ವಿಶ್ವ ಆರೋಗ್ಯ ದಿನದ ಅಂಗವಾಗಿ ಮಧು ಮಂಥನ – ಮಧುರ ಚಿಂತನ ಕಾರ್ಯಕ್ರಮ : ಪ್ರೊ. ಕರಿಗೂಳಿ

Mallikarjun
2 Min Read
ಜಾಹೀರಾತು

Madhu Manthan – Madhura Chinthan program as part of World Health Day: Prof. Kariguli


ಜಾಹೀರಾತು

ವಿಶ್ವ ಆರೋಗ್ಯ ದಿನದ ಅಂಗವಾಗಿ ಮಧು ಮಂಥನ – ಮಧುರ ಚಿಂತನ ಕಾರ್ಯಕ್ರಮ : ಪ್ರೊ. ಕರಿಗೂಳಿ


ಗಂಗಾವತಿ: ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶನದಂತೆ, ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ
ದಿನಾಂಕ- 7-4-2026 ರಿಂದ 11-04-2026 ರವರೆಗೆ ವಿದ್ಯಾರ್ಥಿಗಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ಆರೋಗ್ಯ ದಿನಾಚರಣೆ, ನಾಡಿನ ಖ್ಯಾತ ಮನೋವೈದ್ಯರಾದ ಪದ್ಮಶ್ರೀ ಡಾ. ಸಿ ಆರ್ ಚಂದ್ರಶೇಖರ ರವರಿಂದ ಆನ್ಲೈನ್ ಕಾರ್ಯಕ್ರಮ ವೀಕ್ಷಣೆ, ಪರೀಕ್ಷೆ: ಆತಂಕಬೇಡ ಹಬ್ಬದಂತೆ ಸಂಭ್ರಮಿಸಿ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿoದ ಪ್ರಬಂಧ,ಭಾಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಕಾಲೇಜು ಆವರಣ ಸ್ವಚ್ಛಗೊಳಿಸಲಾಯಿತು, ಹಾಗೂ Gadget free Hour– ಮೊಬೈಲ್ ರಹಿತ ಎರಡು ತಾಸು ಎಂಬ ಕಾರ್ಯಕ್ರಮ ಮಾಡಲಾಯಿತು, ಸಮಾರೋಪದ ದಿನವಾದ ಇಂದು ರಾಷ್ಟ್ರೀಯ ಸೇವಾ ಯೋಜನೆ ಮತ್ತು ಪ್ಲೇಸ್ಮೆಂಟ್ ಸೆಲ್ ಹಾಗೂ ಗ್ರಾಮ ಪಂಚಾಯತಿ ಶ್ರೀರಾಮನಗರ ಸಹಯೋಗದೊಂದಿಗೆ ಕಾಲೇಜು ಸ್ವಚ್ಛಗೊಳಿಸುತ್ತಾ ಹಾಗೂ ಪರಿಸರ ಸಮತೋಲನದಲ್ಲಿ ಜೇನುಹುಳುವಿನ ಪಾತ್ರ ಮತ್ತು ವಿದ್ಯಾರ್ಥಿಗಳಿಗೆ ಜೇನುಕೃಷಿಯ ಉದ್ಯೋಗವಕಾಶ ಜಾಗೃತಿ ಮೂಡಿಸುವ ಮಧು ಮಂಥನ- ಮಧುರ ಚಿಂತನ ಎಂಬ ಜೇನುಹುಳು -ಪರಿಸರ- ಮನುಷ್ಯ ಮತ್ತು ಆರೋಗ್ಯಕ್ಕೆ ಸಂಬಂದಿಸಿದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕರಿಗೂಳಿಯವರು