯನುಡಿಯನ್ನು ನಿರ್ದೇಶಕರಾದ
ಡಾ.ಶೋಭಾ.ಜಿ ರವರು ಮಾತನಾಡುತ್ತಾ,

ಈ ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಅಧ್ಯಾಪಕರ ಸರ್ವಾoಗೀಣ ಭೋಧನಾ ಸಾಮರ್ಥ್ಯ ಹೆಚ್ಚಿಸುವ ಅವಶ್ಯಕತೆ ಇದ್ದು, ಹೊಸ ತಲೆಮಾರಿನ (Gen-Z) ವಿದ್ಯಾರ್ಥಿಗಳ ನಿರೀಕ್ಷೆಗೆ ಅನುಗುಣವಾಗಿ ಭೋಧಿಸಲೇಬೇಕಾಗಿದ್ದು, ಇದಕ್ಕೆ ಪೂರಕವಾದ ಕಾರ್ಯಕ್ರಮ ರೂಪಿಸಿದ್ದು ಶ್ಲಾಘನೀಯ ಎಂದರು,ಇದೇ ಸಂಧರ್ಭದಲ್ಲಿ ಕಾಲೇಜಿನ ವೆಬ್ಸೈಟನ್ನು ಆನ್ಲೈನ್ ನಲ್ಲಿ ಲಿಂಕ್ ಒತ್ತಿ ಲೋಕಾರ್ಪಣೆ ಮಾಡಿದರು,

ತಂತ್ರಜ್ಞಾವನ್ನು ಸಮರ್ಥವಾಗಿ ಬಳಸಿಕೊಂಡು ಇಲಾಖೆ ನೀಡಿದ ಸಲಕರಣೆಗಳನ್ನು ಸದ್ಬಳಕೆ ಮಾಡಿಕೊಂಡು ಒಂದು ಗ್ರಾಮೀಣ ಕಾಲೇಜು ತನ್ನ ವೆಬ್ಸೈಟ್ ಹೊಂದುತ್ತಿರುವುದು ರಾಜ್ಯದಲ್ಲಿ ಮಾದರಿಯ ಶೈಕ್ಷಣಿಕ ನಡೆ ಎಂದರು. ರಾಜ್ಯ ಗುಣಮಟ್ಟ ಭರವಸೆ ಕೋಶದ (ಎಸ್ಕ್ಯೂಎಸಿ ) ನೋಡಲ್ ಅಧಿಕಾರಿಯಾದ
ಡಾ.ವಿಕ್ರಂ ರವರು ಆನ್ಲೈನ್ ಮೂಲಕ ಕಾಲೇಜಿನ ಪ್ರವೇಶಾತಿ ಅಭಿಯಾನ 2026-27 ರ ಪೋಸ್ಟರ್ ಬಿಡುಗಡೆ ಮಾಡಿ ಶುಭಕೋರಿದರು ಈ ಮೂಲಕ ಚಾಲನೆಗೊಂಡ ಕಾರ್ಯಕ್ರಮವನ್ನು ಕಾಲೇಜಿನ ಭೂದಾನಿಗಳಾದ
ಶ್ರೀ ಚಿಲುಕೂರಿ ವೆಂಕಟರಾಮಕೃಷ್ಣರವರು ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದರು,ಕಾಲೇಜು ಸದಾ ಬೆಳೆಯುತ್ತಿರಲಿ ಈ ಭಾಗದ ಮಕ್ಕಳಿಗೆ ಉಪಯೋಗವಾಗಲಿ ಎಂದು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷರಾದ
ಶ್ರೀ ರೆಡ್ಡಿಶ್ರೀನಿವಾಸ ರವರು ಮಾತನಾಡಿ ಅಧ್ಯಾಪಕರು ಉತ್ತಮವಾದ ಜ್ಞಾನವನ್ನು ಮಕ್ಕಳಿಗೆ ನೀಡಿದಾಗ ಮಾತ್ರ ಕಾಲೇಜು ಅಭಿವೃದ್ದಿ ಸಾಧ್ಯ, ನಮ್ಮ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಶ್ರಮಿಸುತ್ತಾ, ಹೊಸ ಬೆಳವಣಿಗೆಗಳನ್ನು ಅಧ್ಯಾಪಕರು ಕೂಡ ಕಲಿಯುವ ಅವಕಾಶವನ್ನು ಕಲ್ಪಿಸಿಕೊಂದಿರುವುದು ಸಂತಸದ ಸಂಗತಿ, ಕಾಲೇಜಿನ ಅಭಿವೃದ್ದಿಗೆ ಎಲ್ಲಾ ರೀತಿಯ ಸಹಕಾರ ನಾವು ನೀಡುತ್ತೇವೆ ಎಂದು ತಿಳಿಸಿದರು,

