ಅಂಬೇಡ್ಕರ್ ಜಯಂತ್ಯುತ್ಸವ; ಜಿಲ್ಲಾಡಳಿತ ಭವನದಅಂಗಳದಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆ ಅನಾವರಣ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Ambedkar Jayanti; Preamble of the Constitution of India unveiled in the courtyard of the District Administration Building




ಅಂಬೇಡ್ಕರ್ ಜಯಂತ್ಯುತ್ಸವ; ಜಿಲ್ಲಾಡಳಿತ ಭವನದ
ಅಂಗಳದಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆ ಅನಾವರಣ

ಜಾಹೀರಾತು


ಕೊಪ್ಪಳ ಏಪ್ರೀಲ್ 14 (ಕ.ವಾ.): ಡಾ.ಬಿ ಆರ್ ಅಂಬೇಡ್ಕರ ಅವರ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ಭವನ ಅಂಗಳದಲ್ಲಿ ಶಿಲೆಯಲ್ಲಿ ನಿರ್ಮಿಸಿದ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಸಂಸದರಾದ ರಾಜಶೇಖರ ಹಿಟ್ನಾಳ ಹಾಗೂ ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ ಅವರು ಏಪ್ರಿಲ್ 14ರಂದು ಅನಾವರಣಗೊಳಿಸಿದರು.
ಬೆಳಗ್ಗೆ ಶಿವಶಾಂತವೀರ ನಗರದ ಉದ್ಯಾನ ವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ನೇರವಾಗಿ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಎಲ್ ಅರಸಿದ್ದಿ, ಜಿಲ್ಲಾ ಪಂಚಾಯತ್ ಸಿಇಓ ವರ್ಣಿತ್ ನೇಗಿ ಅವರು, ಕಲ್ಲಿನಲ್ಲಿ ಕೆತ್ತಿದ ಭಾರತದ ಸಂವಿಧಾನದ ಪ್ರಸ್ತಾವನೆಗೆ ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಟಿ., ನಗರಸಭೆ ಪೌರಾಯುಕ್ತರಾದ ವೆಂಕಟೇಶ ನಾಗನೂರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಅಜ್ಜಪ್ಪ ಸೊಗಲದ, ತಹಸೀಲ್ದಾರ ಬಸವರಾಜ ತನ್ನಳ್ಳಿ, ತಾಪಂ ಇಓ ದುಂಡಪ್ಪ ತುರಾದಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ನಾಗರತ್ನ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಜಗದೀಶ್, ವಾರ್ತಾಧಿಕಾರಿ ಗವಿಸಿದ್ದಪ್ಪ ಹಾಗು ಇನ್ನೀತರ ಇಲಾಖೆಯ ಅಧಿಕಾರಿಗಳು ಮತ್ತು ವಲವಾದಿ ಸಮುದಾಯದ ಅಧ್ಯಕ್ಷರಾದ ಸಿದ್ದರಾಮ ಹೊಸಮನಿ, ಸಮುದಾಯದ ಮುಖಂಡರಾದ ನಾಗರಾಜ ಬೆಲ್ಲದ, ಗವಿಸಿದ್ದಪ್ಪ ಬೆಲ್ಲದ, ಶಾಂತಕುಮಾರ, ಸಿದ್ದು ಮ್ಯಾಗೇರಿ, ಅಜಯ ದೊಡ್ಡಮನಿ, ಮಂಜುನಾಥ ದೊಡ್ಡಮನಿ, ಮುತ್ತು ಕುಷ್ಟಗಿ, ಪ್ರಭು ಬೆಲ್ಲದ, ಸತೀಶ ಬಣ್ಣಿಕೊಪ್ಪ, ಮಹಾಂತೇಶ ಚಾಕ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Total Views: 0
Share This Article