ಇಂದಿನ ಪರಿಸರ ಸಮತೋಲನದಲ್ಲಿ, ಜೇನುಹುಳುವಿನ ವಿಸ್ಮಯವೇ ಕಾರಣ ಎಂದರು, ಜೇನಿಲ್ಲದೇ ಜೀವನವಿಲ್ಲ, ಜೇನುಕೃಷಿ ಯುವಕರ ಮನುಷ್ಯನ ಜೀವನಕ್ಕೆ ಉದ್ಯೋಗಮಿತ್ರ, ಸರ್ವವಿಧದ ಜೇನುಹುಳು ವಾಸಿಸುವ ವಿಶ್ವದ ಏಕೈಕ ರಾಷ್ಟ್ರವಾದ ಭಾರತ ಎಂಬುದು ದೇಶದ ಮೇಲಿನ ಅಭಿಮಾನವನ್ನು ಹೆಚ್ಚುಸತ್ತದೆ ಹಾಗೂ ಈ ವಿಸ್ಮಯದಿಂದಲೂ ಭಾರತವು ಚಿರಮಧುರ ದೇಶವಾಗಿದೆ ಎಂದರು.
ಇಂದಿನ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ.ಬದರಿಪ್ರಸಾದ ಪಿ ಆರ್ ಸಹಪ್ರಾಧ್ಯಾಪಕರು ಕೃಷಿ ಕೀಟಶಾಸ್ತ್ರ ವಿಭಾಗ ,ಕೃಷಿ ಮಹಾವಿದ್ಯಾಲಯ ಗಂಗಾವತಿ ರವರು ಮಾತನಾಡಿ ಜೇನು ಹುಳಗಳಿಂದಾಗುವ ಅನುಕೂಲತೆಗಳು,ಜೇನುಹುಳಗಳ ವಿಧಗಳು,ಸಂತಾನೋತ್ಪತ್ತಿ, ಆಹಾರ ಸಿದ್ದತೆ,ಅವುಗಳ ಕಾರ್ಯಗಳು,ಜೇನು ಸಾಕಾಣಿಕೆಯ ವಿಧಾನ ಅವುಗಳಿಂದ ನಾವು ಹೇಗೆ ಸ್ವಾವಲಂಬನೆ ಜೀವನ ಕಟ್ಟಿಕೊಳ್ಳಬಹುದು,ಮನುಷ್ಯನ ಆರೋಗ್ಯಕ್ಕೆ ಜೇನು ತುಪ್ಪದ ಮಹತ್ವಗಳ ಕುರಿತು ಸುಧಿರ್ಘವಾಗಿ ವಿವರಿಸಿದರು, ಇಂದಿನ ಕಾರ್ಯಕ್ರದಲ್ಲಿ ಪ್ರಾಸ್ತಾವಿಕ ನುಡಿಯನ್ನು ಪ್ಲೇಸ್ ಮೆಂಟ್ ಸೆಲ್ ನ ಸಂಚಾಲಕರಾದ ಶ್ರೀ ಶಂಕರಪ್ಪ ಎಮ್ ರವರು ಮಾತನಾಡಿದರು,ರಾಷ್ಟೀಯ ಸೇವಾ ಯೋಜನೆಯ ಸಂಯೋಜಕರಾದ ಶ್ರೀ ವೀರೇಶ ರವರು ವಂದನಾರ್ಪಣೆ ಮಾಡಿದರು, ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕರಾದ ಡಾ.ಸರ್ಫರಾಜ್ ಅಹ್ಮದ, ಡಾ.ಶಶಿಕುಮಾರ, ಮತ್ತು ಅತಿಥಿ ಉಪನ್ಯಾಸಕರಾದ ವೆಂಕಟರಾಜು,ಬಾಲಚಂದ್ರ,ಸಾಯಿಕುಮಾರ,ವೀರೇಶ,ದೇವರಾಜ,. ಅಯ್ಯಪ್ಪ,ಈಶಪ್ಪ,ಪೇನಜಾ ,ಸುರೇಶಗೌಡ ಹಾಗೂ ಕಚೇರಿ ಸಿಬ್ಬಂದಿಗಳಾದ,ವಿನಾಯಕ,ಶಾಂತಿ ಶರಣ, ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಸಕ್ರಿಯವಾಗಿ ಭಾಗವಹಿಸಿದ್ದರು.

Total Views: 0
Share This Article