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಡಾ.ಸರ್ಫರಾಜ್ ಅಹ್ಮದ್ ರವರು ಅಧ್ಯಾಪಕ ಅಭಿವೃದ್ದಿ ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರಳಾದೇವಿ ಕಾಲೇಜು ಬಳ್ಳಾರಿಯ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ.ಹೊನ್ನುರಲಿ ಮಾತನಾಡಿ, ಮಹಾನಗರಗಳಲ್ಲಿ ಮಾತ್ರ ಸಾಧ್ಯವೇನೋ ಎಂಬ ಕಾರ್ಯಕ್ರಮಗಳನ್ನು ಗ್ರಾಮೀಣ ಕಾಲೇಜಿನಲ್ಲಿ ಮಾಡಿದ ಪ್ರಾಚಾರ್ಯರು ಹಾಗೂ ಅಧ್ಯಾಪಕರ ಮೆಚ್ಚುವಂತದ್ದು ಎಂದರು,

ಬಳ್ಳಾರಿ ಸಿಟಿ ಕಾಲೇಜು ಪ್ರಾಚಾರ್ಯರಾದ ಡಾ.ರಾಮಕೃಷ್ಣರವರು ಮಾತನಾಡಿ, ನಾವು ಬೆಳೆಯಬೇಕಾದರೆ ಬದಲಾಗುತ್ತಿರುವ ಕಾಲದೊಂದಿಗೆ ನಾವು ಬದಲಾಗಬೇಕು ಎಂಬ ಆಶಯಕ್ಕೆ ಈ ಕಮ್ಮಟ ಪ್ರಸ್ತುತವಾಗಿದೆ ಎಂದರು. ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ಬಳ್ಳಾರಿ ವಿವಿ ಯ ಇಂಗ್ಲಿಷ್ ಪ್ರಧ್ಯಾಪಕರಾದ ಡಾ.ರಾಬರ್ಟ್ ಜೋಸ್ ರವರು ಆಗಮಿಸಿದ್ದರು. ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯ( IKS)ನ್ನು ತಿಳಿಯುವಲ್ಲಿ ವ್ಯಕ್ತಿಯ ಪಾತ್ರದ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಬಗೆಯನ್ನು ಕುರಿತು ಮಾತನಾಡಿದರು ಮತ್ತು ಇನ್ನೊರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಹರಿ ಕೆ.ಎಸ್ , ನಿವೃತ್ತ ಜಿಲ್ಲಾ ಖಜಾನೆ ಅಧಿಕಾರಿಗಳು ರವರು ಕೆಸಿಎಸ್ ಆರ್ ನಿಯಮಗಳು ಮತ್ತು ಡಿ ಡಿ ಓ ನಿಯಮಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕರಿಗೂಳಿಯವರು ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಜ್ಞಾನಾಭಿವೃದ್ದಿಯಲ್ಲಿ ಅಧ್ಯಾಪಕರ ಪಾತ್ರ ಅಮೂಲ್ಯ, ಅಧ್ಯಾಪಕರು ನಿರಂತರ ಅಧ್ಯಯನ ಹಾಗೂ ಕಾಲಕಾಲಕ್ಕೆ ನಿರಂತರ ತರಬೇತಿಗಳನ್ನು ಪಡೆದುಕೊಂಡಲ್ಲಿ ಮಾತ್ರ ಹೊಸ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲು ಹೊಸ ದಾರಿಗಳನ್ನು ಸೃಷ್ಟಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮ ದಲ್ಲಿ ಬಳ್ಳಾರಿ ಮತ್ತು ಕೊಪ್ಪಳ ವಿಶ್ವವಿದ್ಯಾಲಯದ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು ಮತ್ತು ಶ್ರೀರಾಮನಗರ ಗಣ್ಯಮಾನ್ಯರು,ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿವಿಧ ಘಟಕಗಳ ವಿದ್ಯಾರ್ಥಿ ಸ್ವಯಂ ಸೇವಕ ತಂಡದ ಎಲ್ಲಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.
ಹಾಜರಾದ ಎಲ್ಲಾ ಅಧ್ಯಾಪಕರಿಗೆ ಹಾಜರಾತಿ ಪತ್ರ ಹಾಗೂ ಪ್ರಮಾಣಪತ್ರ ನೀಡಲಾಯಿತು, ಕಾಲೇಜಿನ ಯುಟ್ಯೂಬ್ ಚಾನಲ್ ಮೂಲಕ ಇಡೀ ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಎಂದು ಕಾಲೇಜಿನ ಪ್ರಾಚಾರ್ಯರು ಪ್ರಕಟಣೆಗೆ ತಿಳಿಸಿದರು.

Total Views: 0
Share This